ಬೈಟುಕಾಫಿ

ಕಲ್ಲೇಟಿಗಿಂತ ನಿನ್ನ ಕಣ್ಣೇಟು

ಕಲ್ಲೇಟಿಗಿಂತ ನಿನ್ನ ಕಣ್ಣೇಟು
Published On :

ಜತೆಯಾಗಿ ಹೋಗುತ್ತಿರುವ ಹೆಣ್ಣು- ಗಂಡುಗಳು ಪ್ರಿಯತಮ- ಪ್ರೇಯಸಿಯರೇ ಆಗಿರಬೇಕಾದ್ದಿಲ್ಲ. ಅಳರ ವರ್ತನೆಯನ್ನು ನೋಡಿಯೇ ಅವರು ಅಣ್ಣ- ತಂಗಿಯೋ, ಗಂಡ- ಹೆಂಡತಿಯೋ ಹೇಳಿಬಿಡಬಹುದು. ಅಥವಾ ಅವರ ಭಂಗಿಗಳನ್ನು ನೋಡಿ, ಅವರು ಪ್ರೇಮದ ಅವಸ್ಥೆಗಳಲ್ಲಿ ಯಾವ ಹಂತದಲ್ಲಿದ್ದಾರೆಂದೂ ಹೇಳಬಹುದು.

ಬದ್ಧಹೃದಯಾಯಾಃ ಕಾಂತಃ ತಥೈವ ಅರ್ಧ್ಧಾಕ್ಷಪಿಚ್ಛಿಲಾ ವಾಮಾ
ನಿಃಶ್ವಸಿತಮಪಿ ಜ್ಞಾಕ್ಷಯತೇ ವಿದಗ್ಧಜನಸಂಕುಲೇ ಗ್ರಾಮೇ

ಅನುರಾಗಗೊಂಡ ಹೆಣ್ಣಿನ ಹೃದಯದಲ್ಲಿ ಸ್ಥಾನ ಪಡೆದವನು ಇವನೇ, ಆತನ ಹೃದಯಮಂದಿರದಲ್ಲಿ ಮನೆ ಮಾಡಿದವಳು ಇವಳೇ ಎಂಬುದನ್ನು ಬೇಗನೆ ಹೇಳಿಬಿಡಬಹುದು- ಅವರ ಕಣ್ಣೋಟವನ್ನು ಹಿಂಬಾಲಿಸುವ ಮೂಲಕ. ಬುದ್ಧಿವಂತರಿರುವ ಊರಿನಲ್ಲಿ ಯಾವುದೂ ಗುಟ್ಟಲ್ಲ. ಅಲ್ಲಿ ಪಕ್ಕದ ಮನೆಯವನು ನಿಟ್ಟುಸಿರು ಬಿಟ್ಟರೂ ಇನ್ನೊಬ್ಬನಿಗೆ ತಿಳಿದುಹೋಗುತ್ತದೆ.
ಕಣ್ಣೋಟದಲ್ಲಿ ಪ್ರೇಮ ವ್ಯಕ್ತವಾಗುತ್ತದೆ. ಇನ್ನೂ ಈಗಷ್ಟೇ ಪ್ರೇಮದ ಚಮತ್ಕಾರಕ್ಕೆ ತೆರೆದುಕೊಳ್ಳುತ್ತಿರುವ ಯುವಜೋಡಿಯಾದರೆ, ಅವರ ಕಣ್ಣೋಟಗಳು ಪರಸ್ಪರ ಸಂಧಿಸದೆ ಆಟವಾಡುತ್ತಿರುತ್ತವೆ. ತುಸು ಪಳಗಿದ ಪ್ರೇಮಿಗಳಾದರೆ ಅವರ ಕಣ್ಣುಗಳು ಎಗ್ಗಿಲ್ಲದೆ ಒಬ್ಬರನ್ನೊಬ್ಬರು ದೃಷ್ಟಿಸುತ್ತಿರುತ್ತವೆ. ಇನ್ನೂ ಮುಂದುವರಿದವರಾದರೆ, ಅವರ ಕಣ್ಣೋಟವನ್ನು ಸ್ಪರ್ಶ ಮತ್ತಿತರ ಚೇಷ್ಟೆಗಳು ಹಿಂಬಾಲಿಸುತ್ತವೆ. ಎಲ್ಲ ಊರಿನ ಪ್ರೇಮಿಗಳ ಪರಿಯೂ ಹೀಗೇ. ಯಾರೂ ಇದಕ್ಕೆ ಹೊರತಲ್ಲ.


-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.