ಬೈಟುಕಾಫಿ

ಸೀಮನ್ಸ್ ಉತ್ಪಾದಕತೆ ಪ್ರವಾಸ

Published On :

ಭಾರತದ ಸಿಲಿಕಾನ್ ಕಣಿವೆ ಬೆಂಗಳೂರು ನಗರದಲ್ಲಿ ಸೀಮನ್ಸ್ ಆತಿಥ್ಯದಲ್ಲಿ ನಡೆಯುತ್ತಿರುವ 'ಉತ್ಪಾದಕತೆ ಪ್ರವಾಸ' ನಾಳೆ (ಫೆ.21) ಮುಕ್ತಾಯವಾಗಲಿದೆ. ನಗರದ ಪೀಣ್ಯ, ಅತ್ತಿಬೆಲೆ ಇತ್ಯಾಜಿ ಕಡೆಗಳಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಟ್ರೇಲರ್ ಪಾರ್ಕಿಂಗ್ ಪ್ರದರ್ಶನಗಳು ನಡೆಯಲಿವೆ. ನಂತರ ಟ್ರೇಲರ್ ಹೊಸಕೋಟೆ, ಮೈಸೂರುಗಳಿಗೆ ತೆರಳಲಿದೆ.
ಸೀಮನ್ಸ್ ಉತ್ಪಾದಕತೆ ಪ್ರವಾಸ ಎನ್ನುವುದು ರಾಷ್ಟ್ರವ್ಯಾಪಿ ಬಹು-ನಗರಗಳ ಸಂಚಾರಿ ರಸ್ತೆ ಪ್ರದರ್ಶನ. ಇದರ ಗುರಿ ಭಾರತದಾದ್ಯಂತ ಉತ್ಪಾದಕತೆ ಮತ್ತು ದಕ್ಷತೆಯ ಸುಧಾರಣೆಗೆ ತಂತ್ರಜ್ಞಾನಗಳನ್ನು ನೀಡುವ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಬಲೀಕರಣ. 'ಉತ್ಪಾದಕರು ಅದರಲ್ಲೂ ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲೇಬೇಕು.ಇಲ್ಲದಿದ್ದರೆ ಅನಗತ್ಯ ವೆಚ್ಚ ಕಡಿತ ಮತ್ತು ಲಾಭಾಂಶದ ಹೆಚ್ಚಳ ಸಾಧ್ಯವಿಲ್ಲ' ಎನ್ನುತ್ತಾರೆ ಸೀಮನ್ಸ್ ಇಂಡಿಯಾ ಹಿರಿಯ ಅಧಿಕಾರಿ ಭಾಸ್ಕರ್ ಮಂಡಲ್. ಮಾಹಿತಿಗೆ: http://productivitytour.siemens.co.in/ ಮೊ: 99025268450 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.