ಬೈಟುಕಾಫಿ

ದೆಹಲಿಯಲ್ಲಿ ಕನ್ನಡ ನಾಟಕ

ದೆಹಲಿಯಲ್ಲಿ ಕನ್ನಡ ನಾಟಕ
Published On :

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯವರು 2014ರಲ್ಲಿ ನಡೆಸುತ್ತಿರುವ 16ನೇ ಭಾರತ್ ರಂಗ್ ಮಹೋತ್ಸವಕ್ಕೆ ನಮ್ಮ ಕನ್ನಡದ ನಾಲ್ಕು ನಾಟಕಗಳು ಆಯ್ಕೆಯಾಗಿವೆ. ಜನವರಿ 4ರಂದು ಈ ಮಹೋತ್ಸವ ಕಾಮಿನಿ ಸಭಾಂಗಣದಲ್ಲಿ ಆರಂಭವಾಗಿ ಜ.19ರವರೆಗೂ ನಡೆಯುತ್ತದೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ನಾಟಕಗಳಿವೆ. ಜ.5ರಂದು ಮಹೋತ್ಸವದ ಪ್ರಥಮ ಪ್ರದರ್ಶನ, ಸಮುದಾಯ ತಂಡದ ಪ್ರಮೋದ್ ಶಿಗ್ಗಾಂವ್ ನಿರ್ದೇಶನದ 'ಪಂಪ ಭಾರತ'. ಈ ಮಹೋತ್ಸವದಲ್ಲಿ ಮೊದಲ ಬಾರಿಗೆ ತನ್ನ ನಿರ್ದೇಶನದ ನಾಟಕ ಪ್ರದರ್ಶನವಾಗುತ್ತಿದೆ ಎಂಬುದು ಸಂತಸದ ವಿಷಯ ಎನ್ನುತ್ತಾರೆ ನಿರ್ದೇಶಕ ಪ್ರಮೋದ್. ಇದೇ ನಾಟಕ ಸೆಟಲೈಟ್ ಫೆಸ್ಟಿವಲ್‌ನಲ್ಲಿ ಜ.10ರ ಸಂಜೆ ಇಂಪಾಲ್‌ನ ಶ್ರೈನ್ ಪ್ಲೇ ಹೌಸ್‌ನಲ್ಲೂ, ಜ.12ರ ಸಂಜೆ 6.30ಕ್ಕೆ ಗವಾಹಟಿಯ ರವೀಂದ್ರ ಭವನದಲ್ಲಿಯೂ ಪ್ರದರ್ಶನವಾಗುತ್ತಿದೆ. ಈ ಉತ್ಸವದಲ್ಲಿ ಈ ನಾಟಕಕ್ಕೆ ಮೂರು ಪ್ರದರ್ಶನ.
ಜ.6ರಂದು ಎಲ್‌ಟಿಜಿಯಲ್ಲಿ ಅಭಿಜ್ಞಾನ ಥಿಯೇಟರ್ ರಿಸರ್ಚ್ ಫೌಂಡೇಷನ್‌ನ ಜೋಸೆಫ್‌ಜಾನ್ ನಿರ್ದೇಶನದ 'ಪುರುಷ ಸೂಕ್ತ' ನಾಟಕ. ಜ.8ರಂದು ಕಾಮಿನಿಯಲ್ಲಿ ನಟನ ರಂಗಮಂಟಪದವರಿಂದ ಡಾ.ಬಿ.ಜಯಶ್ರೀ ನಿರ್ದೇಶನದ 'ಅಗ್ನಿಪಥ್‌' ಹಾಗೂ ಜ.12ರಂದು ಅಭಿಮಂಚ್‌ನಲ್ಲಿ ರಾತ್ರಿ 8.30ಕ್ಕೆ ಥಿಯೇಟರ್ ತತ್ಕಾಲ್ ತಂಡದ ನಟರಾಜ್ ಹೊನ್ನವಳ್ಳಿ ನಿರ್ದೇಶನದ 'ಶೇಕ್ಸ್‌ಪಿಯರ್ ಮನೆಗೆ ಬಂದ' ನಾಟಕವಿದೆ. ದೇಶವಿದೇಶಗಳ ನಾಟಕಗಳು ಪ್ರದರ್ಶನವಾಗುತ್ತಿರುವ ಈ ಮಹೋತ್ಸವದಲ್ಲಿ ಈ ನಾಲ್ಕೂ ನಾಟಕಗಳು ಕನ್ನಡ ರಂಗಭೂಮಿಗೆ ಕೀರ್ತಿಯನ್ನು ತರಲಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.