ಬೈಟುಕಾಫಿ

ಅಪಘಾತ ನಿಯಂತ್ರಣದ ಪೂರಕ ಅಂಶಗಳು

Published On :

ಪ್ರಸ್ತುತ ಕರ್ನಾಟಕ ರಾಜ್ಯದ ಪ್ರಮುಖ ನಗರ ಮತ್ತು ಪಟ್ಟಣ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ವಾಹನ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಸಂಚಾರ ಪೊಲೀಸರು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಚಾಲಕರೂ ಸಹ ನಿಯಮ ಪಾಲಿಸಿದರೆ ಅಪಘಾತ ಸಂಖ್ಯೆ ನಿಯಂತ್ರಿಸಬಹುದು.
= ಅತಿ ಪ್ರಮುಖವಾದ ಎಲ್ಲಾ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸಂಚಾರ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಯನ್ನು ಹೆಚ್ಚಿಸುವುದು. ವಾಹನ ತಪಾಸಣೆಯನ್ನು ಪೊಲೀಸ್ ಉಪನಿರೀಕ್ಷಕರು ಕಟ್ಟುನಿಟ್ಟಾಗಿ ಜರುಗಿಸುವ ಸಂಬಂಧ ಪ್ರಮುಖ ಆದ್ಯತೆ ನೀಡುವುದು
= ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಚಾಲನಾ ಪರವಾನಗಿ(ಡಿ.ಎಲ್) ನೀಡುವಲ್ಲಿ ಬಿಗಿ ನಿಲುವು ದೋರಣೆಗಳಿಂದ ಕಡಿವಾಣ ಹಾಕುವುದು
=     ವಾಹನಗಳ ಒತ್ತಡವಿರುವ ಎಲ್ಲಾ ರಸ್ತೆಗಳಲ್ಲಿ ಜೀಬ್ರಾ ಕ್ರಾಸಿಂಗ್ ಮತ್ತು ರಸ್ತೆ ಉಬ್ಬುಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಪೇಂಟಿಂಗ್ ಮಾಡುವಂತೆ ನೋಡಿಕೊಳ್ಳುವುದು
=     ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ಸರಿಯಾದ ಸಂಚಾರ ಮಾರ್ಗದರ್ಶನದ ಫಲಕಗಳನ್ನು ಅಳವಡಿಸುವುದು
=     ಅತಿವೇಗ ಹಾಗೂ ಮದ್ಯಸೇವಿಸಿ ವಾಹನ ಚಾಲನೆ ಮಾಡುವ ಚಾಲಕರಿಗೆ ಎಚ್ಚರಿಕೆಯ ಸೂಚನಾ ಫಲಕಗಳನ್ನು ಹಾಕುವುದು
=     ರಸ್ತೆ ರಿಪೇರಿ ನವೀಕರಣಗೊಳಿಸುವುದನ್ನು ಕಾಲಕಾಲಕ್ಕೆ ಶೀಘ್ರವಾಗಿ ಮಾಡಿಸುವುದು
=     ಪ್ರಮುಖ ರಸ್ತೆಗಳಲ್ಲಿ ಹಾಗೂ ರಾಸ್ತಿ ವೇಳೆ ಜನಸಂಚಾರ ಹೆಚ್ಚಿರುವ ರಸ್ತೆಗಳಲ್ಲಿ ಬೀದಿದೀಪ ಸದಾ ಹಾಕಿರುವಂತೆ ಎಚ್ಚರವಹಿಸುವುದು
=     ನಗರ, ಪಟ್ಟಣಗಳಲ್ಲಿ ಮಹಾನಗರ ಪಾಲಿಕೆ ಅಥವಾ ಪುರಸಭೆಗಳು ರಸ್ತೆ ಸಂಚಾರ ಸುವ್ಯವಸ್ಥೆ ಬಗ್ಗೆ ಗಮನಹರಿಸುವುದು.

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.