ಬೈಟುಕಾಫಿ

ಯಾವಾಗ ದುಃಖವಾಗುತ್ತದೆ?

ಯಾವಾಗ ದುಃಖವಾಗುತ್ತದೆ?
Published On :

ಜಾನಪದರು ಶಾಲಿನಲ್ಲಿ ಕೆರ ಸುತ್ತಿ ಹೊಡೆಯುವುದರಲ್ಲಿ ನಿಷ್ಣಾತರು. ಅವರು ಹೇಳಬೇಕೆನ್ನಿಸಿದ್ದನ್ನು ಕಲಾತ್ಮಕ ಮಾತುಗಳಲ್ಲೂ ಹೇಳಬಲ್ಲರು, ನಾಟುವಂತೆಯೂ ಹೇಳಬಲ್ಲರು. ಹಾಗೆಯೇ ಒಬ್ಬ ವಿಟನಿಗೆ ಆತನ ವೇಶ್ಯೆ ಹೇಳಿದ್ದು ಇಲ್ಲಿದೆ.
ಆತ ಸರಸದಲ್ಲಿ ಅಷ್ಟು ಚತುರನಲ್ಲ. ತರುಣಿಯರ ಕಣ್ಸನ್ನೆ ಕೈಸನ್ನೆ ತುಟಿಸನ್ನೆಗಳನ್ನು ತಕ್ಷಣ ಅರಿಯಬಲ್ಲಷ್ಟು ನಿಷ್ಣಾತನಲ್ಲ. ಅಂಥವನಿಗೂ ವೇಶ್ಯೆಯರ ಬಳಿ ಹೋಗುವ ಚಟ. ಆತ ಯಾವಾಗಲೂ ಹೋಗುತ್ತಿದ್ದ ವೇಶ್ಯೆ, ತನ್ನ ಗಿರಾಕಿಯ ಸಂಸಾರದ ಸ್ಥಿತಿ ಹೇಗಿದ್ದೀತು ಎಂಬುದನ್ನು ಸೂಕ್ಷ್ಮವಾಗಿ ಅರ್ಥಯಿಸಿಕೊಂಡಳು. ನಂತರ ಆತನಿಗೆ ಹೇಳಿದಳು.

ಅವಿದಗ್ಧಃ ಪತಿಃ ಸ್ತ್ರೀಣಾಂ ಪ್ರೌಢಾನಾಂ ನಾಯಕೋಗುಣೀ
ಗುಣಿನಾಂ ತ್ಯಾಗಿನಾಂ ಸ್ತೋಕೋ ವಿಭವಶ್ಚೇತಿ ದುಃಖಕೃತ್
ತ್ಯಾಗಿಗಳು ಮತ್ತು ಗುಣವಂತರಾದವರಿಗೆ ಕೈಯಲ್ಲಿ ಹಣವಿಲ್ಲದಿದ್ದರೆ ದುಃಖವಾಗುತ್ತದೆ. ಯಾಕೆಂದರೆ ಅದು ತಮಗಾಗಿ ಅಲ್ಲ, ಇನ್ನೊಬ್ಬರಿಗೆ ವಿನಿಯೋಗಿಸುವುದಕ್ಕಾಗಿ. ಪ್ರೌಢ ವ್ಯಕ್ತಿಗಳಿಗೆ ಒಬ್ಬ ಸೂಕ್ತ ನಾಯಕನಿಲ್ಲದಿದ್ದರೆ ದುಃಖವಾಗುತ್ತದೆ. ಯಾಕೆಂದರೆ ತಮ್ಮನ್ನು ನಿರ್ದಿಷ್ಟ ಗುರಿಯತ್ತ ಒಯ್ಯುವವನಿಲ್ಲವಲ್ಲಾ ಎಂದು. ಅಂತೆಯೇ, ಮದನಕಲೆಯಲ್ಲಿ ಆಸಕ್ತರೂ ನಿಷ್ಣಾತರೂ ಆದ ತರುಣಿಯರಿಗೆ ಅರಸಿಕನಾದ ನಲ್ಲ ದೊರೆತರೆ ದುಃಖವಾಗುತ್ತದೆ. ಯಾಕೆಂದು ನಾನು ವಿವರಿಸಬೇಕೆ?
ಪ್ರಣಯಕಲೆಯ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡರೆ ನೀನು ಬದುಕಿಕೊಳ್ಳುತ್ತೀ ಎಂಬ ಆಕೆಯ ಮಾತನ್ನು ಆತ ಅರ್ಥ ಮಾಡಿಕೊಂಡಿರಬಹುದು.

= ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.