ಬೈಟುಕಾಫಿ

ಜೆಕೆ ಅಂದ್ರೆ ಜೇಡ್ರಳ್ಳಿನಾ?

ಜೆಕೆ ಅಂದ್ರೆ ಜೇಡ್ರಳ್ಳಿನಾ?
Published On :

'ಹೌದು' ಎನ್ನುವವವರು ಹೆಚ್ಚು ಮಂದಿ ಸಿಗಬಹುದೇನೋ. ಆದರೆ ಇದು ಒಂದು ಕಾಲದ ಮಾತು. ಜೆಕೆ ಅಂದ್ರೆ ಎಲ್ಲರಿಗೂ ಕೃಷ್ಣಪ್ಪನ ಹೆಸರೇ ನೆನಪಾಗುತ್ತಿತ್ತು, ಕೊತ್ವಾಲ್ ಅಂದ್ರೆ ಡಾನ್ ರಾಮಚಂದ್ರ ನೆನಪಾಗುವಂತೆ! ಆದರೆ, ಈಗೆ ಹೆಚ್ಚಾಗಿ ಕೇಳಿಬರುತ್ತಿರುವ ಜೆಕೆ ಆ ಜೇಡ್ರಳ್ಳಿ ಅಲ್ಲ. ನಟ ಜೈಕಾರ್ತಿಕ್. ಇನ್ನೂ ನಿರ್ದಿಷ್ಟವಾಗಿ ಹೇಳಬೇಕು ಅಂದ್ರೆ 'ಅಶ್ವನಿ ನಕ್ಷತ್ರದ' ಸ್ಟಾರ್ ಹೀರೋ. ಇತ್ತೀಚೆಗಷ್ಟೆ ಆಡಿಯೋ ಬಿಡುಗಡೆಯಾದ 'ಜಸ್ಟ್ ಲವ್‌' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಇದಕ್ಕೂ ಮುನ್ನ ಒಂದಿಷ್ಟು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಟ ಸುದೀಪ್ ಗೆಳೆಯರ ಬಳಗದ ಸದಸ್ಯರಾಗಿ ಹೆಚ್ಚು ಗುರುತಿಸಿಕೊಂಡವರು. ಸಿಸಿಎಲ್‌ನಲ್ಲೂ ತಮ್ಮ ಖದರ್ ತೋರಿಸಿದ್ದಾರೆ. ಆದರೆ, 'ಅಶ್ವನಿ ನಕ್ಷತ್ರ' ಧಾರಾವಾಹಿಯಲ್ಲಿ ಹೀರೋ ಆಗುತ್ತಿದ್ದಂತೆ ಜೆಕೆ ಸ್ವತಂತ್ರಗೊಂಡಿದ್ದಾರೆ. ಹೀಗಾಗಿ ಜೈಕಾರ್ತಿಕ್ ಈಗ ವೃತ್ತಿಪರ ನಟ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ 'ಜೆಕೆ' ಅಂದರೆ ಯಾರಾದರೂ ಜೇಡ್ರಳ್ಳಿ ಕೃಷ್ಣಪ್ಪನಾ? ಅಂತ ಕೇಳಬೇಡಿ. ಜೆಕೆ ಅಂದ್ರೆ ಕನ್ನಡ ನಟ ಜೈಕಾರ್ತಿಕ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.