ಮತಗಾನ

ಓಂ ಚಿತ್ರದ ಮೂಲಕ ಹೊಸ ಸಂಚಲನ ಮೂಡಿಸಿದ್ದ ಉಪೇಂದ್ರ ನಿರ್ದೇಶನದ ಚಿತ್ರ 'ಆಪರೇಶನ್ ಅಂತ'. ಎಸ್.ವಿ.ರಾಜೇಂದ್ರ ಸಿಂಗ್ ಅವರ 'ಅಂತ' ಚಿತ್ರದ ಎರಡನೇ ಭಾಗವಾಗಿ ಈ ಚಿತ್ರ ತೆರೆಕಂಡಿತ್ತು. ಭಾರತದ ಹದಗೆಟ್ಟ ರಾಜಕೀಯ ವ್ಯವಸ್ಥೆಯನ್ನು ಒಂದು ರೋಗಗ್ರಸ್ಥ ಮರಕ್ಕೆ ಹೋಲಿಸಿ, 'ಕೊಂಬೆ ರೆಂಬೆಗಳನ್ನು ಕಡಿದರೆ ಉಪಯೋಗವಿಲ್ಲ. ಬೇರುಸಮೇತ ಕಿತ್ತೊಗೆಯಬೇಕು' ಎಂಬ ಪರಿಕಲ್ಪನೆಯಲ್ಲಿ ಉಪೇಂದ್ರ ಈ ಚಿತ್ರವನ್ನು ರೂಪಿಸಿದ್ದರು. 'ಅಂತ'ದಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡ ಕಾರಣಕ್ಕೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಸುಶೀಲ್ಕುಮಾರ್, ಶಿಕ್ಷೆ ಮುಗಿಸಿ ಬಂದನಂತರ ಇನ್ನಷ್ಟು ಕುಲಗೆಟ್ಟು ಹೋಗಿರೋ ರಾಜಕೀಯ ಪರಿಸ್ಥಿತಿಯನ್ನು ಸರಿಪಡಿಸಲು ಮತ್ತೆ ಉಗ್ರ ಮಾರ್ಗವನ್ನು ಹಿಡಿಯುವುದು ಭಾಗ ಎರಡರ ಕಥೆ. 95ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ಅಂದಿನ ಹಲವು ರಾಜಕಾರಣಿಗಳ ನಕಲು ಪಾತ್ರಗಳನ್ನು ಸೃಷ್ಟಿಸಿದ್ದು ಸೆನ್ಸೇಷನಲ್ ಎನಿಸಿತ್ತು. ರಾಮಕೃಷ್ಣ ಹೆಗಡೆಯವರನ್ನು ಹೋಲುವ ಪಾತ್ರದಲ್ಲಿ ವಿ.ಮನೋಹರ್, ದೇವೇಗೌಡರನ್ನು ಹೋಲುವ ಪಾತ್ರದಲ್ಲಿ ವಿಜಯಸಾರಥಿ ಸೇರಿದಂತೆ, ಬಂಗಾರಪ್ಪ, ಆಡ್ವಾಣಿ, ಜಾಫರ್ ಷರೀಫ್, ಮೊಯ್ಲಿ ಮುಂತಾದ ಹಲವರ ತದ್ರೂಪಿಗಳಿದ್ದರು. 'ಲಂಕೇಶ್ ಪತ್ರಿಕೆ' ಇಲ್ಲಿ ಲಿಂಗೇಶ್ ಪತ್ರಿಕೆಯಾಗಿತ್ತು. ಲಂಕೇಶ್ರನ್ನೇ ಹೋಲುವ ಒಂದು ಪಾತ್ರವೂ ಅಲ್ಲಿತ್ತು. ಮಾಸ್ಟರ್ ಹಿರಣ್ಣಯ್ಯ, ಹಿರಣ್ಣಯ್ಯನಾಗಿಯೇ ಕಾಣಿಸಿಕೊಂಡಿದ್ದರು. ಈ ಹಾಡಿನಲ್ಲಿ ಅವರದೇ ಅಭಿನಯವಿದ್ದು, ಲಂಚಾವತಾರ ನಾಟಕದ ಸಿನಿಮಾ ರೂಪದಂತೆ ಈ ಹಾಡನ್ನು ಚಿತ್ರಿಸಲಾಗಿದೆ.
