ನ್ಯಾನೊಕತೆಗಳು

Updated on: 

ಬೆಳಗ್ಗೆ ತನ್ನ ಮನೆಯ ಕೈತೋಟದ ಗಿಡಗಳಿಗೆ ಅಂಟಿದ್ದ ರೋಗವನ್ನು ತಡೆಯಲು ರಾಸಾಯನಿಕ ಸಿಂಪಡಿಸಿದ್ದ. ಆತ ಸಂಜೆ ಸಮಾರಂಭವೊಂದರಲ್ಲಿ 'ಸಾವಯವ ಕೃಷಿಯ ಮಹತ್ವ'ದ ಬಗ್ಗೆ ಉಪನ್ಯಾಸ ಕೊಟ್ಟ.

ಮಕ್ಕಳಿಲ್ಲವೆಂಬ ಕೊರಗಿನಿಂದ ಬೇಸತ್ತು ಅನಾಥ ಮಗುವೊಂದನ್ನು ದತ್ತು ಪಡೆದು ಸಂಭ್ರಮದಿಂದ ತಮ್ಮ ಕಾರಿನಲ್ಲಿ ಬರುತ್ತಿದ್ದ ದಂಪತಿಗಳು ಅಪಘಾತದಲ್ಲಿ ಅಸುನೀಗಿದಾಗ ಬದುಕುಳಿದ ಆ ಮಗು ಮತ್ತೆ ಅನಾಥವಾಯಿತು.

ತಾನು ಕೂಗಿದರೆ ಮಾತ್ರ ಬೆಳಗಾಗುತ್ತದೆ ಎಂಬ ಭ್ರಮೆಯಿಂದ ಬೀಗುತ್ತಿದ್ದ ಹುಂಜವೊಂದು ಸಂಜೆಯೇ ಚಿಕನ್ ಸೆಂಟರ್‌ನಲ್ಲಿ ಬಲಿಯಾಗಿ ಮಾರನೆಯ ದಿನದ ಬೆಳಗ್ಗೆಯನ್ನು ನೋಡಲೇ ಇಲ್ಲ.

ಖ್ಯಾತ ಹೃದಯ ತಜ್ಞನಾದ ಆತ 'ಹೃದಯದ ಕಾಳಜಿ' ಎಂಬುದರ ಕುರಿತು ಉಪನ್ಯಾಸ ಮಾಡುತ್ತಿದ್ದಾಗ ಹೃದಯಾಘಾತವಾಗಿ ಕೊನೆಯುಸಿರೆಳೆದ.

ಮಠದ ಹೊರಭಾಗದಲ್ಲಿ ಹೀಗೆ ಬರೆದಿತ್ತು 'ದಯಮಾಡಿ ಭಕ್ತಾದಿಗಳು ತಮ್ಮ ಚಪ್ಪಲಿಯೊಂದಿಗೆ ತಮ್ಮ ಅಹಂ ಅನ್ನೂ ಹೊರಗಡೆಯೇ ಬಿಟ್ಟು ಬನ್ನಿ' ಎಂದು. ಒಳಗೆ ಮಠಾಧಿಪತಿಗಳು ತಮ್ಮ ಪಾದುಕೆಯೊಂದಿಗೆ ಆಸನವನ್ನು ಅಲಂಕರಿಸಿದ್ದರು.

-ಎಲ್.ವಿ. ಕುಮಾರಸ್ವಾಮಿ,
ಹಿರಿಯೂರು


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com