ಬೈಟುಕಾಫಿ

ಮಾದಕ ದ್ರವ್ಯ ವ್ಯಸನ/ಮಾರಾಟ

ಮಾದಕ ದ್ರವ್ಯ ವ್ಯಸನ/ಮಾರಾಟ
Published On :

ಮಾದಕ ದ್ರವ್ಯ ವ್ಯಸನ ಅಥವಾ ಮಾರಾಟ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳು:
   ಮಾದಕ ವಸ್ತು ಕಳ್ಳಸಾಗಾಣಿಕೆದಾರರ ಜಾಲವನ್ನು ಪತ್ತೆಹಚ್ಚಿ ಸಾಗಾಣಿಕೆಯನ್ನು ನಿರ್ಬಂಧಿಸುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು. ಸಿಐಡಿಯಸಂಬಂಧಪಟ್ಟ ಪೊಲೀಸರು ಈ ಕ್ರಮವನ್ನು ಕೈಗೊಳ್ಳಬೇಕು.
   ಕಳ್ಳಸಾಗಾಣಿಕೆಯ ಮಾರ್ಗಗಳನ್ನು ಪತ್ತೆ ಹಚ್ಚಿ ಹೆಚ್ಚಿನ ಕಣ್ಗಾವಲು ವಹಿಸುವುದು ಅಗತ್ಯವಾಗಿದೆ.
    ಕಾನೂನು ಬಾಹಿರವಾಗಿ ಮಾರಾಟ ಮಾಡುವವರ ಬಗ್ಗೆ ಮಾಹಿತಿ ಇದ್ದಲ್ಲಿ ಅಥವಾ ಆ ಬಗ್ಗೆ ತಿಳಿದಲ್ಲಿ ಕೂಡಲೆ ಆ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ನಿಯಂತ್ರಣಾ ಕೊಠಡಿಗೆ ನೀಡುವುದು.
    ವಿದ್ಯಾರ್ಥಿಗಳಲ್ಲಿ ಅಥವಾ ಯುವಕರಲ್ಲಿ ಮಾದಕ ವಸ್ತು ವ್ಯಸನ ಹಾಗೂ ಅದರಿಂದಾಗುವ ಅಪಾಯದ ಬಗ್ಗೆ ಅರಿವು ಮೂಡಿಸುವುದು. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು.
ಸ್ಥಳೀಯವಾಗಿ ಲಭ್ಯ
ಗಾಂಜಾ, ಅಫೀಮ್, ಕೊಕೈನ್, ಹೆರಾಯಿನ್‌ನಂತಹ ಮಾದಕ ವಸ್ತುಗಳಿಗೆ ಬೆಡಿಕೆ ಹೆಚ್ಚಿದ್ದು, ಅವುಗಳ ಬೆಲೆ ಕಡಿಮೆ ಇರುವುದೇ ಇದಕ್ಕೆ ಕಾರಣ. ಸಾಕಷ್ಟು ನಗರಗಳಲ್ಲಿ ಇದು ಸ್ಥಳೀಯವಾಗಿಯೇ ಸಿಗುತ್ತದೆ.
ಒಂದು ಗ್ರಾಂನಷ್ಟು ಮಾದಕ ವಸ್ತುವನ್ನು ಸೇವಿಸಿದರೂ ಕಿಕ್ ಹೊಡೆಯುತ್ತದೆ. ಹಾಗಾಗಿ ಹೆಚ್ಚಿನ ಯುವಜನ ಇದರತ್ತ ವಾಲುತ್ತಾರೆ. ಸಾಕಷ್ಟು ಪ್ರಕರಣಗಳಲ್ಲಿ ಶಾಲಾ ಕಾಲೇಜು ಮಕ್ಕಳೂ ಸಹ ಇಂತಹ ಮಾದಕ ವಸ್ತು ಸೇವನೆಯಲ್ಲಿ ಮುಂದಿದ್ದಾರೆ ಎನ್ನುತ್ತಾರೆ ಪೊಲೀಸರು.
(ಮುಂದುವರಿಯುವುದು)


-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.