ಪ್ರಪಂಚದಲ್ಲಿ ಶೇ.80ರಷ್ಟು ಜನರಿಗೆ ತಾವು ಮಾಡುವ ಉದ್ಯೋಗದ ಬಗ್ಗೆ ತೃಪ್ತಿಯಿಲ್ಲವಂತೆ! ಪ್ರತಿ ಒಬ್ಬ ತೃಪ್ತ ಉದ್ಯೋಗಿಗೆ ಇಬ್ಬರು ಅತೃಪ್ತ, ಅಸಂತೋಷಿ ಉದ್ಯೋಗಿಗಳಿದ್ದಾರಂತೆ. ಇದರಲ್ಲಿ ಶೇ.63 ಮಂದಿ ಕಾರಣಾಂತರಗಳಿಂದ ಕೆಲಸ ಬದಲಿಸದೆ ಇರುವ ಕೆಲಸವನ್ನೇ ಹಳಿದುಕೊಳ್ಳುತ್ತಾ ಮಾಡುತ್ತಾರಾದರೆ ಶೇ.24 ಮಂದಿ ಮಾತ್ರ ಕೆಲಸ ಬದಲಿಸುವತ್ತ, ತಮ್ಮ ಆಸಕ್ತಿಯತ್ತ ಹೊರಳಲು ಪ್ರಯತ್ನಿಸುತ್ತಾರಂತೆ. ಶೇ.90 ಮಂದಿಗೆ ಕೆಲಸವೆಂಬುದು ಒತ್ತಡದ ಗೂಡಾಗಿದೆ.