ಬೈಟುಕಾಫಿ

ಸಾರ್ವಜನಿಕ ಸಾರಿಗೆ ಬಳಸಿ

ಸಾರ್ವಜನಿಕ ಸಾರಿಗೆ ಬಳಸಿ
Published On :

ಅಪಘಾತ ಯಾವ ರೀತಿಯಲ್ಲಾದರೂ, ಹೇಗೆ ಬೇಕಾದರೂ ಸಂಭವಿಸಬಹುದು. ಕೇವಲ ಪಾದಚಾರಿಗಳು, ಬೈಕ್ ಸವಾರರು, ಬೈಸಿಕಲ್ ಸವಾರರಿಗೆ ಮಾತ್ರ ಅಪಘಾತ ಸಂಭವಿಸುವುದಿಲ್ಲ.
ಬಸ್ ಪ್ರಯಾಣಿಕರೂ ಸಹ ಎಚ್ಚರ ಮರೆತರೆ ಅನಾಹುತ ಕಟ್ಟಿಟ್ಟ ಬುತ್ತಿ. ಹಾಗಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವಾಗಲೂ ಸಹ ಪ್ರಯಾಣಿಕರು ಎಚ್ಚರದಿಂದಿರಬೇಕು. ಬಸ್ ಹತ್ತುವಾಗ ಸರದಿಯಲ್ಲೇ ಹೋಗುವುದು ಒಳ್ಳೆಯದು.  ಬಸ್ ನಿಧಾನವಾಗಿ ಚಲಿಸುವಾಗ ಬಸ್‌ನಿಂದ ಕೆಳಗಿಳಿಯಲು ಹೋಗಬೇಡಿ.
ಚಲಿಸುವ ಬಸ್ ಅನ್ನು ಹತ್ತಲು ಮುಂದಾಗುವುದು, ಬಸ್‌ನಲ್ಲಿ ಕೂರಲು ಅಥವಾ ನಿಲ್ಲಲು ಸ್ಥಳವಿದ್ದರೂ ಬಾಗಿಲಲ್ಲಿನ ಮೆಟ್ಟಿಲುಗಳ ಮೇಲೆ ನಿಂತು ನೇತಾಡುತ್ತಾ ಹೋಗುವುದು ಕೆಲವರಿಗೆ ಶೋಕಿಯಾಗಿದೆ. ಹೀಗೆ ಹೋಗುವುದರಿಂದ ತಿರುವುಗಳಲ್ಲಿ ಆಯತಪ್ಪಿ ಕೆಳಗೆ ಬೀಳುವ ಸಂಭವವಿರುತ್ತದೆ..
ಮಕ್ಕಳನ್ನು ಕರೆದುಕೊಂಡು ಬರುವ ಮಹಿಳೆಯರಿಗೆ ಪ್ರಮುಖ ಆದ್ಯತೆ ಕೊಡಿ. ಅವರು ಬಾಗಿಲಲ್ಲಿ ನಿಲ್ಲದಂತೆ ಎಚ್ಚರವಹಿಸಿ.
ಕಿಟಕಿ ಪಕ್ಕ ಕುಳಿತಿದ್ದರೆ ಕೈ ಅಥವಾ ತಲೆಯನ್ನು ಹೊರಗೆ ಹಾಕಿ ಬೇರೆ ವಾಹನಗಳನ್ನು ನೋಡುವುದು, ಹಿಂದೆ ಅಥವಾ ಪಕ್ಕದಲ್ಲಿ ಚಲಿಸುವ ವಾಹನಗಳನ್ನು ಅಡ್ಡ ಹಾಕುವುದು ಮಾಡಬಾರದು.
ಬಸ್‌ನಿಂದ ಯಾವ ಉಪಯುಕ್ತ/ನಿರುಪಯುಕ್ತ ವಸ್ತುಗಳನ್ನುಹೊರಗೆ ರಸ್ತೆಗೆ ಎಸೆಯಬೇಡಿ. ಇದರಿಂದ ಬೇರೆ ವಾಹನ ಸವಾರರಿಗೆ ತೊಂದರೆಯಾಗುತ್ತದೆ, ಕೆಲವೊಮ್ಮೆ ಅಪಘಾತವೂ ಸಂಭವಿಸಬಹುದು.
ಚಾಲಕ ವಾಹನ ಚಾಲನೆ ಮಾಡುವಾಗ ಆತನ ಜತೆ ಮಾತನಾಡಿ ಗಮನ ಬೇರೆಡೆ ಸೆಳೆಯಬೇಡಿ. ಇದರಿಂದ ಅಪಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ.


-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.