ಬಿಸಿ ನೀರಿನ ಬುಗ್ಗೆಗಳು
ಬಿಸಿನೀರಿನ ಬುಗ್ಗೆಗಳು ಎಲ್ಲ ವಿಧದಲ್ಲಿ ಜ್ವಾಲಾಮುಖಿ ಲಕ್ಷಣಗಳನ್ನೇ ಹೊಂದಿವೆ. ನಿಯಮಿತ ವಿರಾಮಗಳಲ್ಲಿ ಬಿಸಿನೀರಿನ ಬುಗ್ಗೆಗಳು ಉದ್ಭವವಾಗುತ್ತವೆ. ಇದಕ್ಕೆ ಕಾರಣ ಭೂಮಿಯ ಆಳಕ್ಕೆ ಹೋದಂತೆಲ್ಲಾ ಉಷ್ಣತೆ ಹೆಚ್ಚಾಗುತ್ತದೆ. ಭೂಮಿಯ ಮೇಲೆ ಬಿದ್ದ ನೀರು ಹಾಸು ಬಂಡೆಗಳ ಸ್ತರಗಳಲ್ಲಿ ಹಾಯ್ದು, ಆಳದಲ್ಲಿಯ ಒಂದು ಗುಂಡಿಯಲ್ಲಿ ಸಂಗ್ರಹವಾಗುತ್ತದೆ. ಆಗ ಭೂಮಿಯ ಆಳದಲ್ಲಿರುವ ಉಷ್ಣತೆಯಿಂದ ನೀರು ಕುದಿಯುತ್ತದೆ. ಇದರಿಂದ ಉಂಟಾದ ನೀರಾವಿಯ ಒತ್ತಡವು ಅದೇ ಜಾರುಬಂಡೆಗಳ ಮುಖಾಂತರ ಚಿಲುಮೆ ರೂಪದಲ್ಲಿ ನೀರು ಭೂಮಿಯ ಮೇಲೆ ಬರುತ್ತದೆ. ಇದೇ ಬಿಸಿನೀರಿನ ಬುಗ್ಗೆ. ಇವನ್ನು ಹೆಚ್ಚಾಗಿ ಮೂರು ಪ್ರದೇಶಗಳಲ್ಲಿ ನೋಡಬಹುದು. ಐಸ್ಲ್ಯಾಂಡ್, ನ್ಯಾಜಿಲ್ಯಾಂಡ್ ಹಾಗೂ ಪಶ್ಚಿಮ ಅಮೆರಿಕದಲ್ಲಿ. ಇವು ಬಿಸಿನೀರಿನ ಕಾರಂಜಿಯಾಗಿ 30 ಮೂಜರ್ ಎತ್ತರದವರೆಗೆ ಚಿಮ್ಮುತ್ತವೆ. ಮುಂಬೈ ಬಳಿ ಇರುವ ವಜ್ರೇಶ್ವರಿಯಲ್ಲಿ ಬಿಸಿನೀರಿನ ಬುಗ್ಗೆ ಇದೆ. ಹಿಮಾಲಯದ ಮಾಣಿಕ್ರಾಣ್ನಲ್ಲಿ ತರಕಾರಿಗಳನ್ನು ಬೇಯಿಸುವಷ್ಟು ನೀರು ಬಿಸಿ ಇರುತ್ತದೆ.
-ಎಚ್. ಕೃಷ್ಣಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

