ಸ್ಪುಟ್ನಿಕ್

ಸ್ಪುಟ್ನಿಕ್ ವಿಶ್ವದ ಮೊದಲ ಉಪಗ್ರಹ. ಇದು ಬಾಹ್ಯಾಕಾಶ ವಿಜ್ಞಾನದ ಮೈಲಿಗಲ್ಲು. ಸ್ಪುಟ್ನಿಕ್ ಸ್ಯಾಟಲೈಟ್ ಬಾಹ್ಯಾಕಾಶವನ್ನುಚುಂಬಿಸಿ 56 ವರ್ಷಗಳೇ ಕಳೆದಿವೆ.
ಸೋವಿಯತ್ ಒಕ್ಕೂಟವು ಮೊಟ್ಟಮೊದಲ ಮಾನವ ನಿರ್ಮಿತ ಉಪಗ್ರಹ 'ಸ್ಪುಟ್ನಿಕ್1'ನ್ನು ಕಕ್ಷೆಗೆ ಹಾರಿಸುವುದರೊಂದಿಗೆ ಜಗತ್ತಿನಲ್ಲಿ ಬಾಹ್ಯಾಕಾಶ ಯುಗ ಆರಂಭವಾಯಿತು.
ವ್ಯೋಮದ ಕುರಿತಾದ ಮಾನವನ ಕುತೂಹಲ ಮುಂದುವರಿಯುತ್ತಲೇ ಇದೆ. ಕೃತಕ ಉಪಗ್ರಹವೊಂದು ಭೂಮಿಯಿಂದ ವ್ಯೋಮಕ್ಕೆ ಜಿಗಿದ ದಿನ 'ಬಾಹ್ಯಾಕಾಶ ವಿಜ್ಞಾನದ ಸುವರ್ಣ ದಿನ'.
ಮೂರು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಸಂಚರಿಸಿದ ಸ್ಪುಟ್ನಿಕ್ 1958ರ ಪ್ರಾರಂಭದಲ್ಲಿ ಭೂಮಿಯ ವಾತಾವರಣ ಪ್ರವೇಶಿಸಿ ಉರಿದುಬಿತ್ತು.
ಲೆಕ್ಕರಾಜರಾಣಿ
ಸ್ಪುಟ್ನಿಕ್ 22 ಇಂಚು ಅಗಲ, 184 ಪೌಂಡ್ ತೂಕ ಹೊಂದಿತ್ತು. ಪ್ರತಿ 96 ನಿಮಿಷಗಳಿಗೆ ಭೂಮಿಗೆ ಒಂದು ಸುತ್ತು ಹಾಕುತ್ತಿದ್ದ ಸ್ಪುಟ್ನಿಕ್ 18 ಸಾವಿರ ಮೈಲು ಕಿ.ಮೀ. ವೇಗ ಹೊಂದಿತ್ತು.
56 ವರ್ಷಗಳ ಹಿಂದೆ ಉಡಾವಣೆಯಾದ ಸ್ಪುಟ್ನಿಕ್ ಜಗತ್ತಿನಲ್ಲಿ ಸ್ಪೇಸ್ ರೇಸನ್ನೇ ಹುಟ್ಟುಹಾಕಿತ್ತು. ಅಂದಿನಿಂದ ಇಂದಿನ ತನಕ ವಿವಿಧ ರಾಷ್ಟ್ರಗಳಿಂದ ಉಡಾವಣೆಯಾದ ಸ್ಯಾಟಲೈಟ್ಗಳ ಸಂಖ್ಯೆ 6000ಕ್ಕೂ ಅಧಿಕ.
1957ರ ವರ್ಷದಲ್ಲಿ ಉಡಾವಣೆಯಾಗಿದ್ದ ಸ್ಪುಟ್ನಿಕ್ 2ರಲ್ಲಿ 'ಲೈಕಾ' ಎಂಬ ನಾಯಿಯನ್ನು ಕಳಿಸಿತ್ತು. ಭಾರತ ಕೂಡ 1975ರಲ್ಲಿ ಮೊದಲ ಕೃತಕ ಉಪಗ್ರಹ 'ಆರ್ಯಭಟ'ವನ್ನು ಉಡಾವಣೆ ಮಾಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