ಶೇಮ್ ಶೇಮ್ ಶೇಮ್
ಶೇಮ್ ಶೇಮ್ ಶೇಮ್
ಹಲ್ಕಾ ಕಂತ್ರಿ ಲೋಫರ್ಸ್
ಕಚಡಾ ತೊಟ್ಟಿ ಲೀಡರ್ಸ್
ನಾಚ್ಕೆ ಮಾನ ಇಲ್ಲ ಥೂ..
ಶೇಮ್ ಶೇಮ್ ಶೇಮ್
ಶೇಮ್ ಶೇಮ್ ಶೇಮ್
ಖಾದಿ ಟೋಪಿ ವೀರಪ್ಪನ್ಗೆ ರಕ್ಷಣೆ ಕೊಡೊ ಗೂಡು
ಮಿಲ್ಟ್ರಿ ಕೂಡ ಹಿಡೀಲಿಲ್ಲ ಎಂಥ ನಾಚ್ಕೆಗೇಡು
ರೈಲ್ವೆ ಮಂತ್ರಿ ಕಂಬಿ ಹೋದಲ್ಲೆಲ್ಲ ಜಾಗ ತಿಂದ
ವರ್ಷದ್ಮೆಹ್ತಾ ಸೆಂಟ್ರಲ್ಗೇನೇ ಕೋಟಿ ಕೊಟ್ಟೆ ಅಂದ
ಶೇರ್ ಶೇರ್ ಶೇರ್
ಶೇರ್ ಶೇರ್ ಶೇರ್
ಸೆಂಟ್ರಲ್ಗೊಂದು ಶೇರು
ಸ್ಟೇಟಿಗೊಂದು ಶೇರು
ಪಾರ್ಟಿ ಫಂಡಿಗಾಗಿ ಶೇರ್
ಶೇಮ್ ಶೇಮ್ ಶೇಮ್
ಸುಪ್ರೀಂಕೋರ್ಟಿಗಿಂತ ಇಲ್ಲಿ ಧರ್ಮವೇನೇ ಹೆಚ್ಚು
ಆದ್ರೂ ಕೂಡ ಜಾತ್ಯತೀತ ಅನ್ನೋದೆಂತ ಹುಚ್ಚು
ಧರ್ಮನ್ ರಾಜಕೀಯದಿಂದ ಬೇರೆ ಮಾಡು ಅಂದ್ರು
ಮಠದಲ್ ಕೋಟಿ ಬಚ್ಚಿಡೋಕೆ ಸ್ವಾಮಿ ಕಾಲಿಗ್ ಬಿದ್ರು
ಶೇಮ್ ಶೇಮ್ ಶೇಮ್
ತಿಂಗ್ಳಿಗ್ ಏಳೋ ಎಂಟೋ ಸಾವ್ರ ಸಂಬಳ ಈ ಪುಢಾರಿಗೆ
ಎಂತ ಹತ್ ಬಂಗ್ಲೆ ಸ್ವಿಸ್ ಬ್ಯಾಂಕಲ್ ಕೋಟಿ ಇಡೋ ಹೇಗೆ
ಇನ್ಕಮ್ ಟ್ಯಾಕ್ಸು ಸಿಬಿಐನ ಕಾಸಿಗ್ಕೊಳ್ಳೋ ಕಳ್ರು
ಇದನ್ ನೋಡ್ಕೊಂಡ್ ಸುಮ್ನಿರೋ ನೀವ್ಗಳೆಲ್ಲ ಷಂಡ್ರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


