ಬೈಟುಕಾಫಿ

ಬಾರೆ ಸಂತೆಗೆ ಹೋಗೋಣ ಬಾ!

ಬಾರೆ ಸಂತೆಗೆ ಹೋಗೋಣ ಬಾ!
Published On :

ಕಣ್ಣು ತುಂಬುವ ಬಣ್ಣಗಳು. ಎಲ್ಲರ ಕಾಸಿಗೂ ತಕ್ಕ ಕ್ಯಾನ್‌ವಾಸ್. ಇದು ಚಿತ್ರಸಂತೆ.
ಕರ್ನಾಟಕ ಚಿತ್ರಕಲಾ ಪರಿಷತ್ ನಡೆಸುತ್ತಿರುವ ಚಿತ್ರಸಂತೆಗೆ ಈಗ 11ರ ಹರೆಯ. ಕಳೆದ ಹತ್ತು ವರ್ಷಗಳಿಂದ ಪರಿಷತ್‌ನ ಆವರಣ ಮತ್ತು ಕುಮಾರಕೃಪಾ ರಸ್ತೆಯಲ್ಲಿ ನಡೆಯುವ ಈ ಸಂತೆ ಈ ಬಾರಿ ಜ.5ರಂದು ಮೈದುಂಬಿಕೊಳ್ಳಲಿದೆ. 

ಒಂದೇ ದಿನದಲ್ಲಿ ಸುಮಾರು ಎರಡು ಸಾವಿರ ಮಂದಿ ಕಲಾವಿದರು ತಮ್ಮ ಕಲಾಕೃತಿಗಳನ್ನು ಮಾರುವುದು, ಲಕ್ಷಾಂತರ ಮಂದಿ ಕಲಾಕೃತಿಗಳನ್ನು ವೀಕ್ಷಿಸುವುದು, ಸಾಂಪ್ರದಾಯಿಕ, ಆಧುನಿಕ, ಸಮಕಾಲೀನ ಕೃತಿಗಳ ಸಂಗಮ, ಲಕ್ಷಾಂತರ ಮೌಲ್ಯದ ವ್ಯಾಪಾರ... ಇವೆಲ್ಲ ಒಂದೇ ಕಡೆ ನಡೆಯುವುದು ವಿಶೇಷ.

ಇಲ್ಲಿಯ ಮಾರಾಟ ಪ್ರಮಾಣ ಮತ್ತು ಕಲಾಸಕ್ತರು ನೀಡುವ ಪ್ರೋತ್ಸಾಹ ಒಂದು ದಾಖಲೆಯೇ ಸರಿ. ದಕ್ಷಿಣ ಭಾರತದಲ್ಲೇ ಇದು ಅನನ್ಯವಾದುದು.
ಈ ವರ್ಷ ಸುಮಾರು 1200 ಮಾರಾಟ ಮಳಿಗೆಗಳಿವೆ. ಬೇರೆ ರಾಜ್ಯಗಳಿಂದಲೂ ಸಾಕಷ್ಟು ಕಲಾವಿದರು ಬರುತ್ತಿದ್ದಾರೆ. ಸಂತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಎಸ್.ಎಂ.ಕೃಷ್ಣ, ಆರ್.ವಿ.ದೇಶಪಾಂಡೆ, ಉಮಾಶ್ರೀ, ರೋಷನ್ ಬೇಗ್ ಮುಖ್ಯ ಅತಿಥಿಗಳು.

ನಗರವಾಸಿಗಳಿಗೆ ನಮ್ಮತನದ ಅರಿವು ಮೂಡಿಸಲು ಸಹಕಾರಿ, ಇದು ನನಗೆ ಹಳ್ಳಿಯ ಸಂತೆಯ ಅನುಭೂತಿ ನೀಡುತ್ತದೆ. ನಮ್ಮ ಕಲಾವಿದರ ಕೃತಿಗಳನ್ನು ನೋಡುವ ಸುಯೋಗ.
- ಕೆ.ಜಗನ್ನಾಥ ನಾಯರಿ, ಉಪನ್ಯಾಸಕ

ಚಿತ್ರಸಂತೆ ಅತ್ಯುತ್ತಮವಾದ ಒಂದು ಕಲಾವೇದಿಕೆ. ಈ ವರ್ಷ ಇಲ್ಲಿ ನನ್ನ ಶಿಷ್ಯರೂ ಭಾಗವಹಿಸುತ್ತಿರುವುದು ಸಂತೋಷ ತಂದಿದೆ.
- ಶಾಂತಿ ವಾಸು, ಕಲಾವಿದೆ

- ವಿ.ಎಸ್. ನಾಯಕ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.