

ತಲೆಯಿಂದ ಕೂದಲು ಉದುರಲು ನಾನಾ ಕಾರಣ. ಉದುರುವಿಕೆ ತಡೆಗಟ್ಟಲು ಕೆಲವು ಆಹಾರಗಳು, ಹಣ್ಣುಗಳು ನೆರವಾಗಬಹುದು. ಅಂಥ ಹಣ್ಣುಗಳ ಪರಿಚಯ ನಿಮಗಿರಲಿ.
- ಕಿತ್ತಳೆ ರಸವನ್ನು ತಲೆಗೆ ಹಚ್ಚಬಹುದು. ಇದನ್ನು ಪ್ರತಿದಿನ ತಿಂದರೆ ಕೂಡ ಕೂದಲಿಗೆ ತುಂಬಾ ಒಳ್ಳೆಯದು. ಕಿತ್ತಳೆ ರಸ ತಲೆಹೊಟ್ಟಿನ ಸಮಸ್ಯೆ ನಿವಾರಿಸುತ್ತದೆ.
- ನಿಂಬೆರಸ ಚಮತ್ಕಾರಿಯಾದ ಮದ್ದು. ತಲೆಹೊಟ್ಟಿನ ಸಮಸ್ಯೆ ಹೋಗಲಾಡಿಸಿ, ಕೂದಲು ಉದುರುವುದನ್ನು ತಡೆಗಟ್ಟುತ್ತದೆ.
- ಬೆರ್ರಿ ಹಣ್ಣುಗಳಲ್ಲಿ ಬಯೋಪ್ಲೇವೋನೈಡ್ಸ್ ಅಂಶವಿದ್ದು ಇದು ಕೂದಲು ಆರೋಗ್ಯಕರವಾಗಿ ಬೆಳೆಯುವಲ್ಲಿ ಸಹಕಾರಿ. ಚೆರ್ರಿ ಹಣ್ಣನ್ನು ಕೂಡ ಪ್ರತಿ ದಿನ ತಿಂದರೆ ಒಳ್ಳೆಯದು.
- ಬಾಳೆ ಹಣ್ಣು ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವುದು ನಿಲ್ಲುತ್ತದೆ ಹಾಗೂ ಕೂದಲು ಆಕರ್ಷಕವಾಗಿ ಕಾಣುತ್ತದೆ.