ಒರೆಯಿಂದ ತೆಗೆದ ಖಡ್ಗ!
ಶ್ರೀರಾಮಕೃಷ್ಣರು ವಿವೇಕಾನಂದರನ್ನು 'ಒರೆಯಿಂದ ತೆಗೆದ ಖಡ್ಗ' ಎಂದು ಬಣ್ಣಿಸುತ್ತಿದ್ದರು. ಏಕೆಂದರೆ ಮುಚ್ಚುಮರೆಯಿಲ್ಲದೆ ಸತ್ಯವನ್ನು ನೇರ ಮಾತುಗಳಲ್ಲಿ ಝಳಪಿಸುವ ಸ್ವಭಾವ ಅವರದಾಗಿತ್ತು. ಸ್ವಾಮೀಜಿಯ ಉಪನ್ಯಾಸಗಳನ್ನು ಕೇಳಿದ ಅಮೆರಿಕದ ಶಿಷ್ಯೆ 'ಸ್ವಾಮೀಜಿ, ಕೆಲವು ಸಲ ನಿಮ್ಮ ಮಾತುಗಳಿಂದ ನೀವು ಶ್ರೋತೃಗಳನ್ನು ಎದುರುಹಾಕಿಕೊಳ್ಳುತ್ತೀರೇನೋ ಎನ್ನುವ ಭಯ ನನಗೆ' ಎಂದು ಆತಂಕ ವ್ಯಕ್ತಪಡಿಸಿದ್ದಳು. ಇದಕ್ಕೆ ಸ್ವಾಮೀಜಿ, 'ನ್ಯೂಯಾರ್ಕಿನಲ್ಲಿ ನಾನು ಈ ಬಗೆಯ ಮಾತುಗಳಿಂದ ಇಡೀ ಸಭಾಂಗಣವನ್ನೇ ಖಾಲಿ ಮಾಡಿಸಿಬಿಟ್ಟಿದ್ದೆ' ಎಂದರು. ತಮ್ಮ ನಿರ್ಭಿಡೆಯ ಮಾತುಗಳಿಂದ ವೈರ, ಅಪವಾದಗಳನ್ನು ಎದುರಿಸಬೇಕಾಗಿ ಬಂದರೂ ಸ್ವಾಮೀಜಿ ಜಗ್ಗದೆ, ಕುಗ್ಗದೆ ನುಗ್ಗಿ ಮುಂದೆ ಸಾಗುವುದನ್ನು ಕಾಣುತ್ತೇವೆ.
ಸ್ವಾಮೀಜಿ ಎಲ್ಲಿ ಇರುತ್ತಾರೋ ಅಲ್ಲಿ ಅಧ್ಯಾತ್ಮಿಕ ವಾತಾವರಣ ನಿರ್ಮಾಣವಾಗುತ್ತಿತ್ತು. ಮಗು ಸ್ವಭಾವದ ಸ್ವಾಮೀಜಿ ವ್ಯಕ್ತಿತ್ವದಿಂದ ಅಧ್ಯಾತ್ಮಶಕ್ತಿ ತಾನೇತಾನಾಗಿ ಹೊರಹೊಮ್ಮುತ್ತಿತ್ತು. ಒಮ್ಮೆ ಕ್ಯಾಲಿಫೋರ್ನಿಯಾ ಕುಟುಂಬದ ಬಾಲಕ ರಾಲ್ಫ್ನಿಗೆ 'ಏನು ರಾಲ್ಫ್, ನೀನು ನಿನ್ನ ಕಣ್ಣುಗಳನ್ನೇ ಕಾಣಬಲ್ಲೆಯಾ?' ರಾಲ್ಫ್ ಹೇಳಿದ 'ಇಲ್ಲ ಸ್ವಾಮೀಜಿ, ಆದರೆ ಕನ್ನಡಿಯಲ್ಲಿ ನೋಡಿಕೊಳ್ಳಬಹುದು'. ಆಗ ಸ್ವಾಮೀಜಿ, 'ಹಾಗೆಯೇ ಭಗವಂತನೂ ಕೂಡ. ಅವನು ನಿನ್ನ ಕಣ್ಣುಗಳಷ್ಟೇ ಸಮೀಪದಲ್ಲಿದ್ದಾನೆ. ನೀನು ಅವನನ್ನು ಕಾಣಲಾರೆಯಾದರೂ ಅವನು ನಿನ್ನವನೇ' ಎಂದರು. ಮನಸ್ಸಿನ ಮೇಲೆ ಸಂಪೂರ್ಣ ಹತೋಟಿ ಹೊಂದುವ ಮೂಲಕ ಮುಕ್ತರಾಗುವ ಮಾರ್ಗವನ್ನು ತೋರಿಸಿಕೊಡಬೇಕು ಎನ್ನುವುದು ವಿವೇಕಾನಂದರ ಅಭಿಲಾಷೆಯಾಗಿತ್ತು. ಅದಕ್ಕಾಗಿಯೇ 'ನಿಮ್ಮ ಮೇಲೆ ನೀವು ಹಿಡಿತ ಸಾಧಿಸಿ' ಎಂಬ ಸಂದೇಶವನ್ನು ಮತ್ತೆ ಮತ್ತೆ ನೀಡುತ್ತಿದ್ದುದನ್ನು ಕಾಣುತ್ತೇವೆ.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

