ಬೈಟುಕಾಫಿ

ಆಟಕ್ಕೆ ಪ್ರಾಮುಖ್ಯತೆ ಇರಲಿ

Published On :

ಬೇಸಿಗೆ  ರಜೆಯಲ್ಲಿ   ಮಕ್ಕಳು ಆಟ,  ಮನರಂಜನೆ ಇಷ್ಟ ಪಡುತ್ತಾರೆ. ಟ್ರಿಪ್ ಹೋಗಲು ಇಷ್ಟಪಡುತ್ತಾರೆ. ಆಟದ ಮೂಲಕ ಕಲಿಕೆಯೂ ಇರಬೇಕು. ಇವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಆಗ ಕಲಿಯಲು ಮಕ್ಕಳಿಗೆ ಬೋರ್ ಆಗುವುದಿಲ್ಲ. ಈ ಎರಡೂ ಜತೆ ಜತೆಯಲ್ಲಿ ನಡೆಯಬೇಕು. ಇದರಿಂದ ಮಕ್ಕಳಲ್ಲಿ ಆಸಕ್ತಿ ಹಾಗೂ ಆತ್ಮಸ್ಥೈರ್ಯ ಮೂಡುತ್ತದೆ. ಜತೆಗೆ ಉತ್ಸಾಹ, ಚಟುವಟಿಕೆ, ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗುತ್ತದೆ. ಇಲ್ಲಿ ಪೋಷಕರ ಪಾತ್ರ ಹೆಚ್ಚಾಗಿರಬೇಕು. ಆಟ ಪಾಠ ಜತೆ ಜತೆಯಲ್ಲಿ ನಡೆದಾಗ ಮಾತ್ರ ಇದೆಲ್ಲ ಸಾಧ್ಯವಾಗುತ್ತದೆ.ಟಿ
= ಕೆ.ಸಿ. ಮೀನಾಕ್ಷಿ, ನಿಡೂಡಿ ಶಾಲೆ, ಹಾಸನ
ಪಠ್ಯೇತರ ಚಟುವಟಿಕೆಗಳಿರಲಿ
ಪೋಷಕರು ಮಕ್ಕಳಿಗೆ ರಜೆ ಪ್ರಾರಂಭವಾದ ತಕ್ಷಣ ಅವರನ್ನು ಮುಂದಿನ ತರಗತಿಗಳ ಪಠ್ಯ ಪುಸ್ತಕಗಳನ್ನು ಓದಲು ಅಥವಾ ಮುಂದಿನ ತರಗತಿಗಳ ಮನೆ ಪಾಠಕ್ಕೆ ಕಳುಹಿಸಲು ಉತ್ಸುಕರಾಗಿರುತ್ತಾರೆ. ಇವರ ಉದ್ದೇಶ ಮುಂದಿನ ತರಗತಿಗಳಲ್ಲಿ ಹೆಚ್ಚು ಅಂಕ ಗಳಿಸಬೇಕೆಂಬುದೇ ಆಗಿರುತ್ತದೆ. ಶಿಕ್ಷಣದ ದೃಷ್ಟಿಯಿಂದ ಇದು ಉತ್ತಮವಾದರೂ ಮಕ್ಕಳು ಸರ್ವತೋಮುಖವಾಗಿ, ಸೃಜನ ಶೀಲವಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಅವಶ್ಯಕ. ಅಲ್ಲದೇ ಮಕ್ಕಳು ವರ್ಷದ ಬಹುಪಾಲು ಅವಧಿಯನ್ನು ತರಗತಿಗಳಲ್ಲಿಯೇ ಕಳೆದಿರುತ್ತಾರೆ. ಹೀಗಾಗಿ ಅವರಿಗೆ ರಜೆಯ ಅಲ್ಪಾವಧಿಯಲ್ಲಿ ಇಷ್ಟವಾದ ಚಿತ್ರಕಲೆ, ಸಂಗೀತ, ಕರಾಟೆ, ನಾಟಕಗಳಂತಹ ಕುಶಲತೆಯನ್ನು ಅಭಿವ್ಯಕ್ತಿಗೊಳಿಸಲು ಸಹಕರಿಸಬೇಕು. ಟಿ
= ಆರ್. ಸಿ. ಪರಶುರಾಮ್, ಶಿಕಾರಿಪುರ
ಸೂಕ್ಷ್ಮ ಸಂವೇದನೆ ಅಗತ್ಯ
ಮಕ್ಕಳು ಹೇಗೆ ಸೂಕ್ಷ್ಮವಾಗಿರುತ್ತದೆಯೋ ಅವರ ಮನಸ್ಸು ಕೂಡ ಹಾಗೇ. ಅತೀ ಸೂಕ್ಮವಾದ ಮನಸ್ಸಲ್ಲಿ ಸೌಂದರ್ಯದ ಬಿಂಬವನ್ನು ಮೂಡಿಸುವ ಕೆಲಸ ಪೋಷಕರದ್ದಾಗಿರಬೇಕಾಗುತ್ತದೆ. ಮನೆಯಲ್ಲಿರುವ ಪೋಷಕರ ವರ್ತನೆಯನ್ನು ಬೇಗನೇ ಮೈಗೂಡಿಸಿಕೊಳ್ಳುವ ಚಾಣಾಕ್ಷತನ ಮಕ್ಕಳಲ್ಲಿರುತ್ತದೆ. ಆದ್ದರಿಂದ ಇದನ್ನೆಲ್ಲಾ ಅರಿತ ಪೋಷಕರು ಮಕ್ಕಳ ಮಾನಸಿಕ ಸಂವೇದನೆಯನ್ನ ಅರಿತು, ಅವರ ಸುಖ-ಸಂತೋಷಕ್ಕೆ ಪೂರಕವಾಗಿ ವಿದ್ಯಾಭ್ಯಾಸದ ಪ್ರಾಮುಖ್ಯವನ್ನು ತಿಳಿಸಿದರೆ ಖಂಡಿತ ಒಪ್ಪಿಕೊಳ್ಳದೆ ಇರಲಾರರು. ಮಕ್ಕಳು ಒಂದು ಗಿಡವೆಂಬುದನ್ನು ಅರಿತು ಸಂಭಾಳಿಸುವುದರಿಂದ ಮುಂದಿನ ದಿನಗಳಲ್ಲಿ ನಿಮಗೊಂದು ದೊಡ್ಡ ಆಸ್ತಿಯಾಗುವುದರಲ್ಲಿ ಸಂಶಯವಿಲ್ಲ.ಟಿ
= ಶ್ವೇತಾ ಡಿ.ಎಸ್., ತುರುವನೂರು

'ಜಗುಲಿ'ಯಲ್ಲಿ ಈ ಸಲದ ವಿಷಯ 'ಈ ರಜೆಯಲ್ಲಿ ಮುಂದಿನ ತರಗತಿಗೆ ಮಕ್ಕಳನ್ನು ಹೇಗೆ ಸಜ್ಜುಗೊಳಿಸುವುದು?' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.