ತಾರೆಗಳು ಸಾರ್ ತಾರೆಗಳು

ಭಾರತದ ಚುನಾವಣಾ ರಾಜಕೀಯವನ್ನು ನೋಡಿದರೆ ವಿಚಿತ್ರವೊಂದು ನಿಮಗೆ ಗೋಚರವಾಗದಿರದು. ಇಲ್ಲಿ ಅಧಿಕಾರ ಪದವಿಗಳ ಆಕರ್ಷಣೆಯಿಂದ ಸಿನೆಮಾ ರಂಗ ತೊರೆದು ರಾಜಕಾರಣಕ್ಕೆ ಧುಮುಕಿದವರಿದ್ದಾರೆ. ಆದರೆ ಇದರಲ್ಲಿ ಗೆದ್ದವರು ಮತ್ತು ಸೋತವರ ಖಾನೇಶುಮಾರಿ ತೆಗೆದರೆ ಉತ್ತರ ಭಾರತಕ್ಕೂ ದಕ್ಷಿಣ ಭಾರತಕ್ಕೂ ಇರುವ ವ್ಯತ್ಯಾಸ ಕಾಣುತ್ತದೆ.
ಉತ್ತರ ಭಾರತದಲ್ಲಿ ಜನ ಸಿನೆಮಾ ನೋಡಬಹುದು. ಬಾಲಿವುಡ್ ಮಂದಿಗಳನ್ನು ದೇವತೆಗಳಂತೆ ಆರಾಧಿಸಬಹುದು. ಆದರೆ ಇವರು ಚುನಾವಣೆಗೆ ನಿಂತರೆ ಅವರನ್ನು ಗೆಲ್ಲಿಸಲಾರರು. ಆದರೆ ಆದೇ ದಕ್ಷಿಣದಲ್ಲಿ, ಜನ ಇವರನ್ನು ರಾಜಕಾರಣಿಯ ದಿರಿಸಿನಲ್ಲೂ ನೋಡಲು ಬಯಸುತ್ತಾರೆ. ಇದಕ್ಕೆ ಪೂರ್ವ ನಿದರ್ಶನಗಳು ಸಾಕಷ್ಟಿವೆ.
ಉತ್ತರದಲ್ಲಿ...
ಅಮಿತಾಭ್ ಬಚ್ಚನ್
ಜಯಪ್ರದಾ
ನಫೀಸಾ ಅಲಿ
ರಾಜ್ ಬಬ್ಬರ್
ಎಂ.ಡಿ.ಅಜರುದ್ದೀನ್
ಮನೋಜ್ ತಿವಾರಿ
ಉತ್ತರದ ಹೊಸ ಮುಖಗಳು
-ಮೊಹಮ್ಮದ್ ಕೈಫ್
- ಗುಲ್ ಪನಾಗ್ = ರವಿ ಕಿಶನ್
ದಕ್ಷಿಣದಲ್ಲಿ...
ಅಂಬರೀಷ್
ಸದ್ಯಕ್ಕೆತನ್ನ ರಾಜಕೀಯ ಸ್ಥಾನಮಾನಗಳನ್ನೆಲ್ಲ ಮರೆತು ಆಸ್ಪತ್ರೆ ಸೇರಿರುವ ಅಂಬಿ, ಮಂಡ್ಯಕ್ಕೆ ಕಾಲಿಟ್ಟರೆ ಸಂಚಲನ ಸೃಷ್ಟಿಸುತ್ತಾರೆ.
ರಮ್ಯಾ
ಮಂಡ್ಯದ ಹೆಣ್ಣು ಎಂದು ಕರೆಸಿಕೊಳ್ಳಲಿಚ್ಛಿಸುವ ರಮ್ಯಾ ಅವರಲ್ಲಿ ಕಳೆದ ಏಳೆಂಟು ತಿಂಗಳ ಅಸೆಂಬ್ಲಿ ವಾಸ ಆತ್ಮವಿಶ್ವಾಸವನ್ನಂತೂ ಹುಟ್ಟಿಸಿದೆ.
ಕರುಣಾನಿಧಿ
ಐದು ಬಾರಿ ಮುಖ್ಯಮಂತ್ರಿ. ಆದರೆ ರಾಷ್ಟ್ರ ರಾಜಕಾರಣವನ್ನೂ ಗಿರಿಗಿಟ್ಟಲೆ ತಿರುಗಿಸುವಂಥ ರಾಜಕೀಯದಾಟ.
ಎನ್.ಟಿ.ರಾಮರಾವ್
ತೆಲುಗು ದೇಶಂಪಾರ್ಟಿ ಹುಟ್ಟುಹಾಕಿ ಮೂರು ಬಾರಿ ಆಂಧ್ರದ ಪ್ರಧಾನಿಯಾಗಿದ್ದ ಇವರು ರಾಜ್ಯ ಕಂಡ ಪ್ರಭಾವಿ ರಾಜಕಾರಣಿ.
ಎಂ.ಜಿ.ರಾಮಚಂದ್ರನ್
ಮೊತ್ತ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಿನೆಮಾ ತಾರೆ, ತಾರೆಯರಿಗೆಲ್ಲ ಮೇಲ್ಪಂಕ್ತಿ.
ಶಿವಾಜಿ ಗಣೇಶನ್
ಇಂದಿರಾ ಗಾಂಧಿ ಕಾಲದಲ್ಲಿ ರಾಜ್ಯಸಭೆಯ ಸದಸ್ಯರಾಗಿದ್ದು, ನಂತರ ಜನತಾ ದಳ ಸೇರಿದರು.
ಜಯಲಲಿತಾ
ಎರಡು ಬಾರಿ ರಾಜ್ಯಸಭೆ ಸದಸ್ಯೆಯಾಗಿದ್ದ 'ಅಮ್ಮ', ಮನಸ್ಸು ಮಾಡಿದರೆ ಪ್ರಧಾನಿ ಪಟ್ಟಕ್ಕೂ ಟವೆಲ್ ಹಾಕಿದಳೇ!
ಚಿರಂಜೀವಿ
ಪ್ರಜಾರಾಜ್ಯಂ- ಕಾಂಗ್ರೆಸ್ ವಿಲೀನ ಮತ್ತು ಮಂತ್ರಿಗಿರಿಯ ವರ್ಚಸ್ಸು ಈ ಬಾರಿಯೂ ಮೆಗಾಸ್ಟಾರ್ ಅನ್ನು ಕಾಪಾಡುವಷ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


