ಬೈಟುಕಾಫಿ

ಮತಗಾನ

ಮತಗಾನ
Published On :

ಅಧಿಕಾರದ ಚುಕ್ಕಾಣಿ ಹಿಡಿದ ಭ್ರಷ್ಟರೆದುರಿನ ಪ್ರಜೆಗಳ, ಪ್ರಾಮಾಣಿಕ ಅಧಿಕಾರಿಗಳ ಅಸಹಾಯಕತೆಯ ಸ್ವಗತಗಳನ್ನು ನಿರುದ್ಯೋಗಿ ಕ್ರಾಂತಿಕಾರಿ ಯುವಕನೊಬ್ಬನ ದನಿಯಲ್ಲಿ ಹಾಡಾಗಿಸಿದ್ದು ಎಸ್.ಪಿ.ಭಾರ್ಗವಿ ಚಿತ್ರದಲ್ಲಿ. ದೇವರಾಜ್ ಮತ್ತು ಮಾಲಾಶ್ರೀ ಅಭಿನಯದ ಈ ಚಿತ್ರದಲ್ಲಿ, ರಾಜಕಾರಣಿಗಳು ಸರ್ಕಾರಿ ವ್ಯವಸ್ಥೆಗಳನ್ನು ಹಾಗೂ ಮಾನವ ಸಂಪನ್ಮೂಲವನ್ನು ಹೇಗೆಲ್ಲ ದುರುಪಯೋಗ ಪಡಿಸಿಕೊಳ್ಳುತ್ತಾರೆ ಹಾಗೂ ಪ್ರಾಮಾಣಿಕರು ಹೇಗೆಲ್ಲ ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಚಿತ್ರಣವಿದೆ. ಎಸ್.ಪಿ.ಬಿ ಹಾಡಿರುವ ಎಸ್.ಪಿ.ಬಿ. ಚಿತ್ರದ ಈ ಗೀತೆಗೆ ಹಂಸಲೇಖ ಸಂಗೀತ-ಸಾಹಿತ್ಯವಿದೆ. ಈ ಥರದ ಹಾಡುಗಳು ಮೇಲುನೋಟಕ್ಕೆ ಬೇಜವಾಬ್ದಾರಿ ಗೊಣಗಾಟ ಅನಿಸಿದರೂ, ಯುವಜನತೆ ಭ್ರಷ್ಟತೆ ವಿರುದ್ಧ ಸಿಡಿದು ಬದಲಾವಣೆ ತರುವ ಕಿಚ್ಚು ಹಚ್ಚುವಂತಿರುವುದು ಸುಳ್ಳಲ್ಲ.

ದೇಶದ್ ಕತೆ ಇಷ್ಟೇ ಕಣಮ್ಮೋ
ಇಲ್ಲಿ ಚಿಂತೆ ಮಾಡಿ ಲಾಭ ಇಲ್ಲಮ್ಮೋ
ಈ  ದೇಶದ್ ಕತೆ ಇಷ್ಟೇ ಕಣಮ್ಮೋ
ಇಲ್ಲಿ ಚಿಂತೆ ಮಾಡಿ ಲಾಭ ಇಲ್ಲಮ್ಮೋ
ಚಂಚಕ ಚಂ ಚಂ ಚಂಚಕ ಚಂ ಚಂ
ನ್ಯಾಯದ ಮನೆಗೀಗ್ಲೂ  ಎರ್ಡೆರ್ಡಂತೆ ಬಾಗ್ಲು
ಮುಂದೆ ಹೋಗಿ ಹಿಂದೆ ಬರೋ...  
ದೇಶದ್ ಕತೆ..
ಸರ್ಕಾರಿ ಬಟ್ಟೆ ಧರಿಸೋಕೆ ಅಷ್ಟೇ
ಗಟ್ಟಿಯಾಗಿ ಮಾತನಾಡಬೇಡ...ತಪ್ಪು
ನಿಷ್ಠೆ ಹೊರಗೆ ತೋರಬೇಡ...ತಪ್ಪು
ಬಂದೂಕು ಒಳಗೆ..ಸೆಲ್ಯೂಟು ತಲೆಗೆ
ಸತ್ಯ ಒಡೆದು ಹೇಳಬೇಡ...ತಪ್ಪು
ಕಲ್ಲಜಾಲವನ್ನು ಹಿಡಿಯಬೇಡ...ತಪ್ಪು
ಸರಿ ಇಲ್ಲಿ ತಪ್ಪು ತಪ್ಪೇ ಇಲ್ಲಿ ಒಪ್ಪು
ಸರಿ ತಪ್ಪು ಗೊತ್ತಿಲ್ದಿರೊ..
ದೇಶದ್ ಕತೆ ಇಷ್ಟೇ ಕಣಮ್ಮೋ  
ಚಮ್ಚಾಗೆ ಚಾಲ್ತಿ...ರಾಜಿಗೆ ಬಡ್ತಿ
ತುಟಿ ಭತ್ಯಕಾಗಿ ಮಾನ ಹಾಳು....ಕೇಳು
ಕೊಂಚ ಲಂಚಕ್ಕಾಗಿ ದೇಶ ಹಾಳು...ಕೇಳು
ಮಹಾರಾಜ ಹೋದ...ಮಹನೀಯ ಬಂದ
ಶಾಂತಿ ಎಂದ ಗಾಂಧಿಯನ್ನೇ ಕೊಂದ ..ನಂಬು
ವೋಟು ಕೊಟ್ಟ ಚಿಂದಿ ಬಟ್ಟೆ ಕೈಗೆ... ಚಂಬು
ನ್ಯಾಯ ನೋಡೋ ಕಣ್ಣು... ಅಯ್ಯೋ ನೀನು ಹೆಣ್ಣು
ಎದ್ದು ಚಂಡಿ ಆಗೋ ವರ್ಗೂ...  
ದೇಶದ ಕಥೆ ಇಷ್ಟೇ ಕಣಮ್ಮೋ
ಇಲ್ಲಿ ಚಿಂತೆ ಮಾಡಿ ಲಾಭ ಇಲ್ಲಮ್ಮೋ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.