ಮತ ವೈವಿಧ್ಯ
ಟವೆಲ್ ಧರಿಸಿ ಗಂಗೆಯಲ್ಲಿ ಮುಳುಗು ಹಾಕಿದ ಅರವಿಂದ ಕೇಜ್ರಿವಾಲರ ಭಂಗಿ, ಅವರಿಂದ ಮಹಿಳಾ ಮತಗಳನ್ನು ದೂರ ಮಾಡಲಿವೆ. ಅಂದು ಮಫ್ಲರ್, ಇಂದು ಟವೆಲ್!
- ಶೋಭಾ ಡೇ, ಅಂಕಣಕಾರ್ತಿ
ಇಂದಿರಾ ಗಾಂಧಿ ತಮ್ಮ ವಿರೋಧಿಗಳಲ್ಲಿ 'ವಿದೇಶಿ ಹಸ್ತ'ಗಳನ್ನು ಕಾಣುತ್ತಿದ್ದರು. ಈಗ ಮೋದಿ ತಮ್ಮ ವೈರಿಗಳಲ್ಲಿ 'ಪಾಕ್ ಏಜೆಂಟ್'ಗಳನ್ನು ಕಾಣುತ್ತಿದ್ದಾರೆ. ಇದರಲ್ಲೇನಾದರೂ ಸಾಮ್ಯ ಇದೆಯಾ?
- ರಾಜ್ ದೀಪ್ ಸರ್ದೇಸಾಯಿ, ಪತ್ರಕರ್ತ
ಹೀಗೂ ಆಗಿತ್ತು...
ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು 1951-52ರ ಡಿಸೆಂಬರ್ ಹಾಗೂ ಫೆಬ್ರವರಿ ತಿಂಗಳ ನಡುವೆ. ಆದರೆ, ಹಿಮಾಚಲಪ್ರದೇಶದಲ್ಲಿ ಈ ತಿಂಗಳಲ್ಲಿ ಮಂಜಿಗೆ ಹೆದರಿ ಜನ ಮತ ಹಾಕಲು ಬರೋದಿಲ್ಲವೆಂದು ಮೂರು ತಿಂಗಳ ಮೊದಲ ಇಲ್ಲಿ ಚುನಾವಣೆ ನಡೆಸಲಾಯಿತು. ಅಂದರೆ 1951, ಅಕ್ಟೋಬರ್ನಲ್ಲೇ ಮತದಾನ ನಡೆಯಿತು. ಪ್ರಕೃತಿಯ ಮುಂದೆ ಯಾವ ರಾಜಕೀಯ ನಾಟಕವೂ ನಡೆಯಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ಅಂದಹಾಗೆ, ದೇಶದ ಮೊಟ್ಟಮೊದಲ ಮತದಾರ ಶ್ಯಾಮ್ಚರಣ್ ಈ ಬಾರಿಯೂ ಮತದಾನ ಮಾಡುತ್ತಿರುವುದು ಒಂದು ವಿಶೇಷ.!
ಮೊದಲ ಚುನಾವಣೆಯ ಇನ್ನೊಂದು ವಿಶೇಷ ಅಂಕಿಅಂಶ ಹೀಗಿದೆ: ಸ್ವಾತಂತ್ರ ಭಾರತದ ಮೊದಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಒಟ್ಟು ಪಕ್ಷಗಳು 53. ಆಗಿನ ಲೋಕಸಭಾ ಸ್ಥಾನಗಳ ಸಂಖ್ಯೆ 498. ಸ್ಪರ್ಧಿಸಿದ ಅಭ್ಯರ್ಥಿಗಳ ಸಂಖ್ಯೆ 1,864. ಆಗ ಸ್ವತಂತ್ರ ಅಭ್ಯರ್ಥಿಗಳ ಸಂಖ್ಯೆ 533. ಇವರಲ್ಲಿ ಗೆದ್ದ ಸ್ವತಂತ್ರ ಅಭ್ಯರ್ಥಿಗಳ ಸಂಖ್ಯೆ 37.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

