ಕೈ ಬರಹದ ವೈಶಿಷ್ಟ್ಯ
ನಾನು ಇವತ್ತಿಗೂ ಅಮ್ಮ-ಅಪ್ಪನ ಯೋಗಕ್ಷೇವುವನ್ನು ಕೈಬರಹದ ಪತ್ರದಲ್ಲೇ ವಿಚಾರಿಸಿಕೊಳ್ಳುತ್ತೇನೆ. ಇವತ್ತಿನ ದಿನಗಳ ಮೊಬೈಲ್, ಲ್ಯಾಪ್ಟಾಪ್ಗಳ ಮುಂದೆ ಕೈಬರಹಗಳು ಪೈಪೋಟಿ ನಡಿಸಲಾಗದ ಸ್ಥಿತಿಗೆ ತಲುಪಿದೆ. ಜೀವವಿಲ್ಲದ ಯಂತ್ರದ ಮುಂದೆ ನಾವಿಂದು ಮೂಕ ವಿಸ್ಮಿತರು. ಆದರೆ ಆಧುನಿಕತೆ ಎಷ್ಟೇ ಮುಂದೆ ಹೋದರೂ ಕೈಬರಹದ ರಹಸ್ಯ ಮಾತ್ರ ಅಷ್ಟೇ ಸವಿಯಾದದ್ದು. ಹಳೆಯ ಮಿತ್ರರು ಬರೆದ ಪತ್ರಗಳನ್ನು ತೆರೆದಾಗ ಆಗಿನ ಮಧುರ ನೆನಪುಗಳು ಭಾವನಾಲೋಕಕ್ಕೆ ಕರೆದೊಯ್ಯುತ್ತವೆ.ಟಿ
- ಶೋಭಾ ಎಂ. ಹಿರೇಮಳಗಾ
ಜಾಗ ಬಿಡದೇ ಬರೆವ ಖುಷಿ
ನಮ್ಮ ಮದುವೆಯ ಸಮಯದಲ್ಲಿ ದೂರವಾಣಿಯ ಬಳಕೆ ಈಗಿನಷ್ಟಿರಲಿಲ್ಲ. ಹಾಗಾಗಿ ಪತ್ರ ಬರೆಯಬೇಕಿತ್ತು. ಅದರಲ್ಲೂ ಒಂದು ಇಂಚೂ ಜಾಗ ಬಿಡದೇ ಬರೆಯುವುದೆಂದರೆ ಬಹಳ ಖುಷಿ. ನಾದಿನಿಯರಿಗೆ, ಅಮ್ಮನಿಗೆ ಪತ್ರ ಬರೆಯುತ್ತಿದ್ದೆ. ನಂತರ ದೂರವಾಣಿಯ ಬಳಕೆ ಜಾಸ್ತಿ ಆದ ಹಾಗೆ ಕೈ ಬರಹ ಕಡಿಮೆಯಾಗುತ್ತಿದೆಯಲ್ಲ ಎಂದೆಣಿಸಿ ಅಮ್ಮನಿಗೆ ಹೇಳುತ್ತಿದ್ದೆ, 'ದೂರವಾಣಿಯ ದರ ಜಾಸ್ತಿಯಾಗುತ್ತಿದೆ, ಅದಕ್ಕಿಂತ ಪತ್ರ ಬರೆದರೆ ನಿನ್ನ ಬರವಣಿಗೆಯೂ ಸುಧಾರಿಸುತ್ತದೆ' ಎಂದು. ಆದರೆ ಈಗೆಲ್ಲಾ ದೂರವಾಣಿಮಯ ಆಗಿರುವಾಗ ಈ ಕೈ ಬರಹಕ್ಕೆಲ್ಲಿದೆ ಸಮಯ?ಟಿ
ರಾಧಿಕಾ ಅಶೋಕ್ ಭಟ್, ಜಯಪುರ
ಬರೆಯುವುದೂ ಒಂದು ಕಲೆ
ಇಂದು ಕೈಬರಹ ಬಳಸುವವರ ಸಂಖ್ಯೆ ತೀರಾ ಕಮ್ಮಿ. ಕಂಪ್ಯೂಟರ್ ವ್ಯವಸ್ಥೆ ಇಲ್ಲದವರು ಮಾತ್ರ ಕೈ ಬರಹ ಬಳಸುತ್ತಿದ್ದಾರೆ. ಮುಂದೊಂದು ದಿನ ಟೆಲಿಗ್ರಾಂ ಸೇವೆ ಸ್ಥಗಿತಗೊಂಡಂತೆಯೇ ಪತ್ರ ವ್ಯವಹಾರ ಸ್ಥಗಿತಗೊಂಡರೆ ಅಚ್ಚರಿ ಪಡಬೇಕಿಲ್ಲ. ಆಂಗ್ಲ ಸಾಹಿತಿಗಳಾದ ಬೈರನ್, ಲೇಂಬ್ ಅವರ ಪತ್ರಗಳು ಅಜರಾಮರ. ನಾವೇನನ್ನು ಸಾಫ್ಟ್ ಕಾಪಿ ಎನ್ನುತ್ತೇವೋ ಅದರಲ್ಲಿ ಭಾವನಾತ್ಮಕತೆ, ಆತ್ಮೀಯತೆಯ ನಂಟಿಲ್ಲವೆಂಬುದು ಸುಳ್ಳಲ್ಲ. ಆದರೆ ಭಾವನೆಗಳ ಗುಚ್ಛವನ್ನೇ ತುಂಬಿರುವ ಕೈಬರಹದ ಪತ್ರ ಬರೆಯುವುದು ಒಂದು ಅದ್ಭುತ ಕಲೆ ಮತ್ತು ಅದು ಅಳಿವಿನಂಚಿನಲ್ಲಿರುವುದು ನಂಬಲೇಬೇಕಾದ ಸತ್ಯ.ಟಿ
- ದಿವ್ಯಾ ಡಿ., ಪೆರ್ಲ
ಫೋನ್ ಮತ್ತು ಈಮೇಲ್ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

