ಸಂಬಂಧ ಗಟ್ಟಿಗೊಳ್ಳುತ್ತದೆ
ಸಂವಹನ ಮಾಧ್ಯಮದಲ್ಲೂ ಬದಲಾವಣೆಯಾಗಿದೆ. ಸಮಯದ ಅಭಾವದಿಂದಾಗಿ ಪತ್ರ ಬರೆಯುವ ಕಲೆ ನಶಿಸುತ್ತಿದೆ. ಇನ್ನು ಕುಶಲೋಪರಿ ಮೊಬೈಲ್ಗಳಲ್ಲೇ ಮುಗಿಯುತ್ತವೆ. ದಶಕಗಳ ಹಿಂದೆ ಶುಭ ಸಮಾರಂಭ, ಹಬ್ಬಗಳಿಗೆ ಶುಭಾಶಯ ಪತ್ರಗಳಲ್ಲಿ ಕೈಯಲ್ಲಿ ಬರೆದ ಭಾವನಾತ್ಮಕ ಸಂದೇಶಗಳೊಂದಿಗೆ ಕಳಿಸುವ ಪರಿಪಾಠವಿತ್ತು. ನಾನು ನನ್ನ ಪ್ರೀತಿಯ ಸಹೋದರರಿಗೆ ಪ್ರತಿ ವರ್ಷ ರಾಖಿಯ ಜತೆ ಕೈಯಲ್ಲಿ ಬರೆದ ಸಂದೇಶಗಳನ್ನು ಪತ್ರದ ಮೂಲಕ ಕಳಿಸುತ್ತೇನೆ. ಇದರಿಂದ ನಮ್ಮ ಸಂಬಂಧ ಇನ್ನೂ ಗಟ್ಟಿಗೊಳ್ಳುತ್ತ ಹೋಗುತ್ತಿದೆ.ಟಿ
= ವಿ. ಲತಾ ರಮೇಶ್, ಥಾಣೆ
ಕೈಬರಹಕ್ಕೆ ಸಾವಿಲ್ಲ
ಕೈಬರಹದ ಪತ್ರಗಳಿಗೆ ಇಂದಿನ ಕಾಲದಲ್ಲಿ ಸಂಪೂರ್ಣ ವಿದಾಯ ಹೇಳಲಾಗಿದೆ. ಆದರೆ ಪತ್ರಿಕೆಗಳಿಗೆ ಬರಹಗಳನ್ನು ಬರೆಯುವಾಗ ಕೈಬರಹದಲ್ಲಿ ಬರೆದರೆ ಉತ್ತಮವಾದ ಬರಹಗಳು ಮೂಡಲು ಸಾಧ್ಯ. ಅನೇಕ ಸಾಹಿತಿಗಳು ಈಗಲೂ ಕೈಬರಹದಲ್ಲಿಯೇ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಕೈಬರಹಕ್ಕೆ ಎಂದಿಗೂ ಸಾವಿಲ್ಲ. ನಾನೂ ಸಹ ಬರಹಗಳನ್ನು ಮೊದಲು ಕೈಬರಹದಲ್ಲಿಯೇ ಬರೆದು, ತಿದ್ದಿತೀಡಿ ಆನಂತರ ಕಂಪೂಟರ್ನಲ್ಲಿ ಟೈಪ್ ಮಾಡುತ್ತೇನೆ. ಹಲವರು ಹೀಗೇ ಮಾಡುತ್ತಾರೆ. ಈಗ ಇ-ಮೇಲ್ಗಳ ಕಾಲವೆನ್ನುತ್ತಾರೆ. ಇದರಿಂದಲೂ ಉಪಯೋಗವಿದೆ.ಟಿ
= ದಂಡಿನಶಿವರ ಮಂಜುನಾಥ್, ಬೆಂಗಳೂರು
ಪ್ರಧಾನಿಗೂ ಬರೆಯಬಹುದು
ಜನಸಾಮಾನ್ಯರು ಪ್ರಧಾನಿಗೆ ಫೋನ್ ಮಾಡುವುದಾಗಲಿ, ಇ-ಮೇಲ್ ಮಾಡುವುದಾಗಲಿ ಅಷ್ಟು ಸುಲಭವಲ್ಲ. ಆದರೆ ಅವರಿಗೆ ಪತ್ರ ಬರೆಯುವುದು ಅತ್ಯಂತ ಸುಲಭ. ಕೈ ಬರಹದ ಪತ್ರ ಇತರ ಎಲ್ಲಾ ಮಾಧ್ಯಮಗಳಿಗಿಂತ ಗೌರವ ಪೂರ್ವಕವಾದದ್ದು. ಅದಕ್ಕಾಗಿಯೇ ಹಿರಿಯರು, ರಾಜಕಾರಣಿಗಳು, ಪರಿಣಿತರು, ವಿದ್ವಾಂಸರು, ಈಗಲೂ ವ್ಯವಹಾರಕ್ಕೆ ಕೈಬರಹದ ಪತ್ರಗಳನ್ನೇ ಬಳಸುತ್ತಾರೆ. ಇದು ರಾಜ ಮಹಾರಾಜರ ಕಾಲದಿಂದಲೂ ಜನಸಾಮಾನ್ಯರಿಗೆ ಕಡಿಮೆ ವೆಚ್ಚದ ಸಂದೇಶ ರವಾನಾ ಮಾಧ್ಯಮ. ದೇಶ ವಿದೇಶಗಳ ನಡುವೆ ಬಾಂಧವ್ಯ ಬೆಸೆಯಲೂ ಪತ್ರಗಳೇ ಪ್ರಮುಖ ಪಾತ್ರವಹಿಸುತ್ತವೆ.ಟಿ
= ಹರೀಶ್. ಎನ್, ದೊಡ್ಡಬಳ್ಳಾಪುರ
ಫೋನ್ ಮತ್ತು ಈಮೇಲ್ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

