ಸಾಂಗತ್ಯ (ರಿ) ಆಗಸ್ಟ್ 9, 10 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ 11ನೇ ಚಿತ್ರ ಶಿಬಿರವನ್ನು ಹಮ್ಮಿಕೊಂಡಿದೆ. ಚಿತ್ರ ಶಿಬಿರದಲ್ಲಿ ವಿವಿಧ ಭಾಷೆಗಳ ಚಿತ್ರಗಳ ಪ್ರದರ್ಶನ, ಚರ್ಚೆ, ಸಿನಿಮಾ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಉಪನ್ಯಾಸ, ಗುಂಪು ಚರ್ಚೆಗಳೆಲ್ಲವೂ ಇರಲಿವೆ.
ಈ ಶಿಬಿರದಲ್ಲಿ 50 ಮಂದಿಗೆ ಮಾತ್ರ ಅವಕಾಶವಿದ್ದು, ಸಿನಿಮಾ ಮಾಧ್ಯಮವನ್ನು ಪ್ರಶಂಸೆ ಮಾಡುವ ಬಗೆ, ಸಿನಿಮಾ ಲೇಖನಗಳನ್ನು ಬರೆಯುವ ಬಗ್ಗೆಯೂ ಮಾಹಿತಿ ಒದಗಿಸಲಾಗುವುದು.
ಇದುವರೆಗೆ ಸಾಂಗತ್ಯ (ರಿ), 10 ಯಶಸ್ವಿ ಶಿಬಿರಗಳನ್ನು ಸಂಘಟಿಸಿದ್ದು, ರಾಜ್ಯದ ವಿವಿಧ ಭಾಗದ ಸಿನಿಮಾಸಕ್ತರು ಪಾಲ್ಗೊಂಡಿದ್ದರು. ವಿಷಯ ತಜ್ಞರಾಗಿ ಚಿತ್ರೋದ್ಯಮದ ಕೇಸರಿ ಹರವೂ, ಗುರುಪ್ರಸಾದ್, ಉಮಾಶಂಕರ ಸ್ವಾಮಿ, ರೇಖಾರಾಣಿ, ಅಶೋಕ್ ಕಶ್ಯಪ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಆಸಕ್ತರು ಮಾಹಿತಿ ಮತ್ತು ನೋಂದಣಿಗೆ 94483 48517, 94805 82027, 99640 22581 ಸಂಪರ್ಕಿಸಬಹುದು.