ಬೈಟುಕಾಫಿ

ಆತ್ಮವಿಶ್ವಾಸ ವೃದ್ಧಿಸಿ

Published On :

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಅತಿ ಮುಖ್ಯವಾದುದು. ಅದರಲ್ಲೂ ಪರೀಕ್ಷೆಯ ಸಮಯದಲ್ಲಿ ಪಾಲಕರು ತೋರಿಸುವ ಕಾಳಜಿ ಹಾಗೂ ಪ್ರೋತ್ಸಾಹ ಈ ಹಾದಿಯನ್ನು ಸುಗಮಗೊಳಿಸಬಲ್ಲವು. ವೇಳಾಪಟ್ಟಿಯಿಂದ ಪ್ರಾರಂಭವಾಗಿ ಪರೀಕ್ಷೆ ಮುಗಿಯುವರೆಗೂ ಮಕ್ಕಳಿಗಾಗಿಯೇ ಸಮಯ ಕೊಡಬೇಕು. ತಮ್ಮ ಬೇರೆಲ್ಲ ಕೆಲಸಗಳ ಮಧ್ಯೆಯೂ ಇದಕ್ಕೆ ಹೆಚ್ಚು ಒತ್ತುಕೊಡಬೇಕು. ಅಂಕ ಗಳಿಕೆಯೇ ಮುಖ್ಯವಲ್ಲ ಎಂದರೂ ಈ ಸ್ಪರ್ಧಾತ್ಮಕ ಜಗತ್ತಿಗೆ ಇದು ಮುಖ್ಯವಾಗಿದೆ. ಆದರೆ, ಯಾವುದೇ ಒತ್ತಡ ಹೇರದೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಓದುವ ಅಭ್ಯಾಸವನ್ನು ರೂಢಿಸಿ ಧೈರ್ಯವಾಗಿ, ಸಮರ್ಥವಾಗಿ ಪರೀಕ್ಷೆ ಎದುರಿಸಲು ಕಲಿಸಬೇಕು. ಆಗ ಹೆಚ್ಚು ಅಂಕಗಳು ತಾನಾಗೇ ಬರುತ್ತವೆ.
-ಮಮತಾ ಕುಲಕರ್ಣಿ, ಮುಧೋಳ

ಸಕಾರಾತ್ಮಕ ಗುಣವನ್ನು ಗುರುತಿಸಿ
ಮಕ್ಕಳ ಬಹು ದೊಡ್ಡ ಸ್ಫೂರ್ತಿ ಪಾಲಕರೇ ಅಲ್ಲವೇ? ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಯಶಸ್ಸಿಗೆ ಬಹುತೇಕ ಪಾಲಕರೇ ಕಾರಣ. ಪರೀಕ್ಷಾ ಸಮಯವನ್ನು ಮಕ್ಕಳು ಸರಿಯಾಗಿ ಬಳಸುವಂತೆ ಅವರಿಗೆ ಮಾರ್ಗದರ್ಶನ ನೀಡಬೇಕಾದ ಜವಾಬ್ದಾರಿ ಪಾಲಕರಿಗಿರುತ್ತದೆ. ಎಷ್ಟೋ ಪಾಲಕರು ತಮ್ಮ ಮಕ್ಕಳನ್ನು ಪರೀಕ್ಷಾ ದಿನಗಳಲ್ಲಿ ಗದರಿಸಿ, ಬೆದರಿಸಿ, ಹೀಯಾಳಿಸಿ, ಬೇರೆ ಮಕ್ಕಳಿಗೆ ಹೋಲಿಸಿ ಅವರಲ್ಲಿರುವ ಪ್ರತಿಭೆ ಕುಗ್ಗುವಂತೆ ಮಾಡುತ್ತಾರೆ. ಅದು ಒಳ್ಳೆಯದಲ್ಲ. ಯಾವ ಪಾಲಕರು ತಮ್ಮ ಮಕ್ಕಳಿಗೆ ಪರೀಕ್ಷೆಯ ಮುನ್ನ ಉತ್ತಮ ಪರಿಸರ ನಿರ್ಮಿಸಿ, ಆತ್ಮಸ್ಥೈರ್ಯ ಬೆಳೆಸಿ ಪ್ರೀತಿಯನ್ನು ಕೊಡುತ್ತಾರೋ ಅಂತಹ ಮಕ್ಕಳು ಉತ್ತಮ ಫಲಿತಾಂಶ ತಂದು ಕೊಡುವುದಲ್ಲದೇ ಭವಿಷ್ಯದಲ್ಲಿ ಕೂಡ ಯಶ ಕಾಣುತ್ತಾರೆ. ಯಾವುದೇ ಮಕ್ಕಳನ್ನು ಬುದ್ಧಿಯಿಲ್ಲವೆಂದು, ಶತ ದಡ್ಡನೆಂದು ಹೀಗಳಿಯಬಾರದು, ಸಕಾರಾತ್ಮಕತೆಯನ್ನು ಮಾತ್ರ ಗುರುತಿಸಿ ಪ್ರೋತ್ಸಾಹಿಸಬೇಕು. ಪಾಲಕರು ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಬೇಕು. ಭಯದ ವಾತಾವರಣ ಯಾವುದೇ ಥರದ ಉತ್ತಮ ಫಲಿತಾಂಶವನ್ನು ಕೊಡದು ಎಂದು ಎಲ್ಲಾ ಪೋಷಕರು ಮನದಟ್ಟು ಮಾಡಿಕೊಳ್ಳಬೇಕು.
-ಶಾಂಭವಿ ಸತೀಶ್, ಉಡುಪಿ

