ಸಾಧ್ಯಾಸಾಧ್ಯಗಳ ನಡುವೆ!
ವಿವೇಕಾನಂದರಿಗೆ ಜಪಾನ್ ದೇಶಕ್ಕೆ ಭೇಟಿ ನೀಡಿ ವೇದಾಂತ ಪ್ರಸಾರ ಕೈಗೊಳ್ಳುವ ಹಾಗೂ ಭಾರತೀಯರ ದಾರಿದ್ರ್ಯ ನಿವಾರಣೆಗಾಗಿ ಜಪಾನ್ ತಂತ್ರಜ್ಞಾನವನ್ನು ಭಾರತಕ್ಕೆ ತರುವ ಮಹದಾಸೆಯಿತ್ತು. ಈ ಮಹತ್ಕಾರ್ಯವನ್ನು ಸಾಕಾರಗೊಳಿಸಲು ಅವರ ಶಿಷ್ಯೆ ಜೋಸೆಫಿನ್ ಜಪಾನ್ನಲ್ಲಿ ಸ್ವಾಮೀಜಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಸಿದ್ಧಗೊಳಿಸಿದಳು ಆದರೆ ಅನಾರೋಗ್ಯದ ಕಾರಣದಿಂದ ಸ್ವಾಮೀಜಿ ಜಪಾನ್ ಪಯಣವನ್ನು ಮುಂದಕ್ಕೆ ಹಾಕತೊಡಗಿದರು. ಕೊನೆಗೆ ಜಪಾನ್ನ ಒಕಾಕುರ ಸ್ವಾಮೀಜಿಯವರನ್ನು ಖುದ್ದು ಭೇಟಿಯಾಗಿ ಜಪಾನ್ಗೆ ಕರೆದೊಯ್ಯಲು ಭಾರತಕ್ಕೆ ಬಂದನು.
ಜಪಾನ್ನಲ್ಲಿ ನಡೆಸಲುದ್ದೇಶಿಸಲಾಗಿದ್ದ ಸರ್ವಧರ್ಮ ಸಮ್ಮೇಳನಕ್ಕೆ ಸ್ವಾಮೀಜಿಯನ್ನು ಆಹ್ವಾನಿಸುವ, ಭಾರತದ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುವ ಉದ್ದೇಶದಿಂದ ಭಾರತಕ್ಕೆ ಬಂದ ಒಕಾಕುರ, 'ವಿವೇಕಾನಂದರು ನಮ್ಮವರು ಅಂದರೆ ಪೌರಾತ್ಯರು' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಜಪಾನಿ ಸ್ನೇಹಿತರೊಡಗೂಡಿ ಸ್ವಾಮೀಜಿ, ಬುದ್ಧಗಯೆ ಮತ್ತು ವಾರಾಣಸಿಗೆ ತೀರ್ಥಯಾತ್ರೆ ಕೈಗೊಂಡರು. ಬುದ್ಧ ನಿರ್ಯಾಣ ಹೊಂದಿದ ಪರಮಪವಿತ್ರ ಸ್ಥಳ ಬುದ್ಧಗಯಾ.
ಈ ತೀರ್ಥಯಾತ್ರೆಯು ಸ್ವಾಮೀಜಿ ಪಾಲಿಗೆ ಅತ್ಯಂತ ವಿಶಿಷ್ಟವೂ ಮಹತ್ವಪೂರ್ಣವೂ ಆಗಿತ್ತು. ಈ ಕ್ಷೇತ್ರಗಳಲ್ಲಿಯ ಸಂಪ್ರದಾಯಸ್ಥರು ಅವರ ಬಗ್ಗೆ ತೋರಿದ ಪ್ರೀತಿ ವಿಶ್ವಾಸ ಎಷ್ಟು ಆಳವಾಗಿದ್ದೆಂದರೆ ಸ್ವತಃ ಸ್ವಾಮೀಜಿಯೂ ಅದನ್ನು ಕಂಡು ದಂಗಾದರು. ಸ್ವಾಮೀಜಿ ಹಿಂದೆ ನರೇಂದ್ರನಾಗಿದ್ದಾಗ ಗಯಾಕ್ಕೆ ಬಂದಿದ್ದರು. ಈಗ ಸ್ವಾಮೀ ವಿವೇಕಾನಂದರಾಗಿ ಮತ್ತೊಮ್ಮೆ ಬಂದಿದ್ದಾರೆ. ಅಂದು ಅವರು ಸಂದರ್ಶಿಸಿದ ಪ್ರಥಮ ತೀರ್ಥಕ್ಷೇತ್ರ ಬುದ್ಧಗಯಾ; ಈಗ ಅವರು ಕೈಗೊಂಡ ಕೊನೆಯ ತೀರ್ಥಯಾತ್ರೆಯೂ ಬುದ್ಧಗಯಾ!ಟಿ
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

