ಇದು ನಿತ್ಯ ಕ್ರಾಂತಿ ವಿಚಾರ
ಸ್ವಾಮಿ ವಿವೇಕಾನಂದರು ಬಯಸುವುದು, ಎಂದೋ ಒಂದು ದಿನ ಆಗುವ ಕ್ರಾಂತಿಯನ್ನಲ್ಲ ಉಳ್ಳವರ ಪ್ರೇರಣೆಯಿಂದ ಇಲ್ಲದವರು ಹರಿಸುವ ರಕ್ತಕ್ರಾಂತಿಯನ್ನಲ್ಲ, ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆಯುವ ದೌರ್ಜನ್ಯ, ಕ್ರೌರ್ಯದ ಕ್ರಾಂತಿಯನ್ನಲ್ಲ, ಉಳ್ಳವರನ್ನು ಕೊಚ್ಚಿ ಇಲ್ಲದವರು ಹಂಚಿ ತಿನ್ನುವ ಕ್ರಾಂತಿಯನ್ನಲ್ಲ. ಒಂದು ದೇಶದ ಇತಿಹಾಸ, ವ್ಯವಸ್ಥೆ ಒಂದು ದಿನದ ಕ್ರಾಂತಿಯಿಂದ ಬದಲಾಗುತ್ತದೆ ಎಂಬುದು ತಪ್ಪು ಗ್ರಹಿಕೆ. ಕ್ರಾಂತಿ ಎಂಬುದು ನಿತ್ಯ ಜನರ ಮನಸಿನಲ್ಲಾಗಬೇಕಾದ ಬದಲಾವಣೆ. ಚಿಂತನೆಯಲ್ಲಿ, ಗ್ರಹಿಕೆಯಲ್ಲಿ, ದೃಷ್ಟಿಕೋನದಲ್ಲಿ ಆಗಬೇಕಾದ ಬದಲಾವಣೆ. ಸ್ವಾಮೀಜಿ ಬಯಸುವುದು ಮನದೊಳಗಿನ ಮೌನಮಂಥನದಿಂದ ಉದಿಸುವ ಸತ್‌ಚಿಂತನೆಗಳ ನಿತ್ಯಕ್ರಾಂತಿಯನ್ನು.
ಸ್ವಾಮೀಜಿ ಈಗ ಇರುವ ವ್ಯವಸ್ಥೆಯನ್ನು ಸುಧಾರಣೆಗೊಳಿಸಬೇಕು ಎಂಬ ವಾದವನ್ನು ಒಪ್ಪುತ್ತಿರಲಿಲ್ಲ. ಬದಲಾವಣೆ ಹೊಸದಿಕ್ಕು, ಹೊಸಚಿಂತನೆ, ಹೊಸ ಇತಿಹಾಸದ ಮೂಲ ಸುಧಾರಣೆ ಹಳೆಕೊಳೆಯ ಶೂಲ ಮನಸ್ಸುಗಳು ಬದಲಾವಣೆಯಾಗದ ಹೊರತು ವ್ಯವಸ್ಥೆ ಬದಲಾಗದು. ಹಾಗಾಗಿ ಅಕ್ಷರಕ್ರಾಂತಿಯ ಮೂಲಕ ಬದಲಾವಣೆಯ ಹೊಸಗಾಳಿ ಬೀಸಬೇಕು ಎಂಬುದು ಅವರ ಆಶಯವಾಗಿತ್ತು. ಅನ್ನ, ಅರಿವೆ, ಆಸರೆ ಆರೋಗ್ಯ ಇವುಗಳೆಲ್ಲ ಸರ್ಕಾರ ಒದಗಿಸುವ ಸವಲತ್ತುಗಳಾಗದೆ, ಅಕ್ಷರಬಲದಂದ ಪಡೆದುಕೊಳ್ಳಬೇಕು. ಅಕ್ಷರ ಜ್ಞಾನವನ್ನು, ಜ್ಞಾನ ಚಿಂತನೆಯನ್ನು, ಚಿಂತನೆ ಅವಕಾಶಗಳನ್ನು, ಅವಕಾಶಗಳು ಯಶಸ್ಸನ್ನು ತಂದುಕೊಡುತ್ತವೆ. ಸ್ವಾವಲಂಬಿಯಾಗಿ ಬದುಕನ್ನು ನಿರ್ಮಿಸಿಕೊಳ್ಳುವ ವ್ಯಕ್ತಿ ಮಾತ್ರ ದೇಶದ ಆಸ್ತಿಯಾಗುತ್ತಾನೆ. ಹಾಗಾಗಿ ಅಕ್ಷರಕ್ರಾಂತಿಯೇ ಎಲ್ಲದಕ್ಕೂ ಮೂಲ.
ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