ಪಾಲಕರ ಪಾತ್ರ ಮುಖ್ಯ
ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳ ಪಾತ್ರಕ್ಕಿಂತ ಪಾಲಕರ ಪಾತ್ರ ಮುಖ್ಯವಾಗಿರುತ್ತದೆ. ಏಕೆಂದರೆ ವಿದ್ಯಾರ್ಥಿಗಳು ಎಷ್ಟೇ ತಯಾರಿ ನಡೆಸಿದರೂ ಪರೀಕ್ಷೆಯ ಸಮಯದಲ್ಲಿ ಧೈರ್ಯ ಕಳೆದುಕೊಳ್ಳುತ್ತಾರೆ. ಆಗ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಪಾಲಕರೇ ಮಾಡಬೇಕು. ತಮ್ಮ ಮಕ್ಕಳ ಮನೋಸ್ಥೈರ್ಯವನ್ನು ಅರಿತುಕೊಂಡು ಅದಕ್ಕೆ ಬೇಕಾದ ಎಲ್ಲ ಮಾರ್ಗದರ್ಶನವನ್ನು ನೀಡುವುದು ಒಳಿತು. ಮಕ್ಕಳಿಗೆ ಮಾನಸಿಕ ಸ್ಥೈರ್ಯ ಪರೀಕ್ಷೆಯಲ್ಲಿ ಕೈ ಕೊಡುವುದೇ ಹೆಚ್ಚು. ಆದ ಕಾರಣ ಪರೀಕ್ಷಾ ಪೂರ್ವ ತಯಾರಿಯಲ್ಲಿ ಅವರೊಂದಿಗೆ ಸಹಕರಿಸಿ ಪರೀಕ್ಷಾ ಭೂತವು ಅವರನ್ನು ಹೆದರಿಸದಂತೆ ಸಜ್ಜುಗೊಳಿಸಬಹುದು.  ಅವರಲ್ಲಿರುವ ಆಟದ ಬುದ್ಧಿಯನ್ನು ಪಾಠಕ್ಕೂ ಉಪಯೋಗಿಸಿಕೊಂಡು ಆಡುತ್ತಾ ಕಲಿಯುವಂತೆ ಪ್ರೋತ್ಸಾಹಿಸಬೇಕು.
- ನಾಗವೇಣಿ. ಹ. ಉಮತಾರ, ನೀರಬೂದಿಹಾಳ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.