ನಾರದ - ಇಬ್ಬರು ಯೋಗಿಗಳು
ಜೀವನವನ್ನು ಪ್ರೀತಿಸು. ಬರುವುದನ್ನೆಲ್ಲ ಮುಗುಳ್ನಗೆಯಿಂದ ಸ್ವೀಕರಿಸು. ಇದೇ ಜೀವನದ ಯಶಸ್ಸಿನ ಗುಟ್ಟು ಎಂಬುದನ್ನು ಸ್ವಾಮಿ ವಿವೇಕಾನಂದರು ಈ ಕತೆಯ ಮೂಲಕ ಪ್ರಸ್ತುತಪಡಿಸಿದ್ದಾರೆ.
ಒಮ್ಮೆ ನಾರದ ಮಹರ್ಷಿ ಕಾಡಿನಲ್ಲಿ ಬರುತ್ತಿದ್ದ. ಕಾಡಿನ ಮಧ್ಯೆ ಒಂದು ಹುತ್ತವನ್ನು ನೋಡಿದ. ಹುತ್ತದ ತುದಿಯಲ್ಲಿ ಮನುಷ್ಯನ ತಲೆ ಕಾಣಿಸಿತು. ಅದು ಯೋಗಿಯ ತಲೆ! ನಾರದ, 'ಅಯ್ಯಾ, ಈ ಹುತ್ತದ ಮಧ್ಯೆ ಕುಳಿತು ಏನು ಮಾಡುತ್ತಿರುವೆ?' ಎಂದು ಕೂಗಿದ. 'ನಾರದ ಮಹರ್ಷಿಗಳೇ, ನಿಮ್ಮನ್ನು ಕಂಡದ್ದು ನನ್ನ ಅದೃಷ್ಟ. ನಾನು ಬಹಳ ವರ್ಷಗಳಿಂದ ತಪಸ್ಸು ಮಾಡುತ್ತಿರುವೆ. ನೀವೆಲ್ಲಿಗೆ ಹೋಗುತ್ತಿರುವಿರಿ?' ಎಂದ ಯೋಗಿ. ಭಗವಂತನನ್ನು ನೋಡಲು ವೈಕುಂಠಕ್ಕೆ ಹೊರಟಿದ್ದೇನೆ ಎಂದಾಗ, ಹಾಗಾದರೆ 'ನಾನಿನ್ನೂ ಇಲ್ಲಿ ಎಷ್ಟು ಕಾಲ ತಪಸ್ಸು ಮಾಡಬೇಕು? ಭಗವಂತನನ್ನು ಕಾಣುವುದು ಯಾವಾಗ? ಹುಟ್ಟು ಸಾವುಗಳಿಂದ ನನಗೆ ಬಿಡುಗಡೆ ಯಾವಾಗ? ಎಂದು ಭಗವಂತನಲ್ಲಿ ಕೇಳಿ' ಎಂದ. ನಾರದ ಆಗಲಿ ಎಂದ.
ಮುಂದೆ ಹೋದಾಗ ಕಾಡಿನ ಮಧ್ಯೆ ಜೋರಾಗಿ ಹಾಡಿಕೊಂಡು ಕುಣಿಯುತ್ತಿದ್ದ. ಆ ಯೋಗಿ ನಾರದನನ್ನು ಕಂಡು, ಓ ನಾರದರೆ, ತಮ್ಮನ್ನು ಕಂಡು ಬಹಳ ಸಂತೋಷವಾಯಿತು. ತಾವು ಎಲ್ಲಿಗೆ ಹೊರಟಿದ್ದೀರಿ? ಎಂದು ಕೇಳಿದ. ವೈಕುಂಠಕ್ಕೆ! ಎಂದಾಗ, ಹಾಗಾದರೆ ನಾರದರೆ, ಭಗವಂತನನ್ನು ನೋಡಲು ನನ್ನ ಮನಸ್ಸು ಶುದ್ಧವಾಗಬೇಕಾದರೆ ನಾನಿನ್ನೂ ಎಷ್ಟು ಸಲ ಹುಟ್ಟಬೇಕು? ಎಂದು ಭಗವಂತನನ್ನು ಕೇಳಿಕೊಂಡು ಬರುವಿರಾ? ಎಂದು ವಿನಂತಿಸಿದ. ನಾರದನು, ಖಂಡಿತವಾಗಿಯೂ ಕೇಳಿಕೊಂಡು ಬರುತ್ತೇನೆಂದು ಹೇಳಿ ವೈಕುಂಠದತ್ತ ನಡೆದ. ಯೋಗಿಗಳ ಪ್ರಶ್ನೆಗಳಿಗೆ ಭಗವಂತನ ಉತ್ತರಗಳು ಮುಂದಿನ ಸಂಚಿಕೆಯಲ್ಲಿ.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

