ಬೈಟುಕಾಫಿ

ಸಂಗೀತ ಸಮ್ಮೇಳನ

Published On :

ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 11ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನವನ್ನು ಫೆ.7 ರಿಂದ 9ರವರೆಗೆ ಹಮ್ಮಿಕೊಂಡಿದ್ದು, ಫೆ.8ರಂದು ಬೆಳಗ್ಗೆ 10ಕ್ಕೆ  ಜಾವಗಲ್, ಚಾಮರಾಜನಗರ, ಚಿಕ್ಕಮಗಳೂರು ತಂಡದಿಂದ 'ಗಾಯನ ಗಂಗೋತ್ರಿ'. 10.30ಕ್ಕೆ ಶ್ರೀನಿವಾಸ್ ಜಿ. ಕಪ್ಪಣ್ಣ ಮತ್ತು ಮಾಲತಿ ಶರ್ಮ ನಡೆಸಿಕೊಡುವ ಮರೆಯಲಾರದ ಮಹನೀಯರು 'ಅನುರಣನ'. 12 ಗಂಟೆಗೆ ಪುತ್ತೂರು ನರಸಿಂಹ ನಾಯಕ್ ಸಂಗೀತ ಸಂಯೋಜಿಸಿ ಪ್ರಸ್ತುತಿ ಪಡಿಸುವ 'ಕವಿ-ಕಾವ್ಯ-ಗಾಯನ'. ಸಂಜೆ 4 ಗಂಟೆಗೆ ಬಿ.ಕೆ. ಸುಮಿತ್ರ, ಗರ್ತಿಕೆರೆ ರಾಘಣ್ಣ ಪ್ರಸ್ತುತಿ ಪಡಿಸುವ 'ಮರೆಯಲಾಗದ ಮಾಧುರ್ಯ' ಗೀತ ಗಾಯನ. ಸಂಜೆ 5 ಗಂಟೆಗೆ ಡಾ. ಜಿ.ಎಸ್. ಶಿವರುದ್ರಪ್ಪ ಅವರ ನೆನಪಿಗಾಗಿ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ ಪ್ರಸ್ತುತಪಡಿಸುವ 'ಯಾವುದೀ ಪ್ರವಾಹ'. ರಾತ್ರಿ 7 ಗಂಟೆಗೆ ಖ್ಯಾತ ಸಾಹಿತಿಗಳಾದ ಕೆ.ಎಸ್. ನರಸಿಂಹಸ್ವಾಮಿ, ಚೆನ್ನವೀರ ಕಣವಿ, ರಾಜರತ್ನಂ, ಕೈಲಾಸಂ, ಸಿದ್ಧಯ್ಯ ಪುರಾಣಿಕ, ಗೋಪಾಲ ಕೃಷ್ಣ ಅಡಿಗ, ಜಿ.ಎಸ್. ಸಿದ್ಧಲಿಂಗಯ್ಯ, ಸಾ.ಶಿ. ಮರುಳಯ್ಯ ರಚಿಸಿರುವ ಗೀತ ಗಾಯನ ಕಾರ್ಯಕ್ರಮ 'ಗೀತ ಸಂಗೀತ'.
ಸ್ಥಳ: ಜಿ.ಎಸ್.ಎಸ್. ವೇದಿಕೆ, ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿ, ಬೆಂಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.