ಸಹಜ ನಗುವಿನ ಅಸಹಜ ಗುಣ!
ಸ್ವಾಮಿ ವಿವೇಕಾನಂದರು ಸಹಜ ಹಾಸ್ಯಸ್ವಭಾವದವರು. ಅವರು ಸಹಜವಾಗಿ ಆಡುತ್ತಿದ್ದ ಮಾತುಗಳು ಕೇಳುಗರಲ್ಲಿ ನಗುವಿನಲೆಯನ್ನೇ ಎಬ್ಬಿಸಿಬಿಡುತ್ತಿದ್ದವು. ಅವರು ಏರುವ ಎತ್ತರಕ್ಕೆ, ಇಳಿಯುವ ಆಳಕ್ಕೆ ಏರಿಳಿಯಲಾಗದೆ ಹೊಯ್ದಾಟಕ್ಕೆ ಸಿಲುಕಿ ನಗುವಿನಲ್ಲಿ ಮುಳುಗಿಹೋಗುತ್ತಿದ್ದುದನ್ನು ಕಾಣುತ್ತೇವೆ. ಅಂತಹ ಸನ್ನಿವೇಶಗಳನ್ನು ಸೇವಿಯರ್ ನಿಧನದ ವಾರ್ತೆ ತಿಳಿದು ಹಿಮಾಲಯದ ತಪ್ಪಲಲ್ಲಿರುವ ಮಾಯಾವತಿ ಅದ್ವೈತಾಶ್ರಮಕ್ಕೆ ಭೇಟಿ ನೀಡಲು ಹೊರಟಾಗ ಕಾಣುತ್ತೇವೆ.
ಅದು ಡಿಸೆಂಬರ್. ಅತೀವ ಚಳಿ, ಪಯಣವೋ ಘೋರತಮ! ಕಥಗೋಡಮ್ನಿಂದ 65 ಮೈಲಿ ಕಾಲ್ನಡಿಗೆ ಪಯಣ. ಕೊರೆಯುವ ಚಳಿಯಲ್ಲಿ ಸ್ವಾಮೀಜಿಯನ್ನು ಮೇನೆಯಲ್ಲಿ ಕೂರಿಸಿಕೊಂಡು ಕೂಲಿಗಳು ಸಾಗುತ್ತಿದ್ದಾರೆ. ಸಂಜೆ ವೇಳೆಗೆ ತಾವು ತಲುಪಬೇಕಾದ ಸ್ಥಳಕ್ಕೆ ಸೇರದಿದ್ದಾಗ ಸಿಟ್ಟುಗೊಂಡ ಸ್ವಾಮೀಜಿ ರೇಗಾಡಿದರು. ಎಲ್ಲರೂ ಏನು ಮಾಡುವರೋ ಎಂದು ಉಸಿರುಬಿಗಿಹಿಡಿದು ನೋಡುತ್ತಿದ್ದಾರೆ. ಆಗ ಸ್ವಾಮೀಜಿ 'ಹೋಗಲಿ, ಈಗ ನೋಡಿ, ನನ್ನ ಬೆನ್ನು ಬಹಳ ಕೊರೆಯುತ್ತಿದೆ, ಸ್ವಲ್ಪ ತಿಕ್ಕುತ್ತೀಯಾ?' ಎಂದರು.
ಮಗು ಮನಸ್ಸು ಒಳಿತು ಕೆಡುಕು, ಪಾಪಪುಣ್ಯ, ರಾಗದ್ವೇಷಗಳಿಂದ ಮುಕ್ತವಾಗಿ ಸಹಜ ಲಹರಿಯಲ್ಲಿ ವಿಹರಿಸುತ್ತಿರುತ್ತದೆಯೋ ಹಾಗೆ ಸ್ವಾಮೀಜಿಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ತಮ್ಮ ಮನಸ್ಥಿತಿಯಂತೆಯೇ ಅವರು ಎಂದು ಭಾವಿಸಿ ಸೋಲುತ್ತಿದ್ದ ಅನುಭವಗಳು ಶಿಷ್ಯರನ್ನು ಸ್ವಾಮೀಜಿ ಹತ್ತಿರಕ್ಕೆ ಸೆಳೆಯುತ್ತಿದ್ದವು. ಅವರ ಸನಿಹವೇ ಜ್ಞಾನಾನುಭವಗಳ ಆಲಯವೆನಿಸುತ್ತಿತ್ತು. ಸ್ವಾಮೀಜಿಯ ಹೃದಯಾಂತರಾಳದ ಪ್ರಾಮಾಣಿಕತೆ, ತ್ಯಾಗದ ಪರಾಕಾಷ್ಠೆ, ಮಾನವಸೇವೆಯ ಹಂಬಲ ಶಿಷ್ಯರನ್ನು ಅವರ ಪದತಲದಲ್ಲಿ ಕೂಡಿಸುತ್ತಿತ್ತು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

