ಮಾನವ ಇಂದು ತಂತ್ರಜ್ಞಾನದ ಉತ್ತುಂಗದಲ್ಲಿದ್ದಾನೆ. ಆಧುನಿಕ ಉಪಕರಣವು ಎಷ್ಟು ಪೂರಕವೋ ಅಷ್ಟೇ ಮಾರಕವೂ ಆಗಿದೆ. ಮಕ್ಕಳು 18ನೇ ವಯಸ್ಸಿನವರೆಗೆ ಈ 5 ಸಿ ಗಳಿಂದ ದೂರವಿದ್ದರೆ ಸೂಕ್ತ. ಕಂಪ್ಯೂಟರ್, ಕೇಬಲ್, ಸಿನೆಮಾ, ಸೆಲ್ಫೋನ್, ಕ್ರಿಕೆಟ್. ಅದರಲ್ಲೂ ಈ ಮೊಬೈಲ್ನ ಪಾತ್ರ ವಿಪರೀತವಾಗಿ ಹೋಗಿದೆ. ಹದಿನೆಂಟರ ನಂತರ ಯಾವುದನ್ನು ಹೇಗೆ ಬಳಸಬೇಕು ಎಂಬ ಪರಿಜ್ಞಾನ ಬಂದಿರುತ್ತದೆ. ಮಕ್ಕಳನ್ನು ಪ್ರಪಂಚದ ಜನರ ಜತೆ ಒಡನಾಡುವುದನ್ನು ಕಲಿಸುವಲ್ಲಿ ನಾವೆಲ್ಲರೂ ಶ್ರಮಿಸಬೇಕಾದ ಜರೂರಿದೆ.ಟಿ
= ಮಲ್ಲಿಕಾರ್ಜುನ. ಜಿ. ಆರ್, ಕಳಸ
ಮಕ್ಕಳಿಗೆ ಬೇಡವೇ ಬೇಡ
ಮಕ್ಕಳ ಮನಸ್ಸು ಹಸಿಮಣ್ಣಿನಂತೆ ಯಾವ ಆಕಾರ ಬೇಕಾದರೂ ಕೊಡಬಹುದು. ಹೆತ್ತ ವರು, ಶಿಕ್ಷಕರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮನೆಯಿಂದ ಹೊರಗೆ ಉನ್ನತ ವ್ಯಾಸಂಗಕ್ಕೆ ಹೋದಾಗ ಇದರ ಅವಶ್ಯಕತೆ ಇದೆ. ಅಲ್ಲದೇ ಆಗ ಕೂಡ ಇದನ್ನು ಎಲ್ಲಿ, ಎಷ್ಟು ಸಮಯ ಉಪಯೋಗಿಸಬೇಕು ಎಂಬುದನ್ನು ತಿಳಿಸಬೇಕು. ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟು ಮಾಡುವ ಮೊಬೈಲ್ ಬೇಡವೇ ಬೇಡ. ಆದ್ದರಿಂದ ಓದುವ ಮಕ್ಕಳಿಗೆ ಇದು ಸೂಕ್ತವಲ್ಲ. ಟಿ
= ಜಯಲಕ್ಷ್ಮಿ, ಯಂ. ಬಿ, ಗೋಣಿಕೊಪ್ಪ
ಮೊಬೈಲ್ ಭೂತ ಕಾಡುತ್ತಿದೆ
ಮಕ್ಕಳಿಗೆ ಮೊಬೈಲ್ ಕೊಡಿಸುವುದು ಅನಿವಾರ್ಯವೇ ಅಲ್ಲ. ಮೊಬೈಲ್ ಕೊಡಿಸಿದ ಮೇಲೆ ಕಟ್ಟುಪಾಡುಗಳನ್ನು ಹಾಕುವ ಬದಲು ಕೊಡಿಸದೇ ಇರುವುದೇ ಉತ್ತಮ. ಅಷ್ಟಕ್ಕೂ ಅನಿರ್ವಾಯ ಬಂದರೆ ಕಾಯಿನ್ ಬಾಕ್ಸ್, ಎಸ್. ಟಿ. ಡಿ ಬೂತ್ಗಳಿಂದ ಮಾಡಬಹುದು. ಮೊಬೈಲ್ನಿಂದ ಮಕ್ಕಳಲ್ಲಿ ವಿದ್ಯಾಭ್ಯಾಸದ ಆಸಕ್ತಿ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಕೂತರೂ, ನಿಂತರೂ ಮೊಬೈಲ್ನದ್ದೆ ಜಪ. ಮಕ್ಕಳು ದುಷ್ಪರಿಣಾಮಕ್ಕೆ ಒಳಗಾಗದೇ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಅರಿಯುವಂತೆ ಮಾಡಬೇಕು. ಟಿ
= ಪ್ರತಿಮಾ ಪ್ರದೀಪ ಮರಳಿ, ಬೆಂಗಳೂರು