ಬಾಯಿ ಹುಣ್ಣು ಕಾಣಿಸಿಕೊಂಡರೆ ಬಾಯಿ ಬಡಿದುಕೊಳ್ಳುವಂತಾಗುವುದು ನಿಜ. ಖಾರದ ಆಹಾರ ಸೇವಿಸಿದರೆ ಎದ್ದು ಕಿರುಚಿಕೊಂಡು ಕುಣಿದಾಡಬೇಕೆನಿಸುತ್ತದೆ. ಸಾಮಾನ್ಯವಾಗಿ ಇವು ಬಿ ವಿಟಮಿನ್ ಕೊರತೆಯಿಂದ ಉಂಟಾಗುತ್ತವೆ.
ಬಾಯಿ ಹುಣ್ಣು ಬಂದಾಗ ಉಪ್ಪು ನೀರಿನಲ್ಲಿ ಬಾಯಿಯನ್ನು ಮುಕ್ಕಳಿಸಿದರೆ ಸ್ವಲ್ಪ ಉರಿ ಅನಿಸಿದರೂ ಗಾಯ ಬೇಗನೆ ಗುಣಮುಖವಾಗುವುದು.
ಬಸಳೆ ಸೊಪ್ಪು ತುಂಬಾ ಒಳ್ಳೆಯ ಮನೆ ಮದ್ದು. ಬಸಳೆ ಸೊಪ್ಪನ್ನು ಜಗಿದು ಉಗಿಯಿರಿ. ಇದರಿಂದ ಬಾಯಿ ಹುಣ್ಣು ಬೇಗನೆ ಕಡಿಮೆಯಾಗುವುದು.
ಎಳನೀರು ಕುಡಿಯುವುದು ಬಾಯಿ ಹುಣ್ಣು ಕಡಿಮೆ ಮಾಡುವಲ್ಲಿ ಸಹಕಾರಿ. ಖಾರ ತಿಂದು ಬಾಯಿ ಹುಣ್ಣಾಗಿದ್ದರೆ ದಿನದಲ್ಲಿ 2 ಎಳನೀರು ಕುಡಿಯಿರಿ. ಬೇಗನೆ ಗುಣಮುಖವಾಗುವಿರಿ.