ಕಾಲ ಉರುಳಿದಂತೆ ಹಲವು ಬದಲಾವಣೆಗಳು ಆಗಿ ಹೋಗುತ್ತಿದೆ. ಇದಕ್ಕೆ ಮೂಲ ಕಾರಣ ತಂತ್ರಜ್ಞಾನದ ಮೋಡಿ. ಹಿಂದೆ ಪತ್ರ ಬರಹವನ್ನೇ ನಂಬಿ ಜೀವನ ನಡೆಸುತ್ತಿದ್ದವರು ಇಂದು ಪತ್ರ ಸಂಸ್ಕೃತಿಯನ್ನೇ ಮರೆತಿರುವುದು ವಿಷಾದನೀಯ. ಮೊಬೈಲ್ ಮೋಡಿಗೆ ಒಳಗಾಗಿರುವ ಮನುಷ್ಯನ ಈ ವ್ಯವಸ್ಥೆಯಿಂದ ಪತ್ರ ಬರಹ ಮೂಲೆ ಗುಂಪಾಗಿದೆ. ಅಲ್ಲದೆ ಪತ್ರ ಬರೆಯುವಂತಹ ಹವ್ಯಾಸಿಗರಿಗೂ ಇರಿಸು ಮುರಿಸು ತರಿಸಿದೆ. ನಾನೂ ತಂತ್ರಜ್ಞಾನಕ್ಕೆ ಒಳಗಾಗಿರುವದು ಸತ್ಯ. ಇದೀಗ ಪತ್ರ ಬರೆಯುವುದೆಂದರೆ ಅಲರ್ಜಿಯಾಗಿ ಪರಿಣಮಿಸಿದೆ. ಟಿ
= ಮಹಾಂತೇಶ ರಾಜಗೋಳಿ, ಬೈಲಹೊಂಗಲ
ಕೈ ಬರಹದ ಮೋಡಿ ಚೆಂದ
ನನ್ನ ದೃಷ್ಟಿಯಲ್ಲಿ ಕೈ ಬರಹ ಬೇಕೇಬೇಕು. ಎಷ್ಟೇ ಕಂಪ್ಯೂಟರೀಕರಣವಾದರೂ ಈ ಸಂಸ್ಕೃತಿಗೆ ಸಾಟಿ ಇಲ್ಲ. ಹಾಗೆಂದು ತಂತ್ರಜ್ಞಾನವನ್ನು ಅಲ್ಲಗಳೆಯಲಾಗದು. ಮುಂದಿನ ಜನಾಂಗಕ್ಕೆ ಅದೂ ಬೇಕು. ನಾನು ಕಲಾವಿದನಾದ್ದರಿಂದ ಬರಹವಿಲ್ಲದೇ ಬದುಕಲಾರೆ. ಚಿತ್ರ ಬರೆಯುವ ನಾನು ಅಕ್ಷರವನ್ನು ದುಂಡಗೆ ಬರೆಯುತ್ತೇನೆ. ನಾನು ನನ್ನ ಹೆತ್ತವರಿಗಾಗಲಿ, ಸಹೋದರ-ಸಹೋದರಿಯರಿಗಾಗಲಿ ಪತ್ರ ಬರೆದವನೇ ಅಲ್ಲ. ಕಾರಣ ಬಾಲ್ಯದಿಂದ ಎಲ್ಲರೊಂದಿಗೆ ಒಡನಾಡಿಕೊಂಡೇ ಇದ್ದೆ. ದೂರದೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರೆ ಆ ಪ್ರಮೇಯ ಒದಗುತ್ತಿತ್ತೇನೋ? ಟಿ
= ಪ್ರಸನ್ನ, ಚೋಳೇನಹಳ್ಳಿ
ಅದರ ಸಂವೇದನೆಯೇ ಬೇರೆ
3ಡಿ ಆ್ಯನಿಮೇಷನ್ ಗೊತ್ತಿರುವುದಲ್ಲದೇ ಕಂಪ್ಯೂಟರ್ ಗ್ರಾಫಿಕ್ನಲ್ಲೇ ಕೆಲಸ ಮಾಡುತ್ತಿರುವ ನನಗೆ ಕೈ ಬರಹವೇ ಇಷ್ಟ! ಅದರಲ್ಲಿರುವ ಸಂವೇದನೆಯೇ ಬೇರೆ. ದೂರದೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಅಪ್ಪ-ಅಮ್ಮನಿಗೆ ಪತ್ರ ಬರೆಯಲೇ ಬೇಕಿತ್ತು. ನನ್ನ ಅಪ್ಪ-ಅಮ್ಮನ ಬಳಿ ಆಗ ಫೋನ್ ಇರಲಿಲ್ಲವೆಂಬುದು ಕೂಡ ಅನುಕೂಲಕರವಾದ ಸಂಗತಿಯಾಗಿತ್ತು. ಆದರೆ ಈಗ ಮೊಬೈಲ್ಮಯವಾಗಿ ಪತ್ರ ವ್ಯವಹಾರ ಮಾಯವಾಗುತ್ತಿದೆ. ಎಷ್ಟೆ ಎಸ್ಸೆಮ್ಮೆಸ್ಸು ಕಳಿಸಿದರೂ ಕೈ ಬರಹದಲ್ಲಿ ಬರೆಯುವ ವಿಷಯಗಳು ಅಲ್ಲಿ ಇಲ್ಲವಾಗಿವೆ ಎನ್ನುವುದೇ ವಿಷಾದಕರ.ಟಿ
= ನಾಗೇಂದ್ರ ಎಚ್. ಎಸ್, ಹಾಸನ
ಫೋನ್ ಮತ್ತು ಈಮೇಲ್ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com