ಚಿತ್ರಲೋಕಸಭಾ: ಇರುವರ್

ಚಿತ್ರ: ಇರುವರ್ (1997), ತಾರಾಗಣ: ಮೋಹನ್ ಲಾಲ್,
ಐಶ್ವರ್ಯಾ ರೈ, ಪ್ರಕಾಶ್ ರೈ, ನಿರ್ದೇಶನ: ಮಣಿರತ್ನಂ
ಭಾರತೀಯ ಚಿತ್ರರಂಗ ಕಂಡ ಮಹೋನ್ನತ ನಿರ್ದೇಶಕರಲ್ಲಿ ಮಣಿರತ್ನಂ ಕೂಡಾ ಒಬ್ಬರು. ತಮ್ಮ ವಿಭಿನ್ನ ಚಿತ್ರಗಳಿಂದಲೇ ಗಮನ ಸೆಳೆಯುವ ಮಣಿ, 1997ರಲ್ಲಿ ಇರುವರ್ ಎಂಬ ಚಿತ್ರವನ್ನು ತೆರೆಗರ್ಪಿಸಿದರು. ಇದು, ತಮಿಳುನಾಡಿನ ರಾಜಕೀಯದಲ್ಲಿ ಎರಡು ತಾರೆಗಳಾದ ಎಂ.ಜಿ. ರಾಮಚಂದ್ರನ್ ಹಾಗೂ ಕರುಣಾನಿಧಿ ನಂಟನ್ನು ಆಧರಿಸಿ ಹೆಣೆಯಲಾದ ಕಥಾವಸ್ತು.
ಒಂದೇ ನಾಣ್ಯದ ಎರಡು ಮುಖಗಳಂತಿದ್ದ ಇವರಿಬ್ಬರು, ರಾಜಕೀಯಕ್ಕೆ ಬಂದ ನಂತರ ಪರಸ್ಪರ ವಿಮುಖರಾಗಿದ್ದು, ಅದರೊಂದಿಗೆ ಅವರು ಕಟ್ಟಿದ್ದ ಪಕ್ಷ ಒಡೆದು ಹೋಗಿ, ಎರಡು ಪ್ರತ್ಯೇಕ ಪಕ್ಷಗಳಾಗಿ ರೂಪುಗೊಂಡಿದ್ದು - ಇವೇ ಕೆಲವು ನೈಜ ಅಂಶಗಳನ್ನು ಆಧರಿಸಿ ಕಥೆ ಹೆಣೆದ ಮಣಿ, ಚಿತ್ರವನ್ನು ಒಂದು ಮಾಸ್ಟರ್ ಪೀಸ್ ಆಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಅದು ಪ್ರಕಾಶ್ ರೈ. ಒಂದೆಡೆ ಮೋಹನ್ಲಾಲ್ ಎಂಬ ದೈತ್ಯ ಪ್ರತಿಭೆ, ಮತ್ತೊಂದೆಡೆ ಮಣಿರತ್ನಂ ಎಂಬ ಬ್ರಾಂಡ್ ನೇಮ್ - ಈ ಎರಡರ ಮಧ್ಯೆ ಆಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಪ್ರಕಾಶ್ ರೈ ತಮಗೆ ಸಿಕ್ಕ ಅಪರೂಪದ ಪಾತ್ರದಲ್ಲಿ ಉತ್ತಮವಾಗಿ ನಟಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ಅವರ ಈ ನಟನಾ ಚಾತುರ್ಯಕ್ಕೆ ಉತ್ತಮ ಪೋಷಕನಟ ರಾಷ್ಟ್ರಪ್ರಶಸ್ತಿಯೂ ಲಭ್ಯವಾಯಿತು. ವಿಶ್ವಸುಂದರಿಯಾಗಿದ್ದ ಐಶ್ವರ್ಯ ರೈ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೂ ಇದೇ ಚಿತ್ರದಿಂದ.
-ಚೇತನ್ ಓ.ಆರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


