ದಾಸವಾಳ ಬರಿ ಕಿವಿಗಿಡಲಲ್ಲ, ಈ ಹೂವನ್ನು ಜ್ಯೂಸ್, ಟೀ, ಚಟ್ನಿ, ತಂಬುಳಿ ಮೂಲಕ ಆಹಾರವಾಗಿ ಬಳಸುವುದರಿಂದ ಅನೇಕ ಪ್ರಯೋಜನಗಳಿವೆ.
- ಇದು ಆ್ಯಂಟಿ ಆಕ್ಸಿಡೆಂಟ್ಸ್ಗಳ ಕಣಜವಾಗಿರುವುದರಿಂದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಜೊತೆಗೆ ಶೀಘ್ರ ಎನರ್ಜಿ ನೀಡುತ್ತದೆ. ಈ ಹೂವಿನಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಸಣ್ಣಪುಟ್ಟ ಆರೋಗ್ಯ ತೊಂದರೆಗಳಾದ ಕೆಮ್ಮು, ಶೀತ, ಗಂಟಲುನೋವುಗಳನ್ನು ತಡೆಯುತ್ತದೆ.
- ಮುಟ್ಟಿನ ಸಮಯದಲ್ಲಿ ವಿಪರೀತ ರಕ್ತ ಹೊರಹರಿವು ಇದ್ದರೆ ದಾಸವಾಳದ ಸೇವನೆ ಅದನ್ನು ತಡೆದು ಸಮಾಧಾನ ನೀಡುತ್ತದೆಯಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಚರ್ಮವನ್ನು ಹೊಳಪಾಗಿಟ್ಟು ಬೇಗ ಸುಕ್ಕುಗಟ್ಟುವುದನ್ನು ತಡೆಯುತ್ತದೆ.