

ಬೇಕಾಗುವ ಸಾಮಗ್ರಿಗಳು
= ರಾಗಿ ಹಿಟ್ಟು 1 ಕಪ್ = ಉದ್ದಿನ ಬೇಳೆ ಅಥವಾ ಇಡೀ ಉದ್ದು ಅರ್ಧ ಕಪ್ = ಮೆಂತೆ ಅರ್ಧ ಚಮಚ (ಆಯ್ಕೆ) = ಉಪ್ಪು ರುಚಿಗೆ ತಕ್ಕಷ್ಟು ಅಡುಗೆ ಸೋಡಾ ಸ್ವಲ್ಪ = ಎಣ್ಣೆ ಸ್ವಲ್ಪ.
ಮಾಡುವ ವಿಧಾನ
ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಉದ್ದು ಮತ್ತು ಮೆಂತೆಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ರಾಗಿ ಹಿಟ್ಟನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ 8-10 ಗಂಟೆಗಳ ಕಾಲ ಬಿಡಿ. ಹಿಟ್ಟಿಗೆ ಸ್ವಲ್ಪ ಸೋಡಾ ಸೇರಿಸಬಹುದು. ಹಿಟ್ಟು ತುಂಬಾ ದಪ್ಪವಾಗಿದ್ದರೆ, ಸ್ವಲ್ಪ ನೀರು ಸೇರಿಸಿ. ತವಾ ಬಿಸಿ ಮಾಡಿ ಸ್ವಲ್ಪ ಎಣ್ಣೆಯನ್ನು ಹಾಕಿ ಒಂದು ಸೌಟಿನಷ್ಟು ಹಿಟ್ಟನ್ನು ತವಾದ ತುಂಬ ಹರಡುವಂತೆ ಹಾಕಿ. ಮೇಲೆ ಸ್ವಲ್ಪ ಎಣ್ಣೆ ಹಾಕಿ ದೋಸೆಯನ್ನು ಎರಡೂ ಬದಿ ಬೇಯಿಸಿ. ಟೊಮೇಟೊ ಚಟ್ನಿಯೊಂದಿಗೆ ದೋಸೆಯನ್ನು ತಿಂದರೆ ರುಚಿ ಹೆಚ್ಚು.