ಬೈಟುಕಾಫಿ

ಲೈಫ್ ಆಫ್ ಫೈಜಾನ್

ಆತನೊಬ್ಬ ಮಾನಸಿಕ ಅಸ್ವಸ್ಥ ಯುವಕ. ಆದರೆ, ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್! ಹೀಗೊಂದು ಸ್ಫೂರ್ತಿದಾಯಕ ಕಥೆ ಇಲ್ಲಿದೆ...

ಲೈಫ್ ಆಫ್ ಫೈಜಾನ್
Published On :

ಬಳ್ಳಾರಿಯ ಟಿಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿರುವ ಷಾಷಾವಲಿ ಅವರ ಮಗ ಫೈಜಾನ್ ಅಹಮ್ಮದ್ ಹುಟ್ಟಿನಿಂದ ಮಾನಸಿಕ ಅಸ್ವಸ್ಥ. ಮಗ ಹೀಗಿದ್ದಾನೆಂದು ಷಾಷಾವಲಿ ತಲೆ ಮೇಲೆ ಕೈಹೊತ್ತು ಕೂರಲಿಲ್ಲ. ಅದೃಷ್ಟವನ್ನು ಹಳಿಯಲಿಲ್ಲ.
ಬದಲಾಗಿ ತಮ್ಮ ಮಗನನ್ನು ಹೇಗಾದರೂ ಮುಖ್ಯವಾಹಿನಿಗೆ ತರಲೇಬೇಕೆಂಬ ಕನಸಿಗೆ ರೆಕ್ಕೆ ಅಂಟಿಸಿದರು. ಈ ಹಿನ್ನೆಲೆಯಲ್ಲಿ, ಮಗನಲ್ಲಿ ಕ್ರೀಡಾಸ್ಫೂರ್ತಿ ತುಂಬಿ 10-12 ವರ್ಷಗಳಿಂದ ಷಟಲ್ ಬ್ಯಾಡ್ಮಿಂಟನ್ ತರಬೇತಿ ಕೊಟ್ಟರು. ಪ್ರತಿದಿನ 2 ತಾಸು ಮಗನ ಅಭ್ಯಾಸಕ್ಕಾಗಿ ಮೀಸಲಿಟ್ಟರು. ಈಗ ಫೈಜಾನ್‌ನೊಳಗೆ ಅದ್ಭುತ ಕ್ರೀಡಾಪಟು ರೆಡಿ ಆಗಿದ್ದಾನೆ.  ಬಳ್ಳಾರಿ ಜಿಲ್ಲೆಯ ಜಿಂದಾಲ್‌ನಲ್ಲಿ ನಡೆದ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದ ಫೈಜಾನ್ ಅಹಮದ್, 2013ರಲ್ಲಿ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಅಂಗವಿಕಲರ, ಮಾನಸಿಕ ಅಸ್ವಸ್ಥರ ಕ್ರೀಡಾಕೂಟದಲ್ಲೂ ಬಂಗಾರದ ಪದಕ ಪಡೆದರು. ಅಲ್ಲದೆ, 2015ರಲ್ಲಿ ಅಮೆರಿಕದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಅಂಗವಿಕಲರ, ಮಾನಸಿಕ ಅಸ್ವಸ್ಥರ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂಥ ಅಪ್ಪ ನಿಮ್ಮ ಸುತ್ತಮುತ್ತ ಇದ್ದಾರಾ? ಪಾಷಾವಲಿ (ಮೊ. 94485 32612) ಅಂಥವರು ಸಾವಿರ ಇರಬೇಕು.

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.