ಅಪರಿಚಿತರಿಗೇಕೆ ಆಸಕ್ತಿ?

ಗಮನ ಬೇರೆಡೆ ಸೆಳೆದು ವಿವಿಧ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುವಾಗ ತಡೆಯಲು ಮುಂಜಾಗ್ರತಾ ಕ್ರಮ-
ಹಣ ಮತ್ತು ಆಭರಣವನ್ನು ತೆಗೆದುಕೊಂಡು ಹೋಗುವಾಗ ಅಪರಿಚಿತರ ಮಾತುಗಳಿಗೆ ಗಮನ ಕೊಡಬೇಡಿ.
ನೀವು ಹಾಕಿದ ಬಟ್ಟೆಗಳ ಮೇಲೆ ಹೊಲಸು ಬಿದ್ದಿದೆ, ನಿಮ್ಮ ವಾಹನದಿಂದ ಇಂಧನ ಸುರಿಯುತ್ತಿದೆ, ನಿಮ್ಮ ಜೇಬಿನಿಂದ ಹಣ ಬಿದ್ದಿದೆ, ಮುಂದೆ ಕಳ್ಳತನವಾಗಿದೆ, ನಿಮ್ಮ ಆಭರಣವನ್ನು ಬಿಚ್ಚಿ ಸುರಕ್ಷಿತವಾಗಿ ಇಟ್ಟುಕೊಳ್ಳಿ ಎಂದು ಹೇಳುವ ಅಪರಿಚಿತರ ಮಾತುಗಳಿಗೆ ಕಿವಿ ಕೊಡಬೇಡಿ.
ನಿಮಗೆ ಅನುಮಾನ ಬಂದರೆ ತಕ್ಷಣ ಅಲ್ಲಿರುವ ಅಕ್ಕಪಕ್ಕದ ಸಾರ್ವಜನಿಕರ ಸಹಾಯವನ್ನು ಪಡೆಯಿರಿ.
ನೀವು ಕೇಳದಿದ್ದರೂ ನಿಮಗೆ ಸಹಾಯ ಮಾಡಲು ಮುಂದೆ ಬರುವ ಅಪರಿಚಿತ ವ್ಯಕ್ತಿಗಳನ್ನು ನಂಬಬೇಡಿ.
ಬ್ಯಾಂಕ್ಗಳಿಂದ ಹಣವನ್ನು ಮತ್ತು ಆಭರಣವನ್ನು ತರುವಾಗ ಒಂಟಿಯಾಗಿ ಹೋಗದೆ ಜತೆಗೆ ಸಂಬಂಧಿ/ಸ್ನೇಹಿತರನ್ನು ಕರೆದೊಯ್ಯಿರಿ.
ಬ್ಯಾಂಕ್ಗಳಿಂದ ಹಣವನ್ನು ಮತ್ತು ಆಭರಣವನ್ನು ತೆಗೆದುಕೊಂಡು ದಾರಿಮಧ್ಯದಲ್ಲಿ ವಾಹನವನ್ನು ನಿಲ್ಲಿಸಿ, ಬೇರೆಯವರ ಜತೆ ಮಾತಿಗೆ ನಿಲ್ಲಬೇಡಿ ಅಥವಾ ಅವುಗಳನ್ನು ಅಲ್ಲಿಯೇ ಬಿಟ್ಟು ಹೊರಗೆ ಹೋಗಬೇಡಿ.
ನಿಮ್ಮದಲ್ಲದ ವಸ್ತುವಿಗೆ ಎಂದೂ ಆಸೆ ಪಡಬೇಡಿ.
ಅಪರಿಚಿತರು ನಿಮಗೆ ಸಹಕರಿಸಲು ಮುಂದಾದಾಗ ಅವರ ಚಹರೆ, ಅವರು ಧರಿಸಿರುವ ಬಟ್ಟೆಗಳು, ಮಾತನಾಡುವ ಭಾಷೆ ಮುಂತಾದವುಗಳನ್ನು ಗಮನಿಸಿ. ಸಾಧ್ಯವಾದರೆ ನಿಮ್ಮ ಮೊಬೈಲ್ ಫೋನ್ನಿಂದ ಅವರ ಫೋಟೊವನ್ನು ತೆಗೆದುಕೊಳ್ಳಿ.
ಅಪರಿಚಿತರು ನೀಡುವ ತಿಂಡಿ ತಿನ್ನಬೇಡಿ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


