ಅರಿಶಿಣ ಪ್ರಯೋಜನ

Updated on: 

ಅರಿಶಿಣ ಕೆನ್ನೆಗೆ ಹಚ್ಕೊಳ್ಳೋದಕ್ಕೆ ಮಾತ್ರ ಇರೋದಲ್ಲ. ಅದರ ಬಳಕೆ ಶುಭಕಾರ್ಯಗಳಲ್ಲಿ ಮಾತ್ರ ಅಂದಕೊಂಡುಬಿಟ್ಟಿದ್ದೀರಾ? ಆರೋಗ್ಯಕ್ಕೆ ಕೂಡ ಅದು ಪೂರಕ.
= ಅರಿಶಿಣದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ ಸೆಪ್ಟಿಕ್ ಗುಣಗಳಿವೆ. ಇದು ಗಾಯವನ್ನು ಮಾಗಿಸಿ, ತ್ವಚೆಯನ್ನು ಯಥಾಸ್ಥಿತಿಗೆ ತರಲು ಸಹಕರಿಸುತ್ತದೆ.
    ಅರಿಶಿಣ ಸೇವನೆಯಿಂದ ಏರುವ ತೂಕವನ್ನು ಹತೋಟಿಯಲ್ಲಿಡಬಹುದು.
    ಮೆದೋಜೀರಕ ಗ್ರಂಥಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಪುರುಷರ ಜನನಾಂಗದ ಕ್ಯಾನ್ಸರ್ ಪರಿಹರಿಸುವಲ್ಲಿ ಅರಿಶಿಣ ಪ್ರಧಾನ ಪಾತ್ರ ವಹಿಸುತ್ತದೆ. ರಕ್ತನಾಳಗಳಲ್ಲಿ ಗಡ್ಡೆ ಬೆಳೆಯದಂತೆ ಕಾಪಾಡುತ್ತದೆ.
    ಮಕ್ಕಳಲ್ಲಿ ಲ್ಯೂಕೆಮಿಯಾ ಬರದಂತೆ ತಡೆಯಲು ಅರಿಶಿಣ ಪರಿಣಾಮಕಾರಿ.
    ಕರುಳಿನಲ್ಲಿರುವ ಹೆಪಾಟಿಕ್ ಕೋಶಗಳನ್ನು ಪುನಃಶ್ಚೇತನಗೊಳಿಸಿ, ಅವುಗಳಲ್ಲಿ ನಂಜಿನ ವಿರುದ್ಧ  ಹೋರಾಡುವಂತಹ ಸಾಮರ್ಥ್ಯವನ್ನು ಇಮ್ಮಡಿಗೊಳಿಸುತ್ತದೆ.
    ಸಹಜ ನೋವು ನಿವಾರಕ ಮತ್ತು ಉರಿಯೂತ ನಿರೋಧಕ ಗುಣ ಹೊಂದಿದೆ. ಸಂಧಿವಾತ, ವಾತರೋಗ, ಕರುಳು ಸಂಬಂಧಿತ ಕಾಯಿಲೆ ನಿವಾರಿಸಲು ಅರಿಶಿಣ ಬಳಸಲಾಗುತ್ತದೆ.
    ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಮಸಾಲೆ ಪದಾರ್ಥಗಳ ಜತೆ ಅರಿಶಿಣವನ್ನು ಬಳಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com