ಕೂದುಲು ಉದುರದಿರಲು

ಕೂದುಲು ಉದುರದಿರಲು
Updated on: 

ತಲೆಯಿಂದ ಕೂದಲು ಉದುರಲು ನಾನಾ ಕಾರಣ. ಉದುರುವಿಕೆ ತಡೆಗಟ್ಟಲು ಕೆಲವು ಆಹಾರಗಳು, ಹಣ್ಣುಗಳು ನೆರವಾಗಬಹುದು. ಅಂಥ ಹಣ್ಣುಗಳ ಪರಿಚಯ ನಿಮಗಿರಲಿ.
-    ಕಿತ್ತಳೆ ರಸವನ್ನು ತಲೆಗೆ ಹಚ್ಚಬಹುದು. ಇದನ್ನು ಪ್ರತಿದಿನ ತಿಂದರೆ ಕೂಡ ಕೂದಲಿಗೆ ತುಂಬಾ ಒಳ್ಳೆಯದು. ಕಿತ್ತಳೆ ರಸ ತಲೆಹೊಟ್ಟಿನ ಸಮಸ್ಯೆ ನಿವಾರಿಸುತ್ತದೆ.
-    ನಿಂಬೆರಸ ಚಮತ್ಕಾರಿಯಾದ ಮದ್ದು. ತಲೆಹೊಟ್ಟಿನ ಸಮಸ್ಯೆ ಹೋಗಲಾಡಿಸಿ, ಕೂದಲು ಉದುರುವುದನ್ನು ತಡೆಗಟ್ಟುತ್ತದೆ.
-    ಬೆರ್ರಿ ಹಣ್ಣುಗಳಲ್ಲಿ ಬಯೋಪ್ಲೇವೋನೈಡ್ಸ್ ಅಂಶವಿದ್ದು ಇದು ಕೂದಲು ಆರೋಗ್ಯಕರವಾಗಿ ಬೆಳೆಯುವಲ್ಲಿ ಸಹಕಾರಿ. ಚೆರ್ರಿ ಹಣ್ಣನ್ನು ಕೂಡ ಪ್ರತಿ ದಿನ ತಿಂದರೆ ಒಳ್ಳೆಯದು.
-    ಬಾಳೆ ಹಣ್ಣು ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವುದು ನಿಲ್ಲುತ್ತದೆ ಹಾಗೂ ಕೂದಲು ಆಕರ್ಷಕವಾಗಿ ಕಾಣುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com