ದೈತ್ಯಗುರುವಿನ ನಿರ್ಗಮನ

ಮದುವೆಯಾಗಿದೆ. ವಧು- ವರರನ್ನು ಶಯ್ಯಾಗೃಹಕ್ಕೆ ಕಳಿಸಿ ಬಾಗಿಲಿಕ್ಕಿಕೊಂಡಾಗಿದೆ. ಮರುದಿನ ಬೆಳಗ್ಗೆ ಬೇಗನೆ ಎದ್ದು ಬಂದ ವಧುವನ್ನು ನೋಡಿ ಸಖಿಗೆ ಆಶ್ಚರ್ಯ! ವಧುವಿನ ನೆತ್ತಿಯ ಕುಂಕುಮ ಸಹ ಕದಡಿಲ್ಲ, ತಲೆಗೂದಲು ಅಸ್ತವ್ಯಸ್ತವಾಗಿಲ್ಲ. ಮುಖದಲ್ಲಿ ಯಾವುದೇ ಕ್ಷತಗಳಿಲ್ಲ. ಕಣ್ಣಂಚಿನ ಕಾಡಿಗೆ ಇನಿತೂ ಕೆಟ್ಟಿಲ್ಲ. ಇಬ್ಬರ ಸಮಾಗಮವಾಯಿತೋ ಇಲ್ಲವೋ, ಇಲ್ಲವಾದರೆ ಯಾವ ಕಾರಣಕ್ಕೆ ಎಂಬ ಕೆಟ್ಟ ಕುತೂಹಲ ಆಕೆಗೆ. ಕೇಳಿಯೇಬಿಟ್ಟಳು. ವಧು ಉತ್ತರಿಸಿದ್ದು ಹೀಗೆ:
ನಾಹಂ ನೋ ಮಮ ವಲ್ಲಭಶ್ಚ ಕುಪಿತಃ ಸುಪ್ತೋ ನ ವಾ ಸುಂದರೋ
ವೃದ್ಧೋ ನೋ ನ ಚ ಬಾಲಕಃ ಕೃಶತನುರ್ನ ವ್ಯಾಧಿತೋ ನ ಶಠಃ
ಮಾಂ ದೃಷ್ಟ್ವಾನವಯೌವನಾಂ ಶಶಿಮುಖೀಂ ಕಂದರ್ಪಬಾಣಾಹತೋ
ಮುಕ್ತೋ ದೃತ್ಯಗುರುಃ ಪ್ರಿಯೇಣ ಪುರತಃ ಪಶ್ಚಾದ್ಗತೋ ವಿಹ್ವಲಃ
ಮಿಲನಕ್ಕೆ ಮುಂದುವರಿಯದೆ ಸುಮ್ಮನುಳಿಯಲು ಆತನೇನು ಬಾಲಕನಲ್ಲ! ಅಥವಾ ಕೈಲಾಗದ ವೃದ್ಧನೂ ಅಲ್ಲ! ಇಬ್ಬರಿಗೂ ವಿವಾಹ ಕಾರ್ಯಕ್ರಮಗಳಿಂದ ಬಳಲಿಕೆಯಾಗಿ ಮಲಗಿ ನಿದ್ರಿಸಿದ್ದೂ ಅಲ್ಲ. ಅವನಿಗೇನು ರೋಗವಿಲ್ಲ, ಕೃಶನಾಗಿಲ್ಲ, ಮೋಸಗಾರನೂ ಅಲ್ಲ. ನಮ್ಮಿಬ್ಬರಲ್ಲಿ ಯಾರೊಬ್ಬರೂ ಪರಸ್ಪರ ಕೋಪಗೊಂಡು ರಾತ್ರಿಯನ್ನು ಕೆಡಿಸಿದ್ದೂ ಅಲ್ಲ. ಆದದ್ದು ಇಷ್ಟೆ- ನನ್ನ ಚೆಲುವಾದ ಮಾದಕ ತನುವನ್ನು ನೋಡಿ ಕಾಮನ ಬಾಣಗಳಿಂದ ಪೀಡಿತನಾಗಿ ಉದ್ರೇಕಿತನಾದ ಆತ ನನ್ನನ್ನು ಸಮೀಪಿಸುವ ಮುನ್ನವೇ ದೈತ್ಯಗುರುವನ್ನು ಬಿಡುಗಡೆ ಮಾಡಿಬಿಟ್ಟ! ಆಮೇಲೆ ಖಿನ್ನನಾಗಿ ಸುಮ್ಮಗುಳಿದ!
ದೈತ್ಯಗುರು ಅಂದರೆ ಶುಕ್ರಾಚಾರ್ಯ. ಶುಕ್ರ ಎಂಬ ಪದಕ್ಕೆ 'ವೀರ್ಯ' ಎಂಬ ಅರ್ಥವೂ ಇದೆ.
= ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


