ಬೈಟುಕಾಫಿ

ಬೇಕಾಬಿಟ್ಟಿ ವಾಹನ ಚಲಾಯಿಸಬೇಡಿ

Published On :

ವಾಹನ ಚಾಲನೆ ಮಾಡಲು ಮಾನಸಿಕವಾಗಿ ಅಥವಾ ದೈಹಿಕವಾಗಿ ಅರ್ಹನಾಗಿರಬೇಕು. ಅನರ್ಹ ಸ್ಥಿತಿಯಲ್ಲಿದ್ದಾಗ ಚಾಲನೆ ಮಾಡಿದಲ್ಲಿ ಮೊದಲ ಅಪರಾಧಕ್ಕೆ ರು. 200 ಹಾಗೂ 2 ಮತ್ತು 3ನೇ ಬಾರಿ ಅದೇ ಅಪರಾಧ ಮಾಡಿ ಮತ್ತೆ ಸಿಕ್ಕಿಬಿದ್ದಲ್ಲಿ ರು. 500 ದಂಡ ತೆರಬೇಕಾಗುತ್ತದೆ.
ನಿಲುಗಡೆಗೊಳಿಸಿದ ವಾಹನದೊಳಗೆ ಅನಧಿಕೃತ ವ್ಯಕ್ತಿ ಪ್ರವೇಶಿಸಿ ವಾಹನದ ಬ್ರೇಕ್ ಮತ್ತಿತರೆ ಭಾಗಗಳಿಗೆ ಹಾನಿ ಮಾಡಿದಲ್ಲಿ ರು. 100 ರುಪಾಯಿ ದಂಡ ಕಟ್ಟಬೇಕಾಗುತ್ತದೆ.
ಸಾರಿಗೆ ವಾಹನದ ಚಾಲಕನು ಹೆಚ್ಚು ಬಾಡಿಗೆ ಕೇಳುವುದು ಅಥವಾ ಪ್ರಯಾಣಿಕರಿಂದ ಸುಲಿಗೆ ಮಾಡುವುದು ಮಾಡಿದಲ್ಲಿ ಮೊದಲ ಅಪರಾಧಕ್ಕೆ ರು. 100, 2 ಮತ್ತು 3ನೇ ಬಾರಿ ಅದೇ ರೀತಿಯ ಅಪರಾಧ ಮುಂದುವರೆಸಿದಲ್ಲಿ ರು. 300 ದಂಡ ವಿಧಿಸಲಾಗುತ್ತದೆ.
ವೇಶ್ಯಾವಾಟಿಕೆಗೆ ಸಹಾಯ ಮಾಡಲು ಅಥವಾ ವೇಶ್ಯೆಯರನ್ನು ಒದಗಿಸಲು ಅಥವಾ ಯಾವುದೇ ರೀತಿಯ ಕಳ್ಳ ಸಾಗಣೆ ಮಾಡಲು ಕದ್ದ ಅಥವಾ ಸ್ವಂತ ವಾಹನ(ಅವನ/ ಅವಳ ವಾಹನವನ್ನು) ಬಳಸಿದಲ್ಲಿ ಮೊದಲ ಅಪರಾಧಕ್ಕೆ 100 ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಮತ್ತೆ ಅದೇ ಅಪರಾಧ ಮಾಡಿದಲ್ಲಿ ರು. 300 ದಂಡ ವಿಧಿಸಲಾಗುತ್ತದೆ.
ಆಟೋರಿಕ್ಷಾ ಚಾಲಕರು, ಕ್ಯಾಬ್ ಚಾಲಕರು ಪ್ರಯಾಣಿಕರಿಂದ ಹೆಚ್ಚು ಹಣ/ಬಾಡಿಗೆ ವಸೂಲಿ ಮಾಡುವುದು, ಪ್ರಯಾಣಿಕರು ಕರೆದ ಕಡೆಗೆ ಬಾಡಿಗೆ ಹೋಗಲು ನಿರಾಕರಿಸುವುದು ಮಾಡಿದಲ್ಲಿ ಮೊದಲ ಅಪರಾಧಕ್ಕೆ ರು. 100 ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಮತ್ತೆ ಅದೇ ಅಪರಾಧ ಮಾಡಿದಲ್ಲಿ ರು. 300 ದಂಡ ವಿಧಿಸಲಾಗುತ್ತದೆ.ಟಿ

-ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.