ಸ್ವಯಂಕೃತ ವೃದ್ಧಾಶ್ರಮಗಳು
ಹೌದು, ಇಂದು ಎಲ್ಲ ಹಳ್ಳಿಗಳಲ್ಲಿಯೂ ಸ್ವಯಂಕೃತ ವೃದ್ಧಾಶ್ರಮಗಳು ಹುಟ್ಟಿಕೊಂಡಿರುವುದು ನಮ್ಮ ದುರೃಷ್ಟವೇ ಸರಿ. ಹಾಗಂತ ಹಳ್ಳಿಗಳಲ್ಲಿರುವ ಎಲ್ಲ ಕುಟುಂಬಗಳು ವೃದ್ಧಾಶ್ರಮ ಎನ್ನಲು ಸಾಧ್ಯವಿಲ್ಲ. ಹಳ್ಳಿಗಳಲ್ಲಿ ಈಗಲೂ ಅವಿಭಕ್ತ ಕುಟುಂಬಗಳಿವೆ. ಅಪ್ಪ-ಅಮ್ಮಂದಿರು, ಅಜ್ಜ-ಅಜ್ಜಿಯರು ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ಪ್ರೀತಿ, ವಾತ್ಸಲ್ಯದಿಂದ ವಾಸಿಸುತ್ತಿದ್ದಾರೆ. ಇದಕ್ಕೆ ಒಂದು ಉತ್ತಮ ನಿದರ್ಶನ ಎಂಬಂತೆ ನನ್ನ ಗೆಳೆಯನೊಬ್ಬ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅವನು ತಂದೆ-ತಾಯಿಯನ್ನು, ವಿದವೆಯಾದ ಅಕ್ಕ ಹಾಗೂ ಆಕೆಯ ಮೂವರು ಮಕ್ಕಳನ್ನು ಬೆಂಗಳೂರಿಗೇ ಕರೆದುಕೊಂಡು ಬಂದು ಒಟ್ಟಿಗೇ ವಾಸಿಸುತ್ತಿದ್ದಾನೆ. ಈ ನನ್ನ ಗೆಳೆಯ ತಂದೆ-ತಾಯಿಯರನ್ನು ದಿಕ್ಕಿಲ್ಲದವರ ಥರ ಅಲ್ಲಿಯೇ ಬಿಟ್ಟಿದ್ದರೆ, ಆಗ ಅದನ್ನು ನಾವು ವೃದ್ಧಾಶ್ರಮ ಎನ್ನಲು ಸಾಧ್ಯವಾಗುತ್ತಿತ್ತು. ಹಾಗಾಗಿ ಎಲ್ಲ ಹಳ್ಳಿಗಳೂ ವೃದ್ಧಾಶ್ರಮವಾಗಿಲ್ಲ, ಆಗುವುದೂ ಸಾಧ್ಯವಿಲ್ಲ.
-ಲಕ್ಕಪ್ಪ ರಾ ಪುಜಾರಿ, ಜೇವರಗಿ
ಹಳ್ಳಿಗಳು ಸಹಬಾಳ್ವೆಯ ಪ್ರತೀಕ
ಖಂಡಿತ ಇಲ್ಲ, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿಲ್ಲ. ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವಂತೆ ಹಳ್ಳಿಯವರಾದರೇನು ನಗರದವರಾದರೇನು ಒಂದೆಡೆಯಿಂದ ಮತ್ತೊಂದೆಡೆ ಉದ್ಯೋಗವನ್ನರಸಿ ಹೋಗುವುದು ಇಂದಿನ ಅನಿವಾರ್ಯತೆ. ಹಾಗೆಂದ ಮಾತ್ರಕ್ಕೆ, ಹಳ್ಳಿಯಲ್ಲಿ ಇರುವವರು ಅಥವಾ ಹಳ್ಳಿಯಿಂದ ವಲಸೆ ಹೋದವರೆಲ್ಲಾ ತಂದೆ-ತಾಯಿಯನ್ನು ಗೌರವಿಸುತ್ತಿಲ್ಲವೆಂದಲ್ಲ, ಪ್ರೀತಿಯಿಂದ ನೋಡಿಕೊಳ್ಳುತ್ತಿಲ್ಲವೆಂದಲ್ಲ. ಬದಲಾಗಿ ನಗರ ಪ್ರದೇಶಗಳೇ ಇಂದು ವೃದ್ಧಾಶ್ರಮಗಳಾಗುತ್ತಿವೆ. ಅಲ್ಲದೆ ವೃದ್ಧಾಶ್ರಮಗಳಿಗೆ ಹೆತ್ತವರನ್ನು ಕಳುಹಿಸುತ್ತಿರುವುದು ಕೂಡ ನಗರಗಳಲ್ಲೇ. ಹಳ್ಳಿಯಲ್ಲಿದ್ದುಕೊಂಡೇ ಕೃಷಿಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅದೆಷ್ಟೋ ಯುವಕರು ತಂದೆ-ತಾಯಿಯನ್ನು ನೋಡಿಕೊಳ್ಳ್ಳುತ್ತಲೆ ಸಹಬಾಳ್ವೆ ನಡೆಸುತ್ತಿರುವ, ಅವಿಭಕ್ತ ಕುಟುಂಬಗಳಿಂದ ಕೂಡಿರುವ ಅನೇಕ ಉದಾಹರಣೆಗಳಿವೆ. ಆದ್ದರಿಂದ ಸಹಕಾರ ಸಂಬಂಧಗಳನ್ನು ಬೆಸೆಯುವ, ಸಹಬಾಳ್ವೆಯ ಪ್ರತೀಕವೇ ಹಳ್ಳಿಗಳು. ಹೆತ್ತವರನ್ನು ಗೌರವಿಸಲು ನಗರವಾದರೇನು ಹಳ್ಳಿಯಾದರೇನು?
-ಮಂಜುಳಾ. ಕುಷ್ಟಗಿ, ಸೂಳೇಬಾವಿ
ಸೂಕ್ತ ವಾತಾವರಣ
ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಹಲವಾರು ಸಮಸ್ಯೆಗಳ ಜತೆ ಪರಿಸರ ಮಾಲಿನ್ಯ ಶಬ್ಧಮಾಲಿನ್ಯ ಸಂಚಾರದಟ್ಟತೆ ಜನರ ಜಂಜಾಟ ಹೀಗೆ ಹಲವಾರು ವಿಷಯದಲ್ಲಾಗಬಹುದು ಮತ್ತು ಕೆಲಸದಲ್ಲಾಗಬಹುದು ಒತ್ತಡದ ವಾತಾವರಣದಲ್ಲಿ ಪ್ರಾಯದವರೇ ಪರದಾಡುವ ಸ್ಥಿತಿ ಇದ್ದಾಗ ಇನ್ನು ವೃದ್ಧರ ಸ್ಥಿತಿ ಶೋಚನೀಯ. ಆ ಕಾರಣದಿಂದ ವಯಸ್ಸಾದವರಿಗೆ, ವೃದ್ಧರಿಗೆ ಅವರವರ ಹಳ್ಳಿಗಳೇ ಸೂಕ್ತ ವಾತಾವರಣ ಅನ್ನುವದರಲ್ಲಿ ಎರಡು ಮಾತಿಲ್ಲ. ಹಳ್ಳಿಗಳಲ್ಲಿ ನಗರಗಳಲ್ಲಿರುವಂತಹ ಯಾವುದೇ ರೀತಿ ಜಂಜಾಟ ಇರದು. ಅಲ್ಲದೆ ಹಳ್ಳಗಳಲ್ಲಿ ಒಳ್ಳೆಯ ವಿಶ್ವಾಸ, ಬಾಂಧವ್ಯ ಇದ್ದಹಾಗೆ ನಗರಗಳಲ್ಲಿ ಇರುವುದಿಲ್ಲ. ಅನುಕೂಲಕರವಾದ ವಾತಾವರಣ ಹಳ್ಳಿಗಳಲ್ಲಿ ಇರುವಷ್ಟು ನಗರಗಳಲ್ಲಿ ಸಿಗದು. ಆ ಕಾರಣದಿಂದ ಹಳ್ಳಿಗಳು ವೃದ್ಧರಿಗೆ ಆಶ್ರಮಗಳಾಗುತ್ತವೆ ಅನ್ನುವುದರಲ್ಲಿ ಎರಡು ಮಾತಿಲ್ಲ.
- ಶಿವಕುಮಾರ ಅಂಗಡಿ, ಚಿಕ್ಕಶೇಲ್ಲಿಕೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

