ಜೀವಶಿವ ಸೇವೆಯ ಜೀವಂತ ಪಾಠ!
ವಿವೇಕಾನಂದರು ಮಠದಲ್ಲಿದ್ದಾಗ ಆಶ್ರಮವಾಸಿಗಳಿಗೆ ಬೋಧಿಸುವುದಕ್ಕಿಂತ ಹೆಚ್ಚಾಗಿ ಸ್ವಯಂ ಆಚರಿಸಿ ಕಲಿಸುತ್ತಿದ್ದ ಜೀವನಪಾಠಗಳೇ ಹೆಚ್ಚು! ಹಸಿದವರಿಗೆ ಅನ್ನ, ನೊಂದವರಿಗೆ ಸಾಂತ್ವನ, ಕಷ್ಟದಲ್ಲಿರುವವರಿಗೆ ಸಹಾಯ, ದುಃಖಾರ್ತರನ್ನು ಸಂತೈಸಿ ಧೈರ್ಯ ತುಂಬುವುದು ಇವುಗಳೇ ನಿಜವಾದ ದೇವರ ಸೇವೆ ಎಂಬುದು ಸ್ವಾಮೀಜಿ ನಡೆ-ನುಡಿ.
ಮಠದ ಮೈದಾನವನ್ನು ಸಮತಟ್ಟುಗೊಳಿಸಲು ನಾಗರಿಕತೆಯ ಪ್ರಭಾವಕ್ಕೆ ಒಳಗಾಗದೆ ತಮ್ಮ ಸರಳತನವನ್ನು ಉಳಿಸಿಕೊಂಡಿದ್ದ ಸಂತಾಲ್ ಪರಗಣದ ಗುಡ್ಡಗಾಡಿನ ಸಂತಾಲ ಜನಾಂಗದ ಕೂಲಿಗಳನ್ನು ನೇಮಿಸಲಾಗಿತ್ತು. ಸ್ವಾಮೀಜಿ ಅವರೊಂದಿಗೆ ಬೆರೆತು ಅವರ ಕಷ್ಟಸುಖಗಳನ್ನು ಕೇಳುತ್ತಿದ್ದರು. ಈ ಕೂಲಿಗಳಿಗೆ ಒಂದು ದಿನ ಹಬ್ಬದೂಟವನ್ನು ಬಡಿಸಬೇಕೆಂಬ ಇಚ್ಛೆ ಸ್ವಾಮೀಜಿಯವರಿಗುಂಟಾಯಿತು. ತಮ್ಮಿಚ್ಛೆಯನ್ನು ತಿಳಿಸಿದಾಗ ಅವರು, 'ಇಲ್ಲ ಬಾಬಾಜಿ, ಬೇರೆ ಜಾತಿಯವರು ಉಪ್ಪು ಹಾಕಿ ಮಾಡಿದ ಏನನ್ನಾದರೂ ಉಂಟರೆ ನಮಗೆ ಜಾತಿಯಿಂದ ಬಹಿಷ್ಕಾರ ಹಾಕಿಬಿಡುತ್ತಾರೆ!' ಎಂದರು. ಈ ಸಮಸ್ಯೆಯನ್ನು ಸ್ವಾಮೀಜಿ ಸುಲಭವಾಗಿ ಪರಿಹರಿಸಿದರು. 'ಉಪ್ಪಿಲ್ಲದ ಅಡುಗೆಯನ್ನು ಮಾಡುವುದು, ಅದಕ್ಕೆ ಉಪ್ಪನ್ನು ಪ್ರತ್ಯೇಕವಾಗಿ ಬಡಿಸುವುದು' ಎಂದಾಗ ಅವರೆಲ್ಲ ಒಪ್ಪಿಕೊಂಡರು. ಮಠದಲ್ಲಿ ಭಾರೀ ಔತಣವನ್ನೇರ್ಪಡಿಸಲಾಯಿತು. ಬಗೆಬಗೆಯ ಭಕ್ಷ್ಯಭೋಜ್ಯಗಳನ್ನೆಲ್ಲ ಬಡಿಸಲಾಯಿತು. ಸ್ವಾಮೀಜಿ ಖುದ್ದಾಗಿ ನಿಂತು ಪ್ರತಿಯೊಬ್ಬನಿಗೂ ಯಾವುದು ಹೆಚ್ಚು ಇಷ್ಟವೋ ಅದನ್ನು ಬೇಕೆಂಬಷ್ಟು ಬಡಿಸಿದರು. ಆ ಮುಗ್ಧಜೀವಿಗಳಿಗೆ ಹೊಟ್ಟೆಯೊಂದಿಗೆ ಹೃದಯವೂ ತುಂಬಿತು. ಅವರು ಆನಂದಾಶ್ಚರ್ಯಗಳಿಂದ 'ಸ್ವಾಮಿ, ಇವುಗಳನ್ನೆಲ್ಲ ಎಲ್ಲಿಂದ ತಿಂದಿರಿ? ನಾನು ಇಂಥದ್ದನ್ನು ಕಂಡೇ ಇರಲಿಲ್ಲ!' ಎಂದು ಉದ್ಗರಿಸಿದರು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

