ಮುಂಜಾಗ್ರತಾ ಕ್ರಮಗಳು
ಮನೆಗಳಿಗೆ ಸಿಸಿಟಿವಿ ಮತ್ತು ಬರ್ಗ್ಲರ್ ಅಲಾರಂ ಅಳವಡಿಸಿಕೊಳ್ಳಿ.
ಒಂಟಿ ಮನೆಗಳ ಸುತ್ತಲೂ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಿ. ಸಾಧ್ಯವಾದರೆ ವಾಚ್ಮ್ಯಾನ್ಗಳನ್ನು ನೇಮಿಸಿಕೊಳ್ಳಿ.
ಹೆಚ್ಚು ಹಣ ಮತ್ತು ಆಭರಣಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಆಭರಣ ಹಾಗೂ ಹಣ ಇಡಲೆಂದೇ ಬ್ಯಾಂಕ್ನಲ್ಲಿ ಲಾಕರ್ ವ್ಯವಸ್ಥೆ ಇರುತ್ತದೆ. ಆ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಿ. ಇದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಬಹುದು.
ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ ಮತ್ತು ತುರ್ತು ಸಂದರ್ಭದಲ್ಲಿ ಅವರ ಸಹಾಯವನ್ನು ಪಡೆಯಿರಿ.
ಅಪಾಯಕಾರಿ ಪರಿಸ್ಥಿತಿಯಲ್ಲಿ ಸಮಯ ಪ್ರಜ್ಞೆಯಿಂದ ವರ್ತಿಸಿ.
ದರೋಡೆ ನಂತರ ಅನುಸರಿಸುವ ಕ್ರಮಗಳು
ದರೋಡೆಯಾದ ತಕ್ಷಣ ಸಹಾಯಕ್ಕಾಗಿ ಅಕ್ಕಪಕ್ಕದವರನ್ನು ಕೂಗಿಕೊಳ್ಳಿ ಮತ್ತು ನೆರೆಹೊರೆಯವರ ಸಹಾಯದಿಂದ ದರೋಡೆಕೋರರನ್ನು ಹಿಡಿಯುವ ಪ್ರಯತ್ನಿಸಿ.
ದರೋಡೆಯಾದ ಬಗ್ಗೆ ಕೂಡಲೇ ಪೊಲೀಸ್ ಠಾಣೆಗೆ ತಿಳಿಸಿ. ಇಲ್ಲವಾದಲ್ಲಿ ದೂರವಾಣಿ ಸಂಖ್ಯೆ 100ಕ್ಕೆ (ಉಚಿತ) ಕರೆ ಮಾಡಿ. ದರೆಡೆ ನಡೆದ ಸ್ಥಳದಲಲಿನ ವಸ್ತುಗಳನ್ನು ಮತ್ತು ದರೋಡೆಕೋರರು ಬಿಟ್ಟುಹೋದ ಸಲಕರಣೆಗಳನ್ನು ಮುಟ್ಟಬೇಡಿ. ಮತ್ತು ಆ ಸ್ಥಳದಲ್ಲಿ ದೊರೆಯಬಹುದಾದ ಸುಳಿವುಗಳನ್ನು ರಕ್ಷಿಸಿ.
ದರೋಡೆಕೋರರ ಚಹರೆ, ಮಾತನಾಡಿದ ಭಾಷೆ, ಧರಿಸಿದ ಬಟ್ಟೆಗಳು, ಉಪಯೋಗಿಸಿದ ವಾಹನದ ಬಗ್ಗೆ ಪೊಲೀಸರಿಗೆ ತಿಳಿಸಿ.
ಗಾಯಗೊಂಡ ಸಂದರ್ಭದಲ್ಲಿ ಕೂಡಲೇ ವೈದ್ಯಕೀಯ ಸೌಲಭ್ಯ ಪಡೆಯಿರಿ.
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

