ಬೈಟುಕಾಫಿ

ಮತಗಾನ

ಮತಗಾನ
Published On :

ಈ ಹಾಡು ಚುನಾವಣೆಗೆ ನೇರ ಸಂಬಂಧಿಸಿದ್ದಲ್ಲ. ಆದರೆ ಈ ಗೀತೆಯಲ್ಲಿ ಹೊಮ್ಮುವ ವ್ಯವಸ್ಥೆಯ ವಿರುದ್ಧದ ಆಕ್ರೋಶ ಅಸಹಾಯಕತೆ ಹಾಗೂ ರಾಜಕೀಯವನ್ನು ಚಕ್ರವ್ಯೂಹಕ್ಕೆ ಹೊಲಿಸಿರುವ ಪರಿ ಅಮೋಘ ಮತ್ತು ಅತ್ಯಂತ  ಪ್ರಭಾವಶಾಲಿ.  ಗೊತ್ತಿದ್ದೋ ಗೊತ್ತಿಲ್ಲದೆಯೋ ಒಮ್ಮೆ ಭ್ರಷ್ಟ ವ್ಯವಸ್ಥೆಯ ಭಾಗವಾಗಿ ಹೋದರೆ ಅದರಿಂದ ಹೊರಬರುವುದು ಅಸಾಧ್ಯ. ಅದು ಚಕ್ರವ್ಯೂಹದಲ್ಲಿ ಅಭಿಮನ್ಯು ಸಿಕ್ಕಿಕೊಂಡಂತೆಯೇ ಎಂಬುದನ್ನು ಪರಿಣಾಮಕಾರಿಯಾಗಿ ಈ ಹಾಡು ತೋರಿಸಿದೆ. ಶಂಕರ್ ಗಣೇಶ್‌ಸಂಗೀತದ ಈ ಗೀತೆಯಲ್ಲಿ ದಕ್ಷ ಪೋಲಿಸ್ ಅಧಿಕಾರಿಯೊಬ್ಬ ಹಲವು ಕಾರಣಗಳಿಂದ ಭ್ರಷ್ಟ ರಾಜಕೀಯ ವ್ಯಕ್ತಿಗಳ ಮುಷ್ಟಿಯಲ್ಲಿ ಸಿಲುಕುವಂತಾಗಿ ಅದರಿಂದ ಹೊರ ಬರಲಾಗದೆ ಒದ್ದಾಡುವ ಸನ್ನಿವೇಶವನ್ನು ಅಂಬರೀಶ್‌ರ ದ್ವಿಪಾತ್ರದ ಮೂಲಕ ಚಿತ್ರಿಸಲಾಗಿದೆ.
ಚಕ್ರವ್ಯೂಹ ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ದಾಹ
ಒಬ್ಬನ ತಿಂದೇ ಒಬ್ಬನು ಬದುಕುವ
ಒಬ್ಬನ ಕೊಂದೇ ಒಬ್ಬನು ಬಾಳುವ
ಚಕ್ರವ್ಯೂಹ ಇದು ಚಕ್ರವ್ಯೂಹ
ಮೋಸ ವಂಚನೆ ದ್ರೋಹಗಳೆಂಬ ಆಯುಧ ಹಿಡಿದವರು
ಮಾನವ ರಕ್ತವ ಗಟಗಟ ಕುಡಿಯುತ ತೇಗುವ ರಾಕ್ಷಸರು
ಸುತ್ತಲು ಕುಣಿಯುತಲಿರಲು ಕತ್ತಲು ಕಣ್ತುಂಬಿರಲು
ದಾರಿ ಎಲ್ಲಿದೆ? ನಿನಗೆ ದಾರಿ ಎಲ್ಲಿದೆ?
ಉಕ್ಕಿನ ಕೋಟೆಯ ನಡುವಲಿ ನಿಂತು ಯಾರನು ಕೂಗುವೆಯೋ
ಸೊಕ್ಕಿದ ಆನೆಗಳೆದುರಲಿ ಓರ್ವನೆ ನುಗ್ಗುತ ಸಾಯುವೆಯೋ
ಎದುರಿಸಿ ಉಳಿಯುವೆ ಏನು?ಚದುರಿಸಬಲ್ಲೆಯ ನೀನು?
ದಾರಿ ಎಲ್ಲಿದೆ? ನಿನಗೆ ದಾರಿ ಎಲ್ಲಿದೆ? ಚಕ್ರವ್ಯೂಹ ಇದು ಚಕ್ರವ್ಯೂಹ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.