ಬೈಟುಕಾಫಿ

ವಿಯೋಗವೇದನೆ ಬಿಡಲಿಲ್ಲ!

Published On :

ಸ್ವಾಮಿ ವಿವೇಕಾನಂದರು ಆಲ್ಮೋರದಲ್ಲಿದ್ದಾಗ ಅವರಿಗೆ ಆಘಾತಕಾರಿ ಸುದ್ದಿಗಳು ತಲುಪಿದವು. ಅಮೆರಿಕದ ಅತ್ಯಂತ ನಿಷ್ಠಾವಂತ ಬೆಂಬಲಿಗಳೂ, ಅಗ್ರಗಣ್ಯ ಮಹಿಳೆಯೂ ಆದ ಬ್ಯಾಗ್ಲೀಯಳ ಮರಣ, ನೆಚ್ಚಿನ ಸಹಾಯಕ ಗುಡ್ವಿನ್ನನ ನಿಧನ, ಸಂತ ಪವಾಹಾರಿ ಬಾಬಾರ ನಿರ್ವಾಣ ಹಾಗೂ ಪ್ರಬುದ್ಧ ಭಾರತ ಪತ್ರಿಕೆಯ ಸಂಪಾದಕ ರಾಜಂ ಅಯ್ಯರ್‌ರವರ ಅಕಾಲಿಕ ಮರಣ. ಒಂದರಮೇಲೊಂದರಂತೆ ಬಂದ ವಿಯೋಗವಾರ್ತೆಗಳು ಸ್ವಾಮೀಜಿಯನ್ನು ತುಂಬಾ ದುಃಖಕ್ಕೀಡುಮಾಡಿದವು. ಆಗ ಒಬ್ಬರು, 'ಸಂನ್ಯಾಸಿಗಳು ಹೀಗೆ ದುಃಖಪಡುವುದೆ?' ಎಂದರು. 'ಏನು? ಸನ್ಯಾಸಿಗಳಾದ ಮಾತ್ರಕ್ಕೆ ನಮಗೆ ಹೃದಯವಿಲ್ಲವೇ?' ಎಂದರು ಸ್ವಾಮೀಜಿ.
'ಪವಾಹಾರಿ ಬಾಬಾರವರು ಯಜ್ಞೇಶ್ವರನಿಗೆ ತಮ್ಮ ಶರೀರವನ್ನೇ ಸಮರ್ಪಿಸಿಬಿಟ್ಟರು' ಎಂಬುದನ್ನು ಕೇಳಿ ಶಿಷ್ಯನೊಬ್ಬ, 'ಸ್ವಾಮೀಜಿ, ಅದು ಆತ್ಮಹತ್ಯೆ ಮಾಡಿಕೊಂಡಂತಾಗಲಿಲ್ಲವೆ?'ಎಂದಾಗ, ಸ್ವಾಮೀಜಿ, 'ನಾನು ಹೇಗೆ ಹೇಳಲಿ? ನನ್ನ ಅಳತೆಗೆ ನಿಲುಕದಷ್ಟು ದೊಡ್ಡವರು ಅವರು. ತಾವು ಏನು ಮಾಡುತ್ತಿರುವೆನೆಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು' ಎಂದಷ್ಟೇ ಹೇಳಿದರು.
ಆಘಾತವನ್ನುಂಟು ಮಾಡಿದ ಮತ್ತೊಂದು ಸುದ್ದಿ, 'ಪ್ರಬುದ್ಧ ಭಾರತ' ಪತ್ರಿಕೆಯ ಸಂಪಾದಕ ರಾಜಂ ಅಯ್ಯರ್‌ರ ಅಕಾಲಿಕ ಮರಣ. ಈ ಪತ್ರಿಕೆಯ ಮೇಲೆ ಸ್ವಾಮೀಜಿಗೆ ತುಂಬಾ ವಿಶ್ವಾಸ-ಮಮತೆ. ಇದು ಸಾಮಾನ್ಯ ಜನರು ಹಾಗೂ ಎಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾರಂಭಿಸಿದ ಅತ್ಯುನ್ನತ ದರ್ಜೆಯ ಪತ್ರಿಕೆಯಾಗಿತ್ತು. ಇಂತಹ ಪತ್ರಿಕೆ ರಾಜಂ ಅಯ್ಯರ್ ನಿಧನದೊಂದಿಗೆ ನಿಂತುಹೋಯಿತು. ನಂತರ ಸ್ವಾಮೀಜಿ ಪತ್ರಿಕೆಯ ಜವಾಬ್ದಾರಿಯನ್ನು ಕ್ಯಾಪ್ಟನ್ ಸೇವಿಯರ್ ಅವರಿಗೆ ಒಪ್ಪಿಸಿದರು.



-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.