ಮೊಬ್ಯೆಲ್ ದಾಸರಾಗಬೇಡಿರಣ್ಣ

Updated on: 

ಮಕ್ಕಳಿಗೆ ಪಾಲಕರು ಮೊಬ್ಯೆಲ್ ಬಳಕೆಯ ಲಾಭ-ನಷ್ಟಗಳನ್ನು ತಿಳಿಸಿ ಹೇಳಬೇಕು. ಮೊಬ್ಯೆಲ್ ಬಳಸಲು ಸೂಕ್ತ ವಯಸ್ಸು 18ರ ನಂತರವೇ. ಈ ವಯಸ್ಸಿನಲ್ಲಿ ಸೂಕ್ತವಾದ ಆಲೋಚನೆ ಮಾಡುವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಮೊಬ್ಯೆಲ್ ಬಳಕೆಯ ಒಳಿತು ಕೆಡುಕಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸರ್ಕಾರ ಮೊಬ್ಯೆಲ್ ಬಳಕೆಯ ಬಗ್ಗೆ ಸೂಕ್ತ ನಿಯಮಾವಳಿಗಳನ್ನುಳ್ಳ ಶಾಸನ ತರಬೇಕು. ಇದಕ್ಕೆ ಪೋಷಕರ ಬೆಂಬಲ ಬೇಕು. ಶಾಲಾ-ಕಾಲೇಜುಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು.
- ಶ್ರೀಮಧು ಕೆ, ಮಾಕನೂರು, ರಾಣೇಬೆನ್ನೂರು

ಜಾಗೃತಿ ಮೂಡಿಸುವ ಪ್ರಯತ್ನವಾಗಲಿ
ನಮ್ಮ ದೇಶದಲ್ಲಿರುವ ಜನಸಂಖ್ಯೆಗೆ ಹೋಲಿಸಿಕೊಂಡಾಗ ಶೇ.70ರಷ್ಟು ಜನರ ಕೈಯಲ್ಲಿ ಮೊಬ್ಯೆಲ್ ಹರಿದಾಡುತ್ತಿದೆ. ಅದರಲ್ಲಿ ವಿದ್ಯಾರ್ಥಿಗಳ ಪಾಲು ಹೆಚ್ಚು  ದಶಕದ ಹಿಂದೆ ಈ ಮೊಬ್ಯೆಲ್‌ಗೆ ಅದರದೇ ಆದ ಗೌರವವಿತ್ತು. ಈಗ ಮರ್ಯಾದೆ ಬಿಟ್ಟು ಬೀದಿಗೆ ಬಂದಿರುವುದು ನೋವಿನ ಸಂಗತಿ. ಪ್ರಸ್ತುತ ದಿನಮಾನಗಳಲ್ಲಿ ಸಮಾಧಾನ, ಶ್ರದ್ಧ್ದೆ, ತಾಳ್ಮೆ, ಶಿಸ್ತು ಮಿತಿಮಿರಿ ಮರೆಯಾಗುತ್ತಿರುವುದಕ್ಕೆ ಇದು ಕೂಡ ಕಾರಣ. ಈ ಮೊಬ್ಯೆಲ್ ವಿದ್ಯಾರ್ಥಿಗಳಲ್ಲೂ ಆವರಿಸಿಬಿಟ್ಟಿದೆ ಇದರಿಂದ ಅನೇಕರು ದಾರಿ ತಪ್ಪಿದ್ದಾರೆ. ಹಾಗಾಗಿ ಮಕ್ಕಳಿಗೆ ಮೊಬೈಲ್ ಸಿಗದಂತೆ ನೋಡಿಕೊಳ್ಳಬೇಕು.
- ಡಿ. ಆರ್. ಸುರೇಂದ್ರನಾಥ್, ಹಂಪಿ

ಮಕ್ಕಳ ತಾಳಕ್ಕೆ ಕುಣಿಯದಿರಿ
ನಾನು ಕೂಡ ವಿದ್ಯಾಭ್ಯಾಸದಲ್ಲಿ ಮುಂದುವರಿದಿದ್ದೇನೆ. ನನ್ನಂತೆ ವಿದ್ಯಾಬ್ಯಾಸದಲ್ಲಿ ತೊಡಗಿರುವ ಎಲ್ಲರೂ ಅಭ್ಯಾಸದ ಸಮಯದಲ್ಲಿ ಈ ಮೊಬ್ಯೆಲ್ ಅನ್ನು ಕಣ್ಣಿಗೆ ಕಾಣಿಸದಂತೆ ದೂರವಿಡಿ. ಈ ಮೊಬ್ಯೆಲ್‌ಗಳಿಂದ ಸಮಯ ವ್ಯರ್ಥವಷ್ಟೆ, ವಾಯುವಿಹಾರದ ನೆಪ ಮಾಡಿಸ್ನೇಹಿತರನ್ನು ಭೇಟಿ ಮಾಡಿ ಹಲವಾರು ವಿಷಯಗಳ ಕುರಿತು ಚರ್ಚೆ ಮಾಡಿ, ಇದರಿಂದ ಆರೋಗ್ಯಕ್ಕೂ, ಮನಸ್ಸಿಗೂ ಒಳ್ಳೆಯ ಬೆಳವಣಿಗೆ. ಅದು ಬಿಟ್ಟು ಈ ಮೊಬ್ಯೆಲ್‌ನಲ್ಲಿ ಗಂಟೆಗಟ್ಟಲೆ ಮಾತಾಡಿದರೆ ಆರೋಗ್ಯಕ್ಕೂ ತೊಂದರೆ, ಸುಖಾಸುಮ್ಮನೆ ಖರ್ಚು ಕೂಡ. ಯಾವುದೇ ಕಾರಣಕ್ಕೂ ಈ ಮೊಬ್ಯೆಲ್‌ನಿಂದ ಪೋಷಕರನ್ನು ಬೀದಿಗೆ ತರುವುದು ತರವಲ್ಲ. ಮಕ್ಕಳ ತಾಳಕ್ಕೆ ಕುಣಿಯುವುದು ತರವಲ್ಲ.
-ಶ್ವೇತಾ ಡಿ. ಎಸ್. ತುರುವನೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com