'ಮೆದುಳಿನ ಆಹಾರ' ಯಾವುದು ಗೊತ್ತಾ?

ಮೆದುಳಿನ ಜತೆಗೆ ಅದಕ್ಕೆ ಸಂಬಂಧಿಸಿದ ನರವ್ಯೂಹ ಸಹ ಆರೋಗ್ಯಯುತವಾಗಿರಬೇಕು. ಸಂಶೋಧಕರ ಪ್ರಕಾರ ಆರೋಗ್ಯವಂತ ನರವ್ಯೂಹ ಎಂದರೆ, ಸ್ಪಷ್ಟವಾಗಿ ಮತ್ತು ಉಲ್ಲಾಸದಿಂದ ಯೋಚಿಸುವುದು. ಆಕ್ರೋಟು(ವಾಲ್ನಟ್)ಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ನರ ಮತ್ತು ಮೆದುಳು ಎರಡನ್ನೂ ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು. ಆಕ್ರೋಟನ್ನು 'ಮೆದುಳಿನ ಆಹಾರ' ಎಂದೇ ಪರಿಗಣಿಸಲಾಗಿದೆ. ಕಾಕತಾಳೀಯ ಎಂದರೆ ನಮ್ಮ ಮೆದುಳಿನಲ್ಲಿ ಎರಡು ಭಾಗಗಳಿರುವಂತೆ ಆಕ್ರೋಟು ಚಿಪ್ಪಿನ ಒಳಗಡೆಯೂ ಎರಡು ಬೀಜಗಳಿರುತ್ತವೆ. ವಾಲ್ನಟ್ನಲ್ಲಿ ಶೇ 15ರಿಂದ 20ರಷ್ಟು ಪ್ರೊಟೀನ್ ಇರುತ್ತದೆ. ಒಮೆಗಾ-6 ಕೊಬ್ಬು ಹೊಂದಿರುವ ಲಿನೊಲಿಯಿಕ್ ಮತ್ತು ಒಮೆಗಾ-3 ಕೊಬ್ಬು ಹೊಂದಿರುವ ಆಲ್ಫಾಲಿನೊಲಿಯಿಕ್ ರಾಸಾಯನಿಕಗಳು ಇರುತ್ತವೆ. ವಿಟಮಿನ್ 'ಇ', ವಿಟಮಿನ್ ಬಿ6 ಕೂಡ ಹೇರಳವಾಗಿರುತ್ತವೆ. ಇವೆಲ್ಲವೂ ನಮ್ಮ ನರವ್ಯೂಹವನ್ನು ಆರೋಗ್ಯಕರವಾಗಿ ಇಡುವಂಥವು.
ಮೆದುಳಿನ ಶೇ.60ರಷ್ಟು ಭಾಗ 'ಸ್ಟ್ರಕ್ಚರಲ್ ಫ್ಯಾಟ್' ಎನ್ನುವ ಕೊಬ್ಬಿನಿಂದ ಕೂಡಿರುತ್ತದೆ. ಮೆದುಳು ಸರಿಯಾಗಿ ಕಾರ್ಯನಿರ್ವಹಿಸಬೇಕಿದ್ದರೆ, ಮೆದುಳಿನ ದ್ರವ ಸಮತೋಲಿತ ಪ್ರಮಾಣದಲ್ಲಿ ಇರಬೇಕು ಅಂತಾದರೆ 'ಸ್ಟ್ರಕ್ಚರಲ್ ಫ್ಯಾಟ್'ಗೆ ಒಮೆಗಾ-3 ಕೊಬ್ಬು ಹೇರಳವಾಗಿ ಸರಬರಾಜು ಆಗಬೇಕು. ಆಕ್ರೋಟಿನಲ್ಲಿ ಒಮೆಗಾ-3 ಅಧಿಕ ಪ್ರಮಾಣದಲ್ಲಿ ಇರುವುದು ಕೂಡ ಇದನ್ನು 'ಮೆದುಳಿನ ಆಹಾರ' ಎಂದು ಪರಿಗಣಿಸಿರುವುದಕ್ಕೆ ಕಾರಣ ಇದ್ದಿರಬಹುದು. ವಾಸ್ತವದಲ್ಲಿ ಒಮೆಗಾ-3 ಕೊರತೆ ಖಿನ್ನತೆಗೆ ದೂಡುತ್ತವೆ, ತೀರಾ ಕೊರತೆ ಆದಾಗ ಹಸಿವೆಯೇ ಆಗದೆಯೂ ಇರಬಹುದು. ಆದರೆ ಆಕ್ರೋಟಿನಲ್ಲಿ ಒಮೆಗಾ-3 ಜತೆಗೆ ಇತರ ಪೋಷಕಾಂಶಗಳೂ ಇರುವುದರಿಂದ ಇದು ನಮ್ಮ ಮೂಡ್ ಅನ್ನು ಉದ್ದೀಪಿಸುತ್ತದೆ. ಜತೆಗೆ ಚೆನ್ನಾಗಿ ಹಸಿವಾಗುವಂತೆಯೂ ಮಾಡುತ್ತದೆ. ಬುದ್ಧಿಮತ್ತೆ ಹೆಚ್ಚಿಸುವುದರ ಜತೆಗೆ ಸದಾ ಉತ್ಸಾಹದಿಂದ ಇರುವಂತೆಯೂ ಪ್ರೇರೇಪಿಸುತ್ತದೆ.
ಖಿನ್ನತೆಯಿಂದ ಬಳಲುವವರಿಗೆ ಪ್ರೊಜಾಕ್ ಎನ್ನುವ ಔಷಧ ನೀಡುತ್ತಾರೆ. ಆ ಖಿನ್ನತೆ ನಿರೋಧಕ ಔಷಧ ಬೀರುವ ಪ್ರಭಾವವನ್ನೇ ಆಕ್ರೋಟು ಬೀರುತ್ತದೆ ಎನ್ನುವುದು ಸಂಶೋಧಕರ ಅಭಿಮತ. ಆದ್ದರಿಂದ ಆಕ್ರೋಟು ನಮ್ಮ ಡಯಟ್ನ ಭಾಗವಾಗಿರುವುದು ಒಳ್ಳೆಯದು. ಪ್ರೊಜಾಕ್ ಮತ್ತು ಆಕ್ರೋಟು- ಇವೆರಡೂ ನೇರವಾಗಿ ಮೂಡ್ ನಿಯಂತ್ರಿಸುವ ಸೆರೊಟಿನಿನ್ ಎನ್ನುವ ರಾಸಾಯನಿಕಕ್ಕೆ ಸಂಬಂಧಿಸಿದ್ದು. ಪ್ರೊಜಾಕ್ನಂಥ ಔಷಧಗಳ ರೀತಿಯಲ್ಲೇ ಆಕ್ರೋಟು ಸಹ ಸೆರೊಟಿನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಖಿನ್ನತೆ, ನಿದ್ರಾಹೀನತೆ, ಅತಿಯಾಗಿ ತಿನ್ನುವುದು, ಕಂಪಲ್ಸೀವ್ ಬಿಹೇವಿಯರ್ ಮೊದಲಾದ ಸಮಸ್ಯೆಗಳಿಗೂ ಆಕ್ರೋಟನ್ನು ಮದ್ದಿನ ರೂಪದಲ್ಲಿ ಬಳಸಬಹುದು.ಟಿ
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


