

ಬೇಕಾಗುವ ಪದಾರ್ಥಗಳು: ಆಲೂಗಡ್ಡೆ 1 ಕಪ್(ಬೇಯಿಸಿ ಹಿಸುಕಿದ್ದು), ಪುದೀನಾ ಎಲೆಗಳು ಅರ್ಧ ಕಪ್, ಹಸಿಮೆಣಸು ಅರ್ಧ ಚಮಚ (ಕತ್ತರಿಸಿದ್ದು), ಹುರಿದ ಜೀರಿಗೆ ಪುಡಿ ಅರ್ಧ ಚಮಚ, ಲಿಂಬೆ ರಸ, ಅರ್ಧ ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಮೈದಾ ಅರ್ಧ ಕಪ್, ಅವಲಕ್ಕಿ ಅರ್ಧ ಕಪ್, ನೀರು ಅರ್ಧ ಕಪ್, ಎಣ್ಣೆ ಕರಿಯಲು.
ಮಾಡುವ ವಿಧಾನ: ಹಿಸುಕಿದ ಆಲೂಗಡ್ಡೆ, ಕತ್ತರಿಸಿದ ಪುದೀನಾ, ಹಸಿಮೆಣಸು, ಹುರಿದ ಜೀರಿಗೆ ಪುಡಿ, ಉಪ್ಪು ಮತ್ತು ಲಿಂಬೆ ರಸವನ್ನು ಒಂದು ಬೌಲ್ನಲ್ಲಿ ಮಿಶ್ರ ಮಾಡಿಕೊಳ್ಳಿ. ಈ ಮಿಶ್ರಣದಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಪಕ್ಕದಲ್ಲಿಡಿ. ಮೈದಾಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಿಸಿಟ್ಟುಕೊಳ್ಳಿ. ಪುಡಿ ಮಾಡಿದ ಅವಲಕ್ಕಿಯನ್ನು ಪ್ಲೇಟ್ನಲ್ಲಿ ಸುತ್ತಲೂ ಹರಡಿ. ಈಗ ಆಲೂಗಡ್ಡೆ ಉಂಡೆಗಳನ್ನು ಮೈದಾ ಹಿಟ್ಟಿನಲ್ಲಿ ಅದ್ದಿ ನಂತರ ಅವಲಕ್ಕಿ ಮಿಶ್ರಣದಲ್ಲಿ ಉರುಳಿಸಿ. ಉಂಡೆಯ ಎಲ್ಲಾ ಬದಿಯು ಚೆನ್ನಾಗಿ ಕೋಟ್ ಆಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಎಣ್ಣೆ ಬಿಸಿಯಾದೊಡನೆ, ಆಲೂಗಡ್ಡೆ ಉಂಡೆಗಳನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಕರಿಯಿರಿ. ಚಿನ್ನದ ಬಣ್ಣಕ್ಕೆ ಈ ಉಂಡೆ ತಿರುಗವವರೆಗೆ ಕರಿಯಿರಿ.
ಈ ರುಚಿಯಾದ ಆಲೂ ಕುರಕುರೆ ಸಿದ್ಧ. ಇದನ್ನು ಬಿಸಿಬಿಸಿಯಾಗಿ ಚಟ್ನಿ ಅಥವಾ ಸಾಸ್ನೊಂದಿಗೆ ಸೇವಿಸಿ.