ರಂಗ ಗೆಳೆಯರ ಮೊದಲ ಸಿನಿಮಾ
ಭಾಗವತರು ಸಾಂಸ್ಕೃತಿಕ ಸಂಘಟನೆ, 'ಹೆಜ್ಜೆ ಮೂಡಿದ ಹಾದಿ' ಎಂಬ ತಲೆಬರಹದಡಿಯಲ್ಲಿ ರಂಗ ಗೆಳೆಯರ ಮೊದಲ ಸಿನಿಮಾ ಎಂಬ ಕಾರ್ಯಕ್ರಮವನ್ನು ಫೆ.15 ರಿಂದ 17 ರವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಅವರ ಸಹಯೋಗದೊಂದಿಗೆ ಹಮ್ಮಿಕೊಂಡಿದೆ. 15ರಂದು ಸಂಜೆ ಬಾದಾಮಿ ಹೌಸ್ನಲ್ಲಿ ಖ್ಯಾತ ನಿರ್ದೇಶಕ ಎಂ.ಎಸ್.ಸತ್ಯು ಅವರಿಂದ ಉದ್ಘಾಟನೆಗೊಳ್ಳಲಿದೆ. ವಿ.ಚಲ ನಿರ್ದೇಶನದ 'ಚಿತ್ರಮಂದಿರದಲ್ಲಿ' ಪ್ರದರ್ಶನವಿದೆ. 16ರಂದು ಬೆಳಗ್ಗೆ 11, ಮಧ್ಯಾಹ್ನ 2 ಹಾಗೂ ಸಂಜೆ 5 ಗಂಟೆಗೆ ಕ್ರಮವಾಗಿ ವಿ.ನಾಗೇಂದ್ರ ಶಾ ನಿರ್ದೇಶನದ 'ಹಾಡು ಹಕ್ಕಿ ಹಾಡು', ರವೀಂದ್ರನಾಥ್ ಸಿರಿವರ ನಿರ್ದೇಶನದ 'ಗಾಂಧಿ ಜಯಂತಿ' ಹಾಗೂ ರವಿ ಎಂ. ನಿರ್ದೇಶನದ 'ಕಳವು' ಚಿತ್ರಗಳು ಪ್ರದರ್ಶನಗೊಳ್ಳ ಲಿವೆ. 17ರಂದು ಸಂಜೆ 5ಕ್ಕೆ ಕನ್ನಡಭವನದ ನಯನದಲ್ಲಿ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ, ಡಾ.ಬಿ.ಟಿ.ಲಲಿತಾನಾಯಕ್, ಬಿ.ಗಣಪತಿ ಈ ಸಿನಿಮಾಗಳ ಬಗ್ಗೆ ಅಭಿಪ್ರಾಯ ಮಂಡಿಸುವರು. ವಿವರಗಳಿಗೆ: 9448077292.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

